Gummata Nagari

Bijapur

ಕೀರ್ತನೆಯ ಮೂಲಕ ಕನ್ನಡದ ಶ್ರೀಮಂತಿಕೆ ಹೆಚ್ಚಿಸಿದ ದಾಸ ಶ್ರೇಷ್ಠರು: ಕುಲಕರ್ಣಿ

 

ಬಿಜಾಪುರ: ಹರಿದಾಸ ಸಾಹಿತ್ಯ ಕನ್ನಡ ಸಾಹಿತ್ಯದ ತವನಿಧಿಯಾಗಿದೆ. ಪುರಂದರದಾಸರು, ಕನಕದಾಸರು, ಶ್ರೀಪಾದರಾಯರು ,ಪ್ರಸನ್ನ ವೆಂಕಟದಾಸರು ,ಜಗನ್ನಾಥದಾಸರು, ವಿಜಯದಾಸರು, ಕಾಖಂಡಕಿಯ ಮಹಿಪತಿದಾಸರು, ಕೃಷ್ಣದಾಸರು ಮುಂತಾದ ದಾಸ ಶ್ರೇಷ್ಠರು ತಮ್ಮ ಕೀರ್ತನೆಗಳು ಹಾಗೂ ಕಾವ್ಯಗಳ ಮೂಲಕ ಕನ್ನಡದ ಶ್ರೀಮಂತಿಕೆಯನ್ನು ಹೆಚ್ಚಿಸಿದ್ದಾರೆ ಎಂದು ಇತಿಹಾಸ ಸಂಶೋಧಕ ಹಾಗೂ ಬಿಜಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ ಡಾ. ಆನಂದ ಕುಲಕರ್ಣಿ ಇಂದಿಲ್ಲಿ ಅಭಿಪ್ರಾಯಪಟ್ಟರು.
ನಗರದ ಆಶ್ರಮ ರಸ್ತೆಯಲ್ಲಿರುವ ಐಶ್ವರ್ಯ ನಗರದ ವರದಾಂಜನೇಯ ಸನ್ನಿಧಿಯಲ್ಲಿ ನಡೆದ 538 ನೆಯ ಸತ್ಸಂಗ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಹರಿದಾಸರು ಸಾಹಿತ್ಯಕ್ಕೆ ಸಂಗೀತವನ್ನು ಬೆರೆಸುವ ಮೂಲಕ ಜನರ ಮನಸ್ಸು ಸಕಾರಾತ್ಮಕ ಚಿಂತನೆಯತ್ತ ಹೋಗಲು ಕೀರ್ತನೆಗಳನ್ನು ಹಾಡಿದರು .ಸಮಾಜದ ಅನೇಕ ಕಂದಾಚಾರಗಳನ್ನು ಖಂಡಿಸಿ ಕೀರ್ತನೆಗಳನ್ನು ಬರೆದರು .ಈ ಮೂಲಕ ಸಮಾಜದ ಸುಧಾರಣೆಗೆ ಹರಿದಾಸರ ಕೊಡುಗೆ ಶ್ರೇಷ್ಠವಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಗಣ್ಯ ವ್ಯಾಪಾರಿಗಳು ಅಡತ ಮಾಲೀಕರು ಆದ ರಾಮಗೊಂಡಪ್ಪ ಗುದ್ದಿ ಅವರು ಮಾತನಾಡಿ, ಸತ್ಸಂಗವು ಭಕ್ತಿಯ ಅನೇಕ ವಿಚಾರಗಳನ್ನು ತಿಳಿಸುತ್ತಾ ನಮ್ಮ ಮನಸ್ಸನ್ನು ಹಗುರ ಮಾಡುತ್ತದೆ. ಸತ್ಸಂಗದಿoದ ಧನಾತ್ಮಕ ಚಿಂತನೆ ಬೆಳೆಯುತ್ತದೆ ಎಂದು ಅಭಿಪ್ರಾಯಪಟ್ಟರು.
ಭಕ್ತಿ ಸೇವೆಯ ಕಾರ್ಯನಿರ್ವಹಿಸಿದ ಉದ್ಯಮಿಗಳಾದ ಅಶೋಕ್ ಆರ್. ದೇಶೆಟ್ಟಿ ಅವರು ಮಾತನಾಡುತ್ತಾ ಭಕ್ತಿ ನಮ್ಮಲ್ಲಿ ಒಂದು ರೀತಿಯ ಚೈತನ್ಯವನ್ನು ನೀಡುತ್ತದೆ .ಈ ಮೂಲಕ ಭಗವಂತನ ಮೇಲೆ ನಮ್ಮ ನಂಬಿಕೆ ಹೆಚ್ಚಾಗುವಂತೆ ಮಾಡುತ್ತದೆ ಎಂದು ತಿಳಿಸಿದರು.

ಸಮಾರಂಭದಲ್ಲಿ ಪಾಲ್ಗೊಂಡ ಬಿಜಾಪುರ ಜಿಲ್ಲೆಯ ಭಾರತೀಯ ಜನತಾ ಪಕ್ಷದ ಉಪಾಧ್ಯಕ್ಷ ಎಸ್. ಎ. ಪಾಟೀಲ ಅವರನ್ನು ಗೌರವ ಪೂರಕವಾಗಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಎಂ ಕೆ ಬಿಸ್ನಾಳ್ ,ಎಸ್ ಕೆ ಬಿರಾದಾರ್, ಅರವಿಂದ್ ಗೊಬ್ಬೂರ, ರಾಜುಗೌಡ ಪಾಟೀಲ,ಈರಣ್ಣ ಹುಂಡೆಕಾರ,ವಿವೇಕ ಹುಂಡೆಕಾರ್ ಮಾಶಾಳಕರ್, ಶರಣಗೌಡ ಪಾಟೀಲ್, ಲಕ್ಷ್ಮಣ ಮೇತ್ರಿ, ಮಲ್ಲಯ್ಯ ಹಿರೇಮಠ ,ಅಶೋಕ್ ಕಾಕಾ, ಬಿರಾದಾರ್, ರಾಜಣ್ಣ ಜಕ್ಕುಂಡಿ, ಹರ್ಷ ಬರಟಗಿ , ನಾನಾಗೌಡ ಪಾಟೀಲ ಮುಂತಾದ ಗಣ್ಯ ಮಾನ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಆರಂಭದಲ್ಲಿ ಸುನಿತಾ ಬಿರಾದಾರ ಪ್ರಾರ್ಥನೆ ಗೀತೆ ಹಾಡಿದರು.ವಿಶ್ರಾಂತ ಪ್ರಾಚಾರ್ಯ ಎಮ್ ಓಂ ಶಿರೂರ ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿದರು. ಸಾಹಿತಿಗಳಾದ ಡಾ. ಮಲ್ಲಿಕಾರ್ಜುನ ಮೇತ್ರಿ ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕ ವಾಗಿ ಮಾತನಾಡಿ ನಿರೂಪಿಸಿದರು.

 

Most Popular

To Top
error: Content is protected !!