Gummata Nagari

Bijapur

ಸಾತ್ವಿಕ್ ಆರೋಗ್ಯ ನೋಡಿ ವೈದ್ಯರೇ ಶಾಕ್!

ಬಿಜಾಪುರ: ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ತೆರೆದ ಕೊಳವೆ ಬಾವಿಗೆ ಬಿದ್ದಿದ್ದ ಎರಡು ವರ್ಷದ ಪುಟ್ಟ ಕಂದಮ್ಮ ಸಾತ್ವಿಕ್ ಬದುಕಿ ಬಂದಿದೆ.
ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಮತ್ತು ಅಗ್ನಿ ಶಾಮಕ ಸಿಬ್ಬಂದಿ ಸತತ 20 ಗಂಟೆಗಳ ಕಾಲ ಸತತ ತೀವ್ರ ಕಾರ್ಚರಣೆ ನಡೆಸಿ ಸಾತ್ವಿಕ್‌ನನ್ನು ಜೀವಂತವಾಗಿ ಆಚೆ ತಂದಿದ್ದಾರೆ. 20 ಗಂಟೆಗಳ ಕಾಲ ಅನ್ನ, ನೀರು, ಗಾಳಿ, ಬೆಳಕು ಇಲ್ಲದೇ 14 ತಿಂಗಳ ಮಗು ಬದುಕುಳಿದಿದ್ದೇ ಒಂದು ದೊಡ್ಡ ಪವಾಡ ಎಂದು ಸ್ವತಃ ವೈದ್ಯರೇ ಅಚ್ಚರಿಗೊಂಡಿದ್ದಾರೆ. ಇದೊಂದು ವೈದ್ಯಕೀಯ ಕ್ಷೇತ್ರಕ್ಕೆ ಸವಾಲು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸತತ 20 ಗಂಟೆಗಳ ಕಾಲ ಕಾರ್ಚಚರಣೆ ನಡೆಸಿ ಸಾತ್ವಿಕ್‌ನನ್ನು ಜೀವಂತವಾಗಿ ಹೊರತಂದು ನೇರವಾಗಿ ಇಂಡಿ ಜಿಲ್ಲಾಸ್ಪತ್ರೆಗೆ ರವಾನಿಸಲಾಯ್ತು. ಬಳಿಕ ಇಂಡಿ ತಾಲೂಕು ವೈದ್ಯಾಧಿಕಾರಿ ಅರ್ಚನಾ ಕುಲಕರ್ಣಿ ಸೇರಿದಂತೆ ಅವರ ಸಿಬ್ಬಂದಿ, ಆಕ್ಸಿಜನ್, ಪಲ್ಸ್ ರೇಟ್ ಸೇರಿದಂತೆ ಮಗುವಿನ ಆರೋಗ್ಯ ಸ್ಥಿತಿಯನ್ನು ಪರಿಶೀಲನೆ ಮಾಡಿದರು. ಬಳಿಕ ಮಗುವಿಗೆ ಏನು ಗಾಯಗಳಾಗಿಲ್ಲ. ಸಾತ್ವಿಕ್ ಅರಾಮಾಗಿದ್ದಾನೆ ಎಂದು ಅರ್ಚನಾ ಕುಲಕರ್ಣಿ ಮಾಧ್ಯಮಗಳಿಗೆ ಸ್ಪಷ್ಟಪಡಿಸಿದರು. ಅಲ್ಲದೇ ಮಗುವಿನ ಆರೋಗ್ಯ ಕಂಡು ವೈದ್ಯರೇ ಶಾಕ್ ಆಗಿದ್ದಾರೆ.

ಮಗುವಿನ ಆರೋಗ್ಯ ತಪಾಸಣೆ ಬಳಿಕ ಸಿಟಿ ಸ್ಕ್ಯಾನ್ ಮಾಡಿಸಲು ಸಾತ್ವಿಕ್‌ನನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಯ್ತು. ಇನ್ನು ಸಾತ್ವಿಕನ ಆರೋಗ್ಯ ತಪಾಸಣೆ ಮಾಡಿದ ಇಂಡಿ ಆಸ್ಪತ್ರೆ ವೈದ್ಯಾಧಿಕಾರಿ ಅರ್ಚನಾ ಕುಲಕರ್ಣಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಸಾತ್ವಿಕ ಆರಾಮವಾಗಿದ್ದಾನೆ. ತಲೆ ಕೆಳಗಾಗಿ ಬಿದ್ದಿರುವ ಹಿನ್ನೆಲೆ ಸಿಟಿ ಸ್ಕ್ಯಾನ್ ಮಾಡಲು ವಿಜಯಪುರ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದೆ. ಇದೊಂದು ವೈದ್ಯಕೀಯ ಕ್ಷೇತ್ರಕ್ಕೆ ಸವಾಲು. ಪವಾಡ ರೀತಿಯಲ್ಲಿ ಸಾತ್ವಿಕ ಬದುಕುಳಿದಿದ್ದಾನೆ ಎಂದು ಎಚ್ಚರಿ ವ್ಯಕ್ತಪಡಿಸಿದರು.

ನಿಜ 20 ಗಂಟೆಗಳ ಕಾಲ ನೀರು, ಅನ್ನ, ಗಾಳಿ-ಬೆಳಕು ಇಲ್ಲದೇ ದೊಡ್ಡವರಿಗೆ ಇರಲು ಆಗುವುದಿಲ್ಲ. ಏನೋ ಸಸ್ತು, ಅಸ್ವಸ್ಥಗೊಳ್ಳುತ್ತಾರೆ. ಇಂತರದಲ್ಲಿ ಕೇವಲ ಎರಡೇ ಎರಡು ವರ್ಷದ ಮಗು ಸಾತ್ವಿಕ್, ಬರೋಬ್ಬರಿ ಇಪ್ಪತ್ತು ಗಂಟೆಗಳ ಕಾಲ ನೀರು, ಅನ್ನ, ಗಾಳಿ-ಬೆಳಕು ಇಲ್ಲದೇ ಬದುಕಿ ಬಂದಿರುವುದೇ ವಿಸ್ಮಯ. ಅದರಲ್ಲೂ ಆ ಒಂದು ಚಿಕ್ಕ ಪೈಪಿನೊಳಗೆ ಸ್ವಲ್ಪ ಅಲುಗಾಡಲು ಆಗಲ್ಲ. ಅಂತರದಲ್ಲಿ ಸ್ವಾತ್ವಿಕ್ ಬದುಕಿ ಬಂದಿದ್ದಾನೆ. ಇನ್ನೊಂದು ವಿಶೇಷ ಅಂದ್ರೆ ಸಾತ್ವಿಕ್ ಆರೋಗ್ಯದಲ್ಲಿ ಏನು ವ್ಯತ್ಯಾಸ ಕಂಡುಬAದಿಲ್ಲ. ಸುಸ್ತು. ಅಸ್ವಸ್ಥತೆ ಬಳಲುತ್ತಿರುವುದು ಕಂಡುಬAದಿಲ್ಲದಿರುವುದೇ ಒಂದು ವೈದ್ಯರಿಗೆ ಅಚ್ಚರಿಯಾಗಿದೆ.

ಜಿಲ್ಲೆಯ ಇಂಡಿ ತಾಲೂಕು ಲಚ್ಯಾನ ಗ್ರಾಮದಲ್ಲಿ 2 ವರ್ಷದ ಪುಟ್ಟ ಕಂದ ಸಾತ್ವಿಕ್ ನಿನ್ನೆ(ಏಪ್ರಿಲ್ 04) ಸಂಜೆ 5.30ರ ಸುಮಾರಿಗೆ ಆಟವಾಡುತ್ತ ತೆರೆದ ಕೊಳವೆ ಬಾವಿಗೆ ಬಿದ್ದಿದ್ದ. 16 ಅಡಿ ಆಳದಲ್ಲಿ ಸಿಲುಕಿದ್ದ. ಬಳಿಕ ವಿಷಯ ತಿಳಿಯುತ್ತಿದ್ದಂತೆಯೇ ತಾಲೂಕು ಮತ್ತು ಜಿಲ್ಲಾಡಳಿ ಅಗ್ನಿ ಶಾಮಕ ದಳ, ಪೊಲೀಸ್ ಜೊತೆ ಘಟನಾ ಸ್ಥಳಕ್ಕೆ ಆಗಮಿಸಿತ್ಉ. ಬಳಿಕ ಎನ್‌ಡಿಆರ್‌ಎಫ್ ಹಾಗೂ ಎಸ್‌ಡಿಆರ್‌ಎಫ್ ಸಿಬ್ಬಂದಿ ಮಗು ರಕ್ಷಣೆಗೆ ಸಮರೋಪಾದಿಯಲ್ಲಿ ರಾತ್ರಿ ಇಡೀ ಕಾರ್ಯಾಚರಣೆ ನಡೆಸಿತ್ತು. ಇತ್ತ ಗ್ರಾಮಸ್ಥರು ಮಾತ್ರವಲ್ಲ ಇಡೀ ಕರುನಾಡು ಸಹ ಸಾತ್ವಿಕನಿಗಾಗಿ ಪ್ರಾರ್ಥನೆ ಮಾಡಿತ್ತು. ಅಂತಿಮವಾಗಿ ಸಾತ್ವಿಕ್ 20 ಗಂಟೆಗಳ ನಂತರ ಸಾವನ್ನು ಗೆದ್ದು ಆಚೆ ಬಂದಿದ್ದಾನೆ.

Most Popular

To Top
error: Content is protected !!