Gummata Nagari

Bijapur

ಬರ ಪರಿಹಾರ ಸಹಾಯವಾಣಿ ಕೇಂದ್ರ ಸ್ಥಾಪನೆ

 

ಬೀದರ: 2023-24ನೇ ಸಾಲಿನ ಬೀದರ ಜಿಲ್ಲೆಯ ಎಂಟು ತಾಲ್ಲೂಕುಗಳನ್ನು ಬರ ಪೀಡಿತ ಪ್ರದೇಶವೆಂದು ಘೋಷಿಸಿರುವುದು ತಮ್ಮಗೆಲ್ಲರಿಗೂ ತಿಳಿದಿರುವ ವಿಷಯವಾಗಿದ್ದು, ಜಿಲ್ಲೆಯ ಒಟ್ಟು 11075 ರೈತರ ಬ್ಯಾಂಕ ಖಾತೆಗಳಿಗೆ ವಿವಿಧ ಕಾರಣಾಂತರಗಳಿAದ ಪರಿಹಾರ ಜಮೆಯಾಗದೇ ಬಾಕಿ ಉಳಿದಿರುತ್ತದೆ. ಪರಿಹಾರ ಜಮೆಯಾಗದೇ ಬಾಕಿ ಇರುವ ರೈತರು ಸಹಾಯವಾಣಿ ಕೇಂದ್ರಕ್ಕೆ, ತಹಸೀಲ್ದಾರರಿಗೆ ಕಛೇರಿಗೆ ಕರೆ ಮಾಡಿ ನ್ಯೂನತೆಗಳನ್ನು ಸರಿಪಡಿಸಿಕೊಂಡು ಪರಿಹಾರ ಪಡೆದುಕೊಳ್ಳಬಹುದಾಗಿದೆ.
ಸಹಾಯವಾಣಿ ಕೇಂದ್ರಗಳ ವಿವರ: ಜಿಲ್ಲಾಧಿಕಾರಿಗಳ ಕಾರ್ಯಾಲಯ ಬೀದರ ದೂರವಾಣಿ ಸಂಖ್ಯೆ: 08482-224316, 224317, ಜಿಲ್ಲಾ ವಿಪತ್ತು ನಿರ್ವಣಾಧಿಕಾರಿಗಳು ಜಿಲ್ಲಾಧಿಕಾರಿಗಳ ಕಛೇರಿ ಬೀದರ ಮೊಬೈಲ್ ಸಂಖ್ಯೆ: 9880782939, ಜಿಲ್ಲಾ ಸಮಾಲೋಚಕರು ಭೂಮಿ ಕೋಶ ಜಿಲ್ಲಾಧಿಕಾರಿಗಳ ಕಛೇರಿ ಬೀದರ ಮೊಬೈಲ್ ಸಂಖ್ಯೆ: 9480832160 ಹಾಗೂ ಔರಾದ ತಾಲ್ಲೂಕಿನ ದೂರವಾಣಿ ಸಂಖ್ಯೆ: 08485-280024, 8880009312, ಕಮಲನಗರ ತಾಲ್ಲೂಕಿನ ದೂರವಾಣಿ ಸಂಖ್ಯೆ: 7411002901, ಬೀದರ ತಾಲ್ಲೂಕಿನ ದೂರವಾಣಿ ಸಂಖ್ಯೆ: 08482-226459, 8722127412, ಭಾಲ್ಕಿ ತಾಲ್ಲೂಕಿನ ದೂರವಾಣಿ ಸಂಖ್ಯೆ: 08484-262218, 7483243168, ಬಸವಕಲ್ಯಾಣ ತಾಲ್ಲೂಕಿನ ದೂರವಾಣಿ ಸಂಖ್ಯೆ: 08481-250338, 8197268989, ಹುಮನಾಬಾದ ತಾಲ್ಲೂಕಿನ ದೂರವಾಣಿ ಸಂಖ್ಯೆ: 08483-270051, 7892674923, ಹುಲಸೂರ ತಾಲ್ಲೂಕಿನ ದೂರವಾಣಿ ಸಂಖ್ಯೆ: 9449317201, 9449317201, ಚಿಟ್ಟಗುಪ್ಪಾ ತಾಲ್ಲೂಕಿನ ದೂರವಾಣಿ ಸಂಖ್ಯೆ: 08483-277577, 7619228265.
ಪ್ರಯುಕ್ತ ಜಿಲ್ಲೆಯ ಎಲ್ಲಾ ರೈತ ಬಾಂಧವರು ಸಹಾಯವಾಣಿ ಕೇಂದ್ರಗಳಿಗೆ ಕರೆ ಮಾಡಿ ನ್ಯೂನತೆಗಳನ್ನು ಸರಿಪಡಿಸಿಕೊಂಡು ಪರಿಹಾರ ಪಡೆದುಕೊಳ್ಳಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳಾದ ಗೋವಿಂದರೆಡ್ಡಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Most Popular

To Top
error: Content is protected !!