Gummata Nagari

Bijapur

ತಜ್ಷರು ಪ್ರಜಾಪ್ರಭುತ್ವ ಉಳಿಸಲು ಮುಂದಾಗಿ : ಎಚ್.ಕೆ. ಪಾಟೀಲ್

 

ಬಿಜಾಪುರ: ಚುನಾವಣೆಯ ಈ ಸಂದರ್ಭದಲ್ಲಿ ದೇಶದಲ್ಲಿರುವ ಸಧ್ಯದ ಪರಿಸ್ಥಿತಿಯ ಕುರಿತು ಶಿಕ್ಷಣ ತಜ್ಞರು, ವೈದ್ಯರು, ಸಹಕಾರ ಪ್ರತಿನಿಧಿಗಳು ಜನಜಾಗೃತಿ ಮೂಡಿಸಿ ಪ್ರಜಾಪ್ರಭುತ್ವ ಉಳಿಸಲು ಮುಂದಾಗಬೇಕು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರ ಹಾಗೂ ಪ್ರವಾಸೋದ್ಯಮ ಸಚಿವ ಎಚ್. ಕೆ. ಪಾಟೀಲ ಹೇಳಿದ್ದಾರೆ.

ಲೋಕಸಭೆಚುನಾವಣೆ ಹಿನ್ನೆಲೆಯಲಿ ಇಂದು(ಭಾನುವಾರ) ಸಂಜೆ ನಗರದಲ್ಲಿ ನಡೆದ ವೈದ್ಯರು, ಸಹಕಾರ ಪ್ರತಿನಿಧಿಗಳು, ಹಾಗೂ ನ್ಯಾಯವಾದಿಗಳೊಂದಿಗೆ ಸಭೆಯಲ್ಲಿಅವರು ಮಾತನಾಡಿ, ದೇಶದ ಇಂದಿನ ಪರಿಸ್ಥಿತಿಯ ಕುರಿತುಜನಜಾಗೃತಿ ಮೂಡಿಸದಿದ್ದರೆದೇಶ ಸರ್ವಾಧಿಕಾರ ಆಡಳಿತದ ಕಡೆಗೆ ಸಾಗಲಿದೆ. ಈ ಸಭೆಯಲ್ಲಿ ಸೇರಿರುವ ನಾನಾ ಕ್ಷೇತ್ರಗಳ ಗಣ್ಯರಾದತಾವು ಮತದಾರರು ಮಾತ್ರವಲ್ಲ. ಸಮಾಜವನ್ನು ಮುನ್ನಡೆಸುವಗಣ್ಯರಾಗಿದ್ದೀರಿ. ಪ್ರತಿಯೊಬ್ಬರುಕನಿಷ್ಠ 100 ಕುಟುಂಬಗಳ ಮೇಲೆ ಹಾಗೂ ತಲಾ 500 ಮತದಾರರ ಮೇಲೆ ಪರಿಣಾಮ ಬೀರುವವರಾಗಿದ್ದೀರಿ. ತಾವು ಸಮಾಜಕ್ಕೆ ಮಾರ್ಗದರ್ಶನ ಮಾಡಿ ಪ್ರಜಾಪ್ರಭುತ್ವದ ಪರವಾಗಿರುವಕಾಂಗ್ರೆಸ್‌ಅಭ್ಯರ್ಥಿ ಪ್ರೊ. ರಾಜುಆಲಗೂರಅವರಿಗೆ ಮತ ಹಾಕಿಸಬೇಕು ಎಂದು ಸಚಿವರುಕರೆ ನೀಡಿದರು.

ಸಧ್ಯದ ಆಡಳಿತದಲ್ಲಿ ನಮ್ಮ ಪ್ರಜಾಪ್ರಭುತ್ವ ಸಾಗಿರುವ ದಿಕ್ಕಿನ ಕುರಿತು ವಿಶ್ವಸಂಸ್ಥೆಯಲ್ಲಿ ಕಳವಳ ವ್ಯಕ್ತವಾಗುತ್ತಿದೆ. ಎಲೆಕ್ಟ್ರಾಲ್ ಬಾಂಡ್ ಸ್ಕೀಂ ಜಾರಿ ಮಾಡಿ ಹಣ ಸಂಗ್ರಸಿದ್ದಾರೆ. ಅಲ್ಲದೇ, ಇದನ್ನು ಮಾಹಿತಿ ಹಕ್ಕಿನಡಿ ಬಾರದಂತೆ ವ್ಯವಸ್ಥೆ ರೂಪಿಸಿದ್ದರು. ದೇಶದ ಪ್ರತಿಷ್ಠಿತಎಸ್.ಬಿ.ಐ ನ್ನು ನ್ನೂಕೂಡ ದುರ್ಬಳಕೆ ಮಾಡಿಕೊಂಡರು. ಆದರೆ, ಸುಪ್ರೀಂಕೋರ್ಟ್ತನ್ನಖಡಕ್ ಸೂಚನೆ ಮೂಲಕ ಮಾಹಿತಿಯನ್ನು ನೀಡುವಂತೆ ಸೂಚಿಸಿ ನಮ್ಮ ಸಂವಿಧಾನಜೀವAತವಿದೆಎAಬುದಕ್ಕೆ ಸಾಕ್ಷಿಯಾಯಿತು. ಎಲೆಕ್ಟ್ರಾಲ್ ಬಾಂಡ್ ನಡಿ ಸಂಗ್ರಹಿಸಲಾದರೂ. 16000 ಕೋ. ಗೂ ಹೆಚ್ಚು ಹಣದಲ್ಲಿರೂ. 6000 ಕೋ. ಗಿಂತಲೂ ಹೆಚ್ಚು ಹಣ ಐಟಿ, ಇಡಿ, ಸಿಬಿಐ ಧಾಳಿಗೆ ಒಳಗಾದ ವ್ಯಕ್ತಿಗಳಿಂದ ಸಂಗ್ರಹಿಸಿದ್ದಾರೆ. ಭೂಗತಡಾನ್ ಗಳು, ರೌಡಿಗಳು ಹಣ ಸುಲಿಗೆ ಮಾಡುವುದಕ್ಕೂಇದಕ್ಕೂ ಹೆಚ್ಚು ವ್ಯತ್ಯಾಸವಿಲ್ಲ ಎಂದುಅವರು ವಾಗ್ದಾಳಿ ನಡೆಸಿದರು.

ನಮ್ಮ ಪ್ರದಾನಿ ಸುದ್ದಿಗೋಷ್ಠಿ ನಡೆಸುವುದಿಲ್ಲ. ಯಾರ ಪ್ರಶ್ನೆಗಳಿಗೂ ಉತ್ತರಿಸುವುದಿಲ್ಲ. ಅಧಿವೇಶನಕ್ಕೂ ಸರಿಯಾಗಿ ಬಾರದೆ ಸಂಸತ್ತಿನಲ್ಲಿ ಪ್ರಶ್ನೆಗಳಿಗೂ ಉತ್ತರಿಸುವುದಿಲ್ಲ ಎಂದಾದರೆಅವರುಎಲ್ಲಿಗೆ ಹೋಗುತ್ತಾರೆ? ಇದುಎಂಥ ವ್ಯವಸ್ಥೆ? ಈ ವಿಷಯಗಳು ಪ್ರಸ್ತುತಚುನಾವಣೆಯಲ್ಲಿಚರ್ಚೆಯಾಗಬೇಕು. ಆದರೆ, ಇಂದುಧರ್ಮ, ಜಾತಿ ಹೆಸರಿನಲ್ಲಿರಾಜಕಾರಣ ನಡೆದಿದೆ. ಈ ದುರ್ದೈವದ ಸ್ಥಿತಿ ಬದಲಾವಣೆ ನಮ್ಮಧ್ಯೇಯವಾಗಬೇಕು. ಪ್ರಜಾಪ್ರಭುತ್ವರಕ್ಷಣೆಗೆಕಾಂಗ್ರೆಸ್ ಬದ್ಧತೆ ಹೊಂದಿದೆ. ಈ ಕುರಿತುಜನಜಾಗೃತಿ ಮೂಡಿಸಬೇಕು. ಇಲ್ಲದಿದ್ದರೆ ನಮ್ಮದೇಶ ಪ್ರಜಾಪ್ರಭುತ್ವದಿಂದ ಸರ್ವಾಧಿಕಾರಿಯ ಆಡಳಿತದತ್ತ ಹೋಗುತ್ತದೆಎಂದುಅವರುಎಚ್ಚರಿಕೆ ನೀಡಿದರು.

ರಾಜ್ಯಕಾಂಗ್ರೆಸ್ ಸರಕಾರಗ್ಯಾರಂಟಿ ಯೋಜನೆಗಳಿಂದ ರಾಜ್ಯದ 1.10 ಕೋಟಿ ಬಡ ಕುಟುಂಬಗಳನ್ನು ಬಡತನರೇಖೆಯಿಂದ ಮೇಲೆ ಎತ್ತಿದೆ. ನಾವು ಸರಕಾರಿಯೋಜನೆಯ ಶೇ. 99.20ಕ್ಕಿಂತಲೂ ಹೆಚ್ಚು ಹಣ ಫಲಾನುಭವಿಗಳನ್ನು ತಲುಪಿಸಿದ್ದೇವೆ. ದಲ್ಲಾಳಿಗಳಕಾಟ ತಪ್ಪಿಸಿ ಶೋಷಣೆ ಮುಕ್ತವಾದಯೋಜನೆಜಾರಿಗೆತಂದಿದ್ದೇವೆ. ಅಷ್ಟೇಅಲ್ಲ, ನ್ಯಾಯಾಲಯಗಳಲ್ಲಿ ಬಡವರ ಪ್ರಕರಣಗಳು ಆರು ತಿಂಗಳೊಳಗೆ ಇತ್ಯರ್ಥವಾಗಲು ಸಿವಿಲ್ ಪ್ರೊಸಿಜರ್ ಕೋಡ್ ಗೆ ತಿದ್ದುಪಡಿತಂದಿದ್ದೇವೆಎAದುಅವರು ತಿಳಿಸಿದರು.

ಕಾಂಗ್ರೆಸ್‌ಅಭ್ಯರ್ಥಿ ಪ್ರೊ. ರಾಜುಆಲಗೂರ ಮಾತನಾಡಿ, ವಿಜಯಪುರಜಿಲ್ಲೆಯ ಸರ್ವಾಂಗೀಣಅಭಿವೃದ್ಧಿ ಮಾಡಿ ನಿಮ ವಿಶ್ವಾಸ ಉಳಿಸಿಕೊಳ್ಳುತ್ತೇನೆ. ಸಂಸದರಮೇಶಜಿಗಜಿಣಗಿಯಾವುದೇಅಭಿವೃದ್ಧಿ ಮಾಡಿಲ್ಲ. ದ್ರಾಕ್ಷಿ ಸಂಶೋಧನೆಕೇAದ್ರ, ಆಲಮಟ್ಟಿಜಲಾಷಯಎತ್ತರ ಹೆಚ್ಚಳ ಗೆಜೆಟ್ ನೊಟಿಫಿಕೇಶನ್, ಸಮಯಕ್ಕೆ ಸರಿಯಾದರೇಲ್ವೆ ಸಂಚಾರ, ವಂದೇ ಭಾರತರೈಲು ಸೇವೆ ಪ್ರಾರಂಭಿಸಲು ಶ್ರಮಿಸುತ್ತೇನೆ. ತಾವೆಲ್ಲರೂಒಂದು ಬಾರಿ ಬದಲಾವಣೆ ಮಾಡಿ ಕಾಂಗ್ರೆಸ್ಸಿಗೆ ಮತ ಹಾಕಿ ಗೆಲ್ಲಿಸಿ ಎಂದು ಮನವಿ ಮಾಡಿದರು.
ಪ್ರಾಸ್ತಾವಿವಾಗಿ ಮಾತನಾಡಿದಡಾ. ಮಹಾಂತೇಶ ಬಿರಾದಾರ, ಪ್ರೊ. ರಾಜುಆಲಗೂರ ವಿದ್ಯಾವಂತರು. ಪ್ರೊಫೆಸರ್ ಅಗಿ ರಾಜಕೀಯ ಶಾಸ್ತ್ರ ಬೋಧಿಸಿದ್ದಾರೆ. ಅವರತಾಯಿ ಶಾಲಾ ಮಕ್ಕಳಿಗೆ ಪಾಠ ಮಾಡಿದ್ದಾರೆ. ಅವರಅಜ್ಜಿ ಸಾಯವ್ವಕೂಡ ಸ್ವಾತಂತ್ರ‍್ಯ ಪೂರ್ವದಲ್ಲಿ ಕೇರಿಗಳಿಗೆ ಹೋಗಿ ಮಕ್ಕಳಿಗೆ ಬೋಧಿಸಿದ್ದಾರೆ. ಪ್ರಗತಿಪರಚಿಂತಕ, ಪ್ರಾಮಾಣಿಕ, ಸಚ್ಚರಿತ್ರ ವ್ಯಕ್ತಿತ್ವದ ಪ್ರೊ. ಆಲಗೂರಆಯ್ಕೆಅಗತ್ಯವಾಗಿದೆ. ಸಂಸದರಮೇಶಜಿಗಜಿಣಗಿ ಕಳೆದ 15 ವರ್ಷಗಳಿಂದ ಮೌನವಾಗಿದ್ದಾರೆ. ಸಂಸತ್ತಿನಲ್ಲಿ ನಮ್ಮಧ್ವನಿ ಎತ್ತಲುಅವರಆಯ್ಕೆ ಮಾಡಬೇಕುಎಂದು ಹೇಳಿದರು.

ಈ ಸಂದರ್ಭದಲ್ಲಿಕಾAಗ್ರೆಸ್‌ಜಿಲ್ಲಾಧ್ಯಕ್ಷ ಎಂ. ಎಸ್. ಲೋಣಿ, ಎಐಸಿಸಿ ವೀಕ್ಷಕ ಸಯ್ಯದ ಬುರಾನುದ್ದೀನ್, ಕೆಪಿಸಿಸಿ ಕಾರ್ಯದರ್ಶಿ ಸಂಗಮೇಶ ಬಬಲೇಶ್ವರ ಉಪಸ್ಥಿತರಿದ್ದರು.

ಇದೇ ವೇಳೆ ಸಚಿವರಿಗೆ ಎಅ. ಮಹಾಂತೇಶ ಬಿರಾದಾರಅವತು ವಚನಗಳ ಕಟ್ಟನ್ನು ನೀಡಿ ಗೌರವಿಸಿದರು.

Most Popular

To Top
error: Content is protected !!