Gummata Nagari

Bijapur

ಗ್ಯಾರಂಟಿಗಳಿoದ ರಾಜ್ಯ ದಿವಾಳಿಯಾಗಿಲ್ಲ: ಶಾಸಕ ನಾಡಗೌಡ

 

ತಾಳಿಕೋಟಿ: ಪಟ್ಟಣದ ನಮ್ಮ ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿ ಯೋಜನೆಗಳು ರಾಜ್ಯದ ಬಡ ದೀನ ದಲಿತ ಹಾಗೂ ವಿಶೇಷವಾಗಿ ಮಹಿಳೆಯರನ್ನು ಸಬಲೀಕರಿಸಿ ಅವರ ಬದುಕಿಗೆ ಶಕ್ತಿಯನ್ನು ತುಂಬಲು ಸಹಕಾರಿಯಾಗಿ ದೇಶದ ಜನರ ಮೆಚ್ಚುಗೆಗೆ ಪಾತ್ರವಾಗಿವೆ ಎಂದು ಕರ್ನಾಟಕ ಸರ್ಕಾರದ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಹಾಗೂ ಶಾಸಕ ಸಿ ಎಸ್ ನಾಡಗೌಡ ಅಪ್ಪಾಜಿ ಹೇಳಿದರು.
ಪಟ್ಟಣದ ಶ್ರೀ ಸಂಗಮೇಶ್ವರ ಸಭಾಭವನದಲ್ಲಿ ಬ್ಲಾಕ್ ಕಾಂಗ್ರೆಸ್ ಕಮಿಟಿ ವತಿಯಿಂದ ಹಮ್ಮಿಕೊಂಡ ಗ್ಯಾರಂಟಿ ಯೋಜನೆ ಫಲಾನುಭವಿಗಳ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿ, ಗ್ಯಾರಂಟಿ ಯೋಜನೆಗಳಿಂದಾಗಿ ರಾಜ್ಯ ದಿವಾಳಿಯಾಗುತ್ತದೆ ಎಂದು ಬಿಜೆಪಿ ಅವರು ಸುಳ್ಳು ಆರೋಪವನ್ನು ಮಾಡುತ್ತಿದ್ದಾರೆ ರಾಜ್ಯದ ಆರ್ಥಿಕ ಸ್ಥಿತಿ ಸುಭದ್ರವಾಗಿದೆ ಅಭಿವೃದ್ಧಿಯ ಕಾರ್ಯಗಳು ನಡೆಯುತ್ತಲೇ ಇವೆ ಅವರ ಮಾತುಗಳನ್ನು ನಂಬಬೇಡಿ ಬರಲಿರುವ ಲೋಕಸಭಾ ಚುನಾವಣೆಯಲ್ಲಿ ತಕ್ಕ ಉತ್ತರವನ್ನು ನೀವು ಅವರಿಗೆ ಕೊಡಬೇಕು ಎಂದರು.

ಕಾಂಗ್ರೆಸ್ ಪಕ್ಷದ ಜಿಲ್ಲಾ ಅಧ್ಯಕ್ಷ ಹಾಗೂ ಮಾಜಿ ಶಾಸಕ ರಾಜು ಆಲಗೂರ ಮಾತನಾಡಿ ಕಾಂಗ್ರೆಸ್ ಪಕ್ಷವು ಕಳೆದ ಚುನಾವಣೆಯ ಸಮಯದಲ್ಲಿ ರಾಜ್ಯದ ಜನರಿಗೆ ನೀಡಿದ ಐದು ಗ್ಯಾರಂಟಿ ಭರವಸೆಗಳನ್ನು ಜಾರಿಗೆ ತಂದು ಕೊಟ್ಟವಚನವನ್ನು ಉಳಿಸಿಕೊಂಡಿದೆ ಇದು ನುಡಿದಂತೆ ನಡೆಯುವ ಸರ್ಕಾರ ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರವು ದೇಶದ ಜನರಿಗೆ ಕೊಟ್ಟ ಆಶ್ವಾಸನೆಗಳನ್ನು ಜಾರಿಗೆ ತರಲು ವಿಫಲವಾಗಿದೆ ಇದನ್ನು ಮರೆಮಾಚಲು ಧರ್ಮದಂಥಹ ಸೂಕ್ಷ್ಮ ವಿಷಯವನ್ನು ಬಳಸಿಕೊಳ್ಳುತ್ತಿದೆ. ಈ ಬಾರಿ ಲೋಕಸಭಾ ಚುನಾವಣೆಗೆ ವಿಜಯಪುರ ಕ್ಷೇತ್ರಕ್ಕೆ ಪಕ್ಷ ನನಗೆ ಟಿಕೆಟ್ ಘೋಷಿಸಿದೆ ನನಗೆ ನಿಮ್ಮೆಲ್ಲರ ಆಶೀರ್ವಾದ ಬೇಕು ಎಂದರು.

ಪಕ್ಷದ ಮುಖಂಡರಾದ ಶಿವಶಂಕರ ಹಿರೇಗೌಡರ. ಬಿ ಎಸ್.ಪಾಟೀಲ (ಯಾಳಗಿ). ಡಾ. ಪ್ರಭುಗೌಡ ಬಿರಾದಾರ (ಲಿಂಗದಳ್ಳಿ) ವಿದ್ಯಾರಾಣಿ ತುಂಗಳ ಹಾಗೂ ರಾಜು ರಾಯ್ಗೊಂಡ ಮಾತನಾಡಿದರು.

ಈ ಸಮಯದಲ್ಲಿ ಮುಸ್ಲಿಂ ಧಾರ್ಮಿಕ ಮುಖಂಡ ಸಯ್ಯದ ಶಕೀಲ್ ಅಹಮದ ಖಾಜಿ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ. ಮಹಬೂಬ ಚೋರ ಗಸ್ತಿ. ಪ್ರಭುಗೌಡ ಮದರಕಲ್. ನಿವೃತ್ತ ಪೊಲೀಸ ವರಿಷ್ಠಾಧಿಕಾರಿ ಎಸ್. ಬಿ. ಕಟ್ಟಿಮನಿ. ಕಾಸಿಮ್ ಪಟೇಲ ಪಾಟೀಲ. ಶಿವಕುಮಾರ ದೇಶಮಾನೆ. ಸುರೇಶಗೌಡ ನಾಡಗೌಡ.(ಬಿಜಲಬಾವಿ) ಸಿದ್ದನಗೌಡ ಪಾಟೀಲ (ನಾವದಗಿ). ಚಿನ್ನುಧಣಿ ಬಸರಕೋಡ.ಶರಣುಧಣಿ ದೇಶಮುಖ. ಸಂಗನಗೌಡ ಅಸ್ಕಿ. ಇಬ್ರಾಹಿಂ ಮನ್ಸೂರ ಪುರಸಭೆ ಸದಸ್ಯರಾದ ಅಕ್ಕಮಹಾದೇವಿ ಕಟ್ಟಿಮನಿ. ಎಂಕೆ ಪಟ್ಟಣಶೆಟ್ಟಿ ಪರಶುರಾಮ್ ತಂಗಡಗಿ ಮುಸ್ತಫ ಚೌಧರಿ ಡಿವಿ ಪಾಟೀಲ. ಮೋದಿನ ನಗಾರ್ಚಿ. ಪುರಸಭೆ ಮಾಜಿ ಅಧ್ಯಕ್ಷೆ ನೀಲಮ್ಮ ಪಾಟೀಲ. ಶೋಭಾ ಶಳ್ಳಗಿ. ರಮೀಜಾ ನದಾಫ. ಅಶ್ವಿನಿ ಪಾಟೀಲ. ರಫೀಕ ಬೇಪಾರಿ ಮತ್ತಿತರರು ಇದ್ದರು.
ವಿಜಯಕರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Most Popular

To Top
error: Content is protected !!