Gummata Nagari

Headlines

ರಾಜ್ಯಕ್ಕೆ ಅಂಕಿತಾ ಟಾಪರ್ | ಬಾಗಲಕೋಟೆಗೆ 13ನೇ ಸ್ಥಾನ

 

ಬಾಗಲಕೋಟೆ: 2024ರ ಎಸ್.ಎಸ್.ಎಲ್.ಸಿ ಪರೀಕ್ಷಾ ಫಲತಾಂಶ ಗುರುವಾರ ಪ್ರಕಟವಾಗಿದ್ದು, ಬಾಗಲಕೋಟೆ ಜಿಲ್ಲೆ ಶೇ.77.92 ರಷ್ಟು ಫಲಿತಾಂಶ ಪಡೆಯುವ ಮೂಲಕ ರಾಜ್ಯದಲ್ಲಿ 13ನೇ ಸ್ಥಾನ ಪಡೆದುಕೊಂಡಿದೆ ಎಂದು ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಿ.ಕೆ.ನಂದನೂರ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ 14954 ಬಾಲಕರು ಮತ್ತು 15492 ಬಾಲಕಿಯರು ಸೇರಿ ಒಟ್ಟು 30446 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಈ ಪೈಕಿ 11044 ಬಾಲಕರು, 13415 ಬಾಲಕಿಯರು ಸೇರಿ ಒಟ್ಟು 24459 ವಿದ್ಯಾರ್ಥಿಗಳು ತೇರ್ಗಡೆ ಹೊಂದಿರುತ್ತಾರೆ. ಈ ಬಾರಿಯು ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಬಾಲಕರು ಶೇ.73.85 ರಷ್ಟು ತೇರ್ಗಡೆ ಹೊಂದಿದರೆ, ಬಾಲಕಿಯರು ಶೇ.86.59 ರಷ್ಟು ತೇರ್ಗಡೆ ಹೊಂದಿರುತ್ತಾರೆ. ಕಳೆದ 2022-23ನೇ ಸಾಲಿನಲ್ಲಿ ಶೇ.84.21 ಫಲಿತಾಂಶ ಪಡೆಯುವ ಮೂಲಕ 27ನೇ ಸ್ಥಾನ ಪಡೆದುಕೊಂಡರೆ, 2023-24ನೇ ಸಾಲಿನಲ್ಲಿ ಶೇ.77.92 ರಷ್ಟು ಫಲಿತಾಂಶ ಪಡೆಯುವ ಮೂಲಕ 13ನೇ ಸ್ಥಾನ ಪಡೆದುಕೊಂಡಿದೆ. ಶೇಖಡಾವಾರು ಫಲಿತಾಂಶದಲ್ಲಿ ಕಳೆದ ಸಾಲಿನಿಂದ ಈ ಸಾಲಿಗೆ ಹೋಲಿಸಿದರೆ ಕಡಿಮೆ ಇದ್ದರೂ ಸ್ಥಾನದಲ್ಲಿ ಉತ್ತಮ ಸಾಧನೆ ಮಾಡಲಾಗಿದೆ.
625ಕ್ಕೆ 625 ಅಂಕ ಪಡೆದ ಮುಧೋಳ ತಾಲೂಕಿನ ಮೆಳ್ಳಿಗೇರಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿ ಅಂಕಿತಾ ಬಸಪ್ಪ ಕೊಣ್ಣೂರ ಇಡೀ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡು ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾರೆ. ಅಂಕಿತಾ ರಾಜ್ಯಕ್ಕೂ ಜಿಲ್ಲೆಗೂ ಪ್ರಥಮ ಸ್ಥಾನ ಪಡೆದುಕೊಂಡರೆ, 625ಕ್ಕೆ 622 ಅಂಕ ಪಡೆದ ಮುಧೋಳನ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿ ಶೃತಿ ಹಂಚಾಟೆ, ಗುಳೇದಗುಡ್ಡ ಸರಕಾರಿ ಬಾಲಕಿಯರ ಪ್ರೌಢಶಾಲೆಯ ವಿದ್ಯಾರ್ಥಿ ಮಿನಾಜ ಕುರುಡಗಿ ಜಿಲ್ಲೆಗೆ ದ್ವಿತೀಯ ಸ್ಥಾನ, ಬಾಗಲಕೋಟೆ ಎಸ್.ಸಿ, ಎಸ್‌ಟಿ ಪ್ರತಿಭಾನ್ವಿತ ಶಾಲೆಯ ವಿದ್ಯಾರ್ಥಿ ದೀಪಾ ಕೊಕಟನೂರ ತೃತಿಯ ಸ್ಥಾನ ಪಡೆದುಕೊಂಡಿದ್ದಾರೆ.
ಬಾದಾಮಿ ತಾಲೂಕಿನಲ್ಲಿ 5237 ಪೈಕಿ 4194 (ಶೇ.80.08) ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದರೆ, ಬಾಗಲಕೋಟೆ ತಾಲೂಕಿನಲ್ಲಿ 4556 ಪೈಕಿ 3620 (ಶೇ.79.46), ಬೀಳಗಿ ತಾಲೂಕಿನಲ್ಲಿ 2783 ಪೈಕಿ 1893 (ಶೇ.68.02), ಹುನಗುಂದ ತಾಲೂಕಿನಲ್ಲಿ 5085 ಪೈಕಿ 4108 (ಶೇ.80.79), ಜಮಖಂಡಿ ತಾಲೂಕಿನಲ್ಲಿ 7725 ಪೈಕಿ 6440 (ಶೇ.83.37) ಹಾಗೂ ಮುಧೋಳ ತಾಲೂಕಿನಲ್ಲಿ 5060 ಪೈಕಿ 4204 (ಶೇ.83.08) ವಿದ್ಯಾರ್ಥಿಗಳು ತೇರ್ಗಡೆ ಹೊಂದಿರುತ್ತಾರೆ ಎಂದು ಬಿ.ಕೆ.ನಂದನೂರ ತಿಳಿಸಿದ್ದಾರೆ.

ಪ್ರತಿಷ್ಟಿತ ಶಾಲೆ : 6ನೇ ತರಗತಿ ಪ್ರವೇಶಕ್ಕೆ ಅರ್ಜಿ

ಬಾಗಲಕೋಟೆ: ಜಿಲ್ಲೆಯ ಪ್ರತಿಷ್ಟಿತ ಶಾಲೆಗಳಿಗೆ ಪ್ರತಿಭಾವಂತ ಪರಿಶಿಷ್ಟ ಜಾತಿ, ಪಂಗಡ ವರ್ಗದ 5ನೇ ತರಗತಿ ಪಾಸಾದ ವಿದ್ಯಾರ್ಥಿಗಳನ್ನು 2024-25ನೇ ಸಾಲಿಗೆ 6ನೇ ತರಗತಿಗೆ ಸೇರ್ಪಡೆ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಬೀಳಗಿಯ ಹೋಲಿಸೆಂಟ್ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆ, ಗುಳೇದಗುಡ್ಡದ ನೆಹರೂ ಇಂಟರ್ ನ್ಯಾಷನಲ್ ಶಾಲೆ, ಸೂಳಿಕೇರಿ ಲಕ್ಷಿö್ಮÃ ರಂಗನಾಥ ಪ್ರಾಥಮಿಕ ಶಾಲೆ ಹಾಗೂ ಲೋಕಾಪೂರ ಎಕ್ಸಪರ್ಟ ಆಂಗ್ಲ ಮಾಧ್ಯಮ ಶಾಲೆಗೆ ಪ್ರವೇಶ ಬಯಸುವ ವಿದ್ಯಾರ್ಥಿಗಳು ಪರಿಶಿಷ್ಟ ಜಾತಿ, ಪಂಗಡಕ್ಕೆ ಸೇರಿದವರಾಗಿರಬೇಕು. ಬಾಲಕಿಯರಿಗೆ ಶೇ.50 ರಷ್ಟು ಹಾಗೂ ಗ್ರಾಮೀಣ ವಿದ್ಯಾರ್ಥಿಗಳಿಗೆ ಶೇ.50 ರಷ್ಟು ಸೀಟುಗಳು ಮೀಸಲಿಡಲಾಗಿದೆ.
ಕುಟುಂಬದ ಎರಡು ಮಕ್ಕಳಿಗೆ ಅಂದರೆ ಒಬ್ಬ ಬಾಲಕ ಮತ್ತು ಬಾಲಕಿಗೆ ಅವಕಾಶವಿದೆ. ವಿದ್ಯಾರ್ಥಿಗಳನ್ನು ಪ್ರವೇಶ ಪರೀಕ್ಷೆಯ ಮೂಲಕ ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಿಕೊಳ್ಳಲಾಗುತ್ತಿದೆ. ಅರ್ಜಿ ಸಲ್ಲಿಸುವ ಕೊನೆಯ ದಿನ ಮೇ 21 ಆಗಿದ್ದು, ಅರ್ಜಿಯನ್ನು ಆಯಾ ತಾಲೂಕಾ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಗೆ ಎಲ್ಲ ದಾಖಲೆಗಳೊಂದಿಗೆ ಹಾಜರಾಗಿ ಆನ್‌ಲೈನ್ ಮೂಲಕ ಸಲ್ಲಿಸುವಂತೆ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಣ್ಣು & ನೀರಿನ ಸಂರಕ್ಷಣೆ ಕುರಿತು ತರಬೇತಿ

ಬಾಗಲಕೋಟೆ: ಜಿಲ್ಲಾ ಕೃಷಿ ತರಬೇತಿ ಕೇಂದ್ರದಿAದ ರೈತರ ಅನುಕೂಲಕ್ಕಾಗಿ ಮೇ 13 ರಂದು ಮಧ್ಯಾಹ್ನ 3.30 ರಿಂದ 4.30 ವರೆಗೆ ಗೂಗಲ್ ಮೀಟ್ ಮೂಲಕ ಮಣ್ಣು ಮತ್ತು ನೀರಿನ ಸಂರಕ್ಷಣೆ ಕುರಿತು ತರಬೇತಿ ಹಮ್ಮಿಕೊಳ್ಳಲಾಗಿದೆ. ತರಬೇತಿಯಲ್ಲಿ ಭಾಗವಹಿಸುವ ರೈತರು ಗೂಗಲ್ ಮೀಟ್ ಲಿಂಕ್ hಣಣಠಿ://meeಣ.googಟe.ಛಿom/hzಞ-ಠಿಛಿhರಿ-ತಿbq ಮೂಲಕ ತರಬೇತಿಗೆ ಹಾಜರಾಗಿ ಇದರ ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Most Popular

To Top
error: Content is protected !!