Gummata Nagari

Headlines

ಮಾ.16 ರಂದು ಕಲಬುರಗಿಗೆ ಮೋದಿ

 

ಕಲಬುರಗಿ: ಲೋಕಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಎರಡನೇ ಪಟ್ಟಿ ಬುಧವಾರದಂದು ಪ್ರಕಟವಾಗಿದೆ. ಈ ಮೂಲಕ ಕರ್ನಾಟಕದ 28 ಕ್ಷೇತ್ರಗಳ ಪೈಕಿ 20 ಕ್ಷೇತ್ರಗಳಿಗೆ ಅಭ್ಯರ್ಥಿಯನ್ನ ಘೋಷಣೆ ಮಾಡಿದೆ. ಇದರ ಬೆನ್ನಲ್ಲೇ ಇದೀಗ ಮಾ.16 ರಂದು ಕಲಬುರಗಿಗೆ ಪ್ರಧಾನಿ ನರೇಂದ್ರ ಮೋದಿ (ಓಚಿಡಿeಟಿಜಡಿಚಿ ಒoಜi) ಆಗಮಿಸಲಿದ್ದಾರೆ ಎಂದು ಕಲಬುರಗಿ ಲೋಕಸಭಾ ಕ್ಷೇತ್ರ ಉಸ್ತುವಾರಿ ರಾಜುಗೌಡ ಹೇಳಿದ್ದಾರೆ.

ಕಲಬುರಗಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಾಜುಗೌಡ, ‘ಮಧ್ಯಾಹ್ನ 1 ಗಂಟೆಗೆ ಕಾರ್ಯಕ್ರಮ ಆಯೋಜನೆ ಮಾಡಿದ್ದೆವೆ. ಕಲಬುರಗಿಯಿಂದಲೇ ಪ್ರಧಾನಿ ಮೋದಿ ಚುನಾವಣೆ ಪ್ರಚಾರ ಆರಂಭಿಸುತ್ತಿದ್ದಾರೆ. ತೆಲಂಗಾಣದಿAದ ನೇರವಾಗಿ ಕಲಬುರಗಿ ಏರ್‌ಪೋರ್ಟ್ ಆಗಮಿಸಲಿರುವ ಮೋದಿ, ಪೊಲೀಸ್ ಮೈದಾನದಿಂದ 10 ರಿಂದ 12 ನಿಮಿಷ ರೋಡ್‌ಶೋ ಮಾಡಲಿದ್ದಾರೆ. ಬಳಿಕ 40 ನಿಮಿಷ ವೇದಿಕೆ ಕಾರ್ಯಕ್ರಮ ನಡೆಯಲಿದ್ದು, ಕಲಬುರಗಿ ಹಾಗೂ ಬೀದರ್ ಕ್ಷೇತ್ರದ ಜನ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದರು.

ರಾಜ್ಯದಲ್ಲಿ ಲೋಕಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುತ್ತಿದ್ದಂತೆ ಅಸಮಧಾನ ಭುಗಿಲೆದ್ದಿದೆ. ಕೆಎಸ್ ಈಶ್ವರಪ್ಪ, ಕರಡಿ ಸಂಗಣ್ಣ, ಜಗದೀಶ್ ಶೆಟ್ಟರ್, ಎಂ.ಪಿ.ರೇಣುಕಾಚಾರ್ಯ ಸೇರಿದಂತೆ ಹಲವಾರು ಬಂಡಾಯದ ಕಹಳೆ ಊದಿದ್ದಾರೆ. ಇದರ ಬೆನ್ನಲ್ಲೇ ಇದೀಗ ಪ್ರಧಾನಿ ಮೋದಿ ಅವರು ರಾಜ್ಯಕ್ಕೆ ಬೇಟಿ ನೀಡುವ ಮೂಲಕ ಚುನಾವಣಾ ಪ್ರಚಾರ ಆರಂಭಿಸಲಿದ್ದಾರೆ. ಇದರಿಂದ ಬಂಡಾಯದ ಬಿಸಿ ಕಡಿಮೆಯಾಗಿ, ಪಕ್ಷದಲ್ಲಿ ಒಗ್ಗಟ್ಟು ಮೂಡಲಿದೆಯಾ ಕಾದು ನೋಡಬೇಕಿದೆ.

Most Popular

To Top
error: Content is protected !!