Gummata Nagari

Bijapur

ಲಚ್ಯಾಣದಲ್ಲಿ ಕೊಳವೆ ಬಾವಿಗೆ ಬಿದ್ದ ಬಾಲಕ: ಸಾವು ಬದುಕಿನ ನಡುವೆ ಹೋರಾಟ

 

ಬಿಜಾಪುರ: ಜಮೀನಿನಲ್ಲಿ ಆಟವಾಡುತ್ತಾ ಇದ್ದ 14 ತಿಂಗಳ ಬಾಲಕನೊಬ್ಬ ತೆರೆದ ಕೊಳವೆ ಬಾವಿ ಬಿದ್ದು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಘಟನೆ ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದ ಇಂಡಿ ರಸ್ತೆ ಜಮೀನಿನಲ್ಲಿ ಬುಧವಾರ ಸಂಜೆ ನಡೆದಿದೆ.

ಈ ಘಟನೆಯಲ್ಲಿ ಗ್ರಾಮದ ಅಡವಿ ವಸ್ತಿ ಕುಟುಂಬದ ಸಾತ್ವಿಕ್ ಸತೀಶ ಮುಜಗೊಂಡ ಎಂಬ ಮುದ್ದು ಬಾಲಕ ಕೊಳವೆ ಬಾವಿಗೆ ಬಿದ್ದಿದ್ದಾನೆ. ತಮ್ಮ ಜಮೀನಿನಲ್ಲಿ ಸಹಜವಾಗಿ ಆಟವಾಡುತ್ತಿದ್ದ ಬಾಲಕ ಸಂಜೆ 5 ಗಂಟೆಯ ಸುಮಾರಿಗೆ ತೆರೆದ ಕೊಳವೆ ಬಾವಿಗೆ ಬಿದ್ದಿದ್ದಾನೆ. ಇತ್ತ ಕುಟುಂಬದ ಜನರ ಆಕ್ರಂದನ ಮುಗಿಲು ಮುಟ್ಟಿದೆ.

ಎಂದು ಕಂಡರಿಯದ ಈ ಘಟನೆಯಿಂದ ಗ್ರಾಮದ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಈ ಘಟನೆಯ ಸುದ್ದಿ ತಿಳಿದು ಇಂಡಿ ಪಟ್ಟಣದ ಅಗ್ನಿ ಶಾಸಕ ದಳದ ಸಿಬ್ಬಂದಿ ದೌಡಾಯಿಸಿ, ಕೊಳವೆ ಬಾವಿಗೆ ಆಕ್ಸಿಜನ್ ಪೈಪ್ ಬಿಟ್ಟು ಬಾಲಕನ ರಕ್ಷಣೆಗೆ ಧಾವಿಸಿದ್ದಾರೆ.

ಇದಲ್ಲದೆ ಗ್ರಾಮೀಣ ಠಾಣೆಯ ಪೊಲೀಸರು ಸ್ಥಳಕ್ಕೆ ದೌಡಾಯಿಸಿ, ಜನರನ್ನು ಚದುರಿಸಲು ಹರಸಾಹಸ ನಡೆಸಿದ್ದಾರೆ. ಈ ಸುದ್ದಿ ತಿಳಿದ ಸ್ಥಳಿಯ ಹಾಗೂ ಸುತ್ತಮುತ್ತಲ ಗ್ರಾಮದ ಜನರು ಸ್ಥಳಕ್ಕೆ ದೌಡಾಯಿಸಿ ಈ ದೃಶ್ಯವನ್ನು ನೋಡಿ ದಂಗಾಗಿದ್ದಾರೆ. ಬಲ್ಲ ಮೂಲಗಳ ಪ್ರಕಾರ ಬಾಲಕನ ಕೈ ಕಾಲು ಆಡುತ್ತಿವೆ ಎಂದು ತಿಳಿದು ಬಂದಿದೆ.

ಈ ಘಟನೆಗೆ ಹಲವರು ಮಮ್ಮಲ ಮರುಗಿದ್ದಾರೆ. ಹೇಗಾದರೂ ಮಾಡಿ ಬಾಲಕ ಬದುಕಿ ಬರಲಿ ಎಂದು ಸ್ಥಳಿಯ ಆರಾದ್ಯ ದೇವ ಲಚ್ಯಾಣದ ಶ್ರೀ ಸಿದ್ಧಲಿಂಗ ಮಹಾರಾಜರಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ.

Most Popular

To Top
error: Content is protected !!