Gummata Nagari

Bijapur

ಬಬಲಾದ ನರ್ಸರಿಯಲ್ಲಿ ಕೃಷಿ ಅರಣ್ಯ ಕಾರ್ಯಾಗಾರ

 

ಇಂಡಿ: ಸಾಮಾಜಿಕ ಅರಣ್ಯ ವಲಯ ವತಿಯಿಂದ ಬಬಲಾದ ನರ್ಸರಿಯಲ್ಲಿ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ರೈತರಿಗೆ ಕೃಷಿ ಅರಣ್ಯದ ಕೌಶಲ್ಯ ಅಭಿವೃದ್ಧಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಾಗಾರವನ್ನು ಸಾಮಾಜಿಕ ಅರಣ್ಯ ವಿಭಾಗ ವಿಜಯಪೂರದ ಉಪ ಅರಣ್ಯ ಸಂರಕ್ಷಣಾಧಿಕಾರಿ ವನಿತಾ ರವರು ಉದ್ಘಾಟಿಸಿದರು.

ಇಂಡಿ ಸಾಮಾಜಿಕ ಅರಣ್ಯ ವಲಯದ ವಲಯ ಅರಣ್ಯಾಧಿಕಾರಿ ಶ್ರೀ ಮಂಜುನಾಥ ಧುಳೆ ಅಧ್ಯಕ್ಷತೆ ವಹಿಸಿದ್ದರು. ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಮಹಾದೇವಪ್ಪ ಏವೂರ, ರೇಷ್ಮೆ ಇಲಾಖೆಯ ತೇಲಿ, ಉಪ ವಲಯ ಅರಣ್ಯಾಧಿಕಾರಿ ಲಕ್ಷ್ಮಣ ನಾದ, ಜೇಂದ್ರ ಹುನ್ನೂರ ಉಪಸ್ಥಿತರಿದ್ದರು.
ಸಂಪನ್ಮೂಲ ವ್ಯಕ್ತಿಗಳಾಗಿ ಪ್ರವೀಣ್ ಹಾಗೂ ದಾಂಡೇಲಿ ಪೇಪರ್ ಮಿಲ್ನ ಅಧಿಕಾರಿ ಇಮ್ರಾನ್ ರವರು ಭಾಗವಹಿಸಿದ್ದರು.

ಈ ಕಾರ್ಯಾರದಲ್ಲಿ ಬಬಲಾದ, ಹಳಗುಣಕಿ, ಸೊನಕನಳ್ಳಿ, ಬರಡೋಲ, ಬೋಳೆಗಾಂವ, ಜೇವೂರ ಮುಂತಾದ ಗ್ರಾಮಗಳಿಂದ ನೂರಾರು ರೈತರು ಭಾಗವಹಿಸಿದ್ದರು.
ಕೃಷಿಯೊಂದಿಗೆ ಅರಣ್ಯ ಬೆಳೆಸುವುದು, ಜೇನು ಸಾಕಾಣಿಕೆ, ಕೋಳಿ ಸಾಕಾಣಿಕೆ, ಹಣ್ಣಿನ ಬೆಳೆಗಳನ್ನು ಬೆಳೆಯುವುದು, ಭೂಮಿಯ ಫಲವತ್ತತೆ ಹೆಚ್ಚಿಸುವ ಬಗ್ಗೆ ಸಂಪನ್ಮೂಲ ವ್ಯಕ್ತಿಗಳು ತಿಳಿಸಿಕೊಟ್ಟರು. ರೈತರೊಂದಿಗೆ ನೇರ ಸಂವಾದ ನಡೆಯಿತು. ನಂತರ ಭಾಗವಹಿಸಿದ ರೈತರಿಗೆ ಟೋಪಿ ಮತ್ತು ನೀರಿನ ಬಾಟಲ್ಗಳನ್ನು ವಿತರಿಸಲಾಯಿತು. ಅರಣ್ಯ ಇಲಾಖೆಯ ಡಿ ಎ ಮುಜಗೊಂಡ ಸ್ವಾಗತಿಸಿ, ವಂದಿಸಿದರು.

Most Popular

To Top
error: Content is protected !!