Gummata Nagari

Bijapur

ಬಾಗಲಕೋಟೆಯ ಅಂಕಿತಾ ಕೊನ್ನೂರು ರಾಜ್ಯಕ್ಕೆ ಪ್ರಥಮ

 

ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು 2023-24ನೇ ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶವನ್ನು ಪ್ರಕಟಿಸಿದೆ.
ಈ ಬಾರಿಯೂ ಬಾಲಕಿಯರೇ ಮೈಲುಗೈ ಸಾಧಿಸಿದ್ದಾರೆ. ಅದರಲ್ಲಿಯೂ ಬಾಗಲಕೋಟೆ (ಃಚಿgಚಿಟಞoಣe) ಜಿಲ್ಲೆಯ ಮುಧೋಳದ ಮೆಳ್ಳಿಗೇರಿ ಮೊರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿನಿ ಅಂಕಿತಾ ಬಸಪ್ಪ ಕೊನ್ನೂರು 625/625ಕ್ಕೆ ಅಂಕ ಪಡೆದುಕೊಳ್ಳುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಒಟ್ಟು 7 ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳ ವಿವರ
ಅಂಕಿತಾ ಬಸಪ್ಪ ಕೊನ್ನೂರು (ಬಾಗಲಕೋಟೆ) 625/625 (ಪ್ರಥಮ), ಮೇದಾ ಪಿ ಶೆಟ್ಟಿ (ಬೆಂಗಳೂರು) 625ಕ್ಕೆ 624 ಅಂಕ, ಹರ್ಷಿತಾ ಡಿಎಂ (ಮಧುಗಿರಿ) 625ಕ್ಕೆ 624 ಅಂಕ, ಚಿನ್ಮಯ್ (ದಕ್ಷಿಣ ಕನ್ನಡ) 625ಕ್ಕೆ 624 ಅಂಕ, ಸಿದ್ದಾಂತ್ (ಚಿಕ್ಕೊಡಿ) 625ಕ್ಕೆ 624 ಅಂಕ, ದರ್ಶನ್ (ಶಿರಸಿ) 625ಕ್ಕೆ 624 ಅಂಕ, ಚಿನ್ಮಯ್ (ಶಿರಸಿ) 625ಕ್ಕೆ 624 ಅಂಕ, ಶ್ರೀರಾಮ್ (ಶಿರಸಿ) 625ಕ್ಕೆ 624 ಅಂಕ,

ಮಾದ್ಯಮಕ್ಕೆ ಎಸ್‌ಎಸ್‌ಎಲ್‌ಸಿ ಟಾಪರ್ ಅಂಕಿತಾ ಕೊನ್ನೂರು ಪ್ರತಿಕ್ರಿಯಿಸಿದ್ದು, ಪಿಯುಸಿಯಲ್ಲಿ ವಿಜ್ಞಾನ ವಿಭಾಗ ತೆಗೆದುಕೊಳ್ಳುತ್ತೇನೆ. ಭವಿಷ್ಯದಲ್ಲಿ ನಾನು ಐಎಎಸ್ ಮಾಡುವ ಕನಸು ಹೊಂದಿದ್ದೇನೆ ಎಂದು ಹೇಳಿದ್ದಾರೆ.
ಬೆಂಗಳೂರಿನ ವಿದ್ಯಾರ್ಥಿಗಳು ಕೂಡ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ್ದಾರೆ. ರಾಜಾಜಿನಗರದ ವಿವಿಎಸ್ ಸರ್ದಾರ್ ಪಟೇಲ್ ಶಾಲೆಯ ಇಬ್ಬರು ವಿದ್ಯಾರ್ಥಿಗಳು ಮೂರನೇ ರ‍್ಯಾಂಕ್ ಪಡೆದುಕೊಂಡಿದ್ದಾರೆ. ಅಂಕಿತಾ ಹಾಗೂ ಸೌರವ್ ಕೌಶಿಕ್‌ಗೆ ತಲಾ 623 ಅಂಕಗಳು ಬಂದಿವೆ. ವಿದ್ಯಾರ್ಥಿಗಳ ಸಾಧನೆಗೆ ಶಾಲೆ ಶಿಕ್ಷಕರು ಮತ್ತು ಪೋಷಕರು ಸಿಹಿ ತಿನ್ನಿಸಿ ಸಂಭ್ರಮಿಸಿದ್ದಾರೆ.
44ನೇ ಬ್ಯಾಚ್ 100% ರಿಸಲ್ಟ್ ಬಂದಿರುವುದು ಸಂತಸ ತಂದಿದೆ. ಮಕ್ಕಳಿಗೆ ನಾವು ಉತ್ತಮವಾಗಿ ಪಾಠಗಳನ್ನ ಒದಗಿಸುತ್ತಿದ್ದೇವೆ ಎಂದು ವಿವಿಎಸ್ ಹೈಸ್ಕೂಲ್ ಪ್ರಾಶುಂಪಾಲೆ ವಾಣಿಶ್ರಿ ದೇಶಪಾಂಡೆ ಸಂತಸ ವ್ಯಕ್ತಪಡಿಸಿದ್ದಾರೆ.

Most Popular

To Top
error: Content is protected !!