Gummata Nagari

Bijapur

ವ್ಯಕ್ತಿತ್ವ ವಿಕಸನಕ್ಕೆ ಜ್ಞಾನ ಅವಶ್ಯ : ಬಸವಂತರಾಯಗೌಡ ಪಾಟೀಲ

 

ಇಂಡಿ: ವಿದ್ಯಾರ್ಥಿಗಳ ಕಲಿಕೆಯ ಜೊತೆಗೆ ಜೀವನ ರೂಪಿಸುವಲ್ಲಿ ಶಿಕ್ಷಕರು ಮಹತ್ವದ ಪ್ರಭಾವ ಬೀರುತ್ತಾರೆ. ಅವರು ಜ್ಞಾನ ಮತ್ತು ಮೌಲ್ಯಗಳನ್ನು ನೀಡಿ, ವಿದ್ಯಾರ್ಥಿಗಳ ಬದುಕನ್ನು ಸಂಸ್ಕಾರಯುತವನ್ನಾಗಿಸುತ್ತಾರೆ ಎಂದು ಶಾಸಕರ ಸಹೋದರ, ಶಿಕ್ಷಣ ಪ್ರೇಮಿ ಬಸವಂತರಾಯಗೌಡ ಪಾಟೀಲ ಹೇಳಿದರು.

ಅವರು ತಾಲೂಕಿನ ಪಡನೂರ ಗ್ರಾಮದ ಶ್ರೀ ಚನ್ನಬಸವೇಶ್ವರ ವಿದ್ಯಾವರ್ಧಕ ಸಂಸ್ಥೆಯ ಶ್ರೀ ವ್ಹಿ ವೈ ಪಾಟೀಲ ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡ ‘ಸಂಸ್ಕೃತಿ ಸೌರಭ’- ಶಾಲಾ ವಾರ್ಷಿಕೋತ್ಸವ ಹಾಗೂ 10ನೇ ವರ್ಗದ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಮುಖ್ಯ ಉಪನ್ಯಾಸಕರಾಗಿ ಶಿಕ್ಷಕ ಸಾಹಿತಿ ಸಂತೋಷ ಬಂಡೆ ಮಾತನಾಡಿ, ವಿದ್ಯಾರ್ಥಿಯ ವ್ಯಕ್ತಿತ್ವ ವಿಕಸನಕ್ಕೆ ಜ್ಞಾನ ಪೂರಕ. ಆದ್ದರಿಂದ ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು ಮತ್ತು ಸಂಯಮವನ್ನು ರೂಢಿಸಿಕೊಳ್ಳಬೇಕು. ವಿದ್ಯಾವಂತರಾಗಲು ಪುಸ್ತಕಗಳನ್ನು ಹೆಚ್ಚಾಗಿ ಓದಬೇಕು. ವಿದ್ಯಾರ್ಥಿಗಳು ಜ್ಞಾನದ ಜತೆಗೆ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಡಾ.ಗುರುಸಿದ್ದಯ್ಯ ಸ್ವಾಮಿ ಮಾತನಾಡಿ, ಬಡತನದಲ್ಲೆ ಹುಟ್ಟಿ ಬೆಳೆದ ಅಬ್ದುಲ್ ಕಲಾಂ, ಅಂಬೇಡ್ಕರ್, ಸರ್ ಎಂ ವಿಶ್ವೆಶ್ವರಯ್ಯ ಮತ್ತಿತರ ಮಹನೀಯರು ಪರಿಶ್ರಮ ಪಟ್ಟು ಓದಿ ದೇಶಕ್ಕೆ ಕೊಡುಗೆ ನೀಡಿದ್ದಾರೆ. ಅಂತಹ ಸಾಧನೆ ಮಾಡುವ ಶಕ್ತಿ ನಿಮ್ಮಲ್ಲಿದೆ. ಅದಕ್ಕೆ ಸಕಾರಾತ್ಮಕ ಚಿಂತನೆಗಳನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ವಿವಿಧ ಸ್ಪರ್ಧೆಯಲ್ಲಿ ವಿಜೇತ ಮಕ್ಕಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಷಡಕ್ಷರಿ ಮೇತ್ರಿ, ಸಂಸ್ಥೆಯ ಕಾರ್ಯದರ್ಶಿ ಕಲ್ಲನಗೌಡ ಬಿರಾದಾರ, ನಿರ್ದೇಶಕ ಸೋಮನಿಂಗ ದುದಗಿ, ಅಂಬಣ್ಣ ಬಂಡಿವಡ್ಡರ, ಮುಖಂಡ ರಾಜು ದುದಗಿ, ಭೀಮಾಶಂಕರ ಭೈರಜಿ, ಕೆ ಆಯ್ ಉಮರಾಣಿ, ಎಸ್ ಎಸ್ ಅವರಾದಿ, ಪ್ರಾಚಾರ್ಯ ಎಲ್ ಟಿ ವೀರಶೆಟ್ಟಿ, ಬಸಪ್ಪಗೌಡ ಬಿರಾದಾರ, ಪಿ.ಬಿ. ಅರವತ್ತು, ಎಸ್ ಬಿ ಪಾಟೀಲ,ಎಸ್ ಎಸ್ ಪೊದ್ದಾರ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮುಖ್ಯ ಶಿಕ್ಷಕ ಅಶೋಕ ಮಾಳಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕರಾದ ವ್ಹಿ ಆರ್ ಲಾಳಸೇರಿ, ಅಪ್ಪು ಇಕ್ಕಳಕಿ, ಎ ಬಿ ಬಿರಾದಾರ, ಎ ಬಿ ಚವ್ಹಾಣ, ಸವಿತಾ ಹಳ್ಳೆರ, ಚಿಕ್ಕಯ್ಯ ಮಠಪತಿ, ರವೀಂದ್ರ ಬಿರಾದಾರ ಸೇರಿದಂತೆ ಅನೇಕರು ಭಾಗವಹಿಸಿದ್ದರು.

 

Most Popular

To Top
error: Content is protected !!