Gummata Nagari

Bijapur

ಮತ ಚಲಾಯಿಸಿದ ಸಂಸದ ರಮೇಶ ಜಿಗಜಿಣಗಿ

 

ಬಿಜಾಪುರ: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸಂಸದ ರಮೇಶ ಜಿಗಜಿಣಗಿ ಅವರು ಕುಟುಂಬ ಸಮೇತ ಮಂಗಳವಾರ ಬೆಳಿಗ್ಗೆ ಮತ ಚಲಾಯಿಸಿದರು.
ನಗರ ಮತಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಭೂತನಾಳ ತಾಂಡಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ 14 ರಲ್ಲಿ ಮತ ಚಲಾಯಿಸಿದರು.
ಸಂಸದ ರಮೇಶ ಜಿಗಜಿಣಗಿ ಹಾಗೂ ಅವರ ಇಬ್ಬರು ಮಕ್ಕಳಾದ ಆನಂದ, ವಿನೋದ, ಸೋಸೆಯಂದಿಯರಾದ ರೇಷ್ಮಾ ಗೀತಾ, ಮೊಮ್ಮಗಳು ಸ್ನೇಹಾ ಮತಚಲಾಯಿಸಿದರು. ಮೊಮ್ಮಗಳು ಸ್ನೇಹಾ ಇದೆ ಮೊದಲಬಾರಿಗೆ ಮತ ಚಲಾಯಿಸಿದರು.
ಮತ ಚಲಾಯಿಸಿದ ನಂತರ ಮಾಧ್ಯಮದ ಜೊತೆ ಮಾತನಾಡಿದ ರಮೇಶ ಜಿಗಜಿಣಗಿ ಅವರು, ಕೇವಲ ಭೂತನಾಳ ಮಾತ್ರವಲ್ಲದೆ ಜಿಲ್ಲೆಯ ಎಲ್ಲೆಡೆ ಬಿಜೆಪಿ ವಾತಾವಣ ಚೆನ್ನಾಗಿದೆ. ಜಿಲ್ಲೆಯ ವಿವಿಧ ಎಲ್ಲ ಗ್ರಾಮಗಳಿಂದ ಕರೆ ಬರುತ್ತಿದ್ದು ಉತ್ತಮ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಬಿಜಾಪುರದಲ್ಲಿ ಲೋಕಸಭೆ ಚುನಾವಣೆ ಬಿಜೆಪಿಗೆ ಒನ್ ಸೈಡ್ ಆಗಲಿದೆ ಎಂದರು.

Most Popular

To Top
error: Content is protected !!