Gummata Nagari

Bijapur

ಮತ ಚಲಾಯಿಸಿದ ಕಾಂಗ್ರೆಸ್ ಅಭ್ಯರ್ಥಿ ಆಲಗೂರ

ಬಿಜಾಪುರ: ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜು ಆಲಗೂರ ಅವರು ಇಂದು ಬೆಳಗ್ಗೆ ತಮ್ಮ ಸ್ವಗ್ರಾಮ ತೊರವಿಯಲ್ಲಿ ಮಗಳು ಭವಾನಿಯೊಂದಿಗೆ ಆಗಮಿಸಿ ಮತ ಚಲಾಯಿಸಿದರು.
ತೊರವಿಯ ಸರಕಾರಿ ಕನ್ನಡ ಹಿರಿಯ ಬಾಲಕಿಯರ ಶಾಲೆಯ ಮತಗಟ್ಟೆ ಸಂಖ್ಯೆ-97ರಲ್ಲಿ ಅವರು ಮತದಾನ ಮಾಡಿದರು.
ನಂತರ ಮಾಧ್ಯಮದವರೊಂದಿಗೆ ಮಾತನಾಡಿ, ಗೆಲುವು ನಿಶ್ಚಿತ. ಬಿಜಾಪುರದ ಬದಲಾವಣೆಗಾಗಿ ಜನರೇ ಮನಸ್ಸು ಮಾಡಿದ್ದಾರೆ. ಜಡವಾಗಿದ್ದ ಕ್ಷೇತ್ರದ ಅಭಿವೃದ್ಧಿಗೋಸ್ಕರ ಅವರು ಮತ ಚಲಾಯಿಸುತ್ತಿದ್ದಾರೆ. ಬಿಜಾಪುರ ಸೇರಿದಂತೆ ರಾಜ್ಯದಲ್ಲಿ ಹದಿನೆಂಟಕ್ಕೂ ಹೆಚ್ಚು ಸ್ಥಾನಗಳನ್ನು ಕಾಂಗ್ರೆಸ್ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯ ಸರಕಾರದ ಸಾಧನೆ, ಕೇಂದ್ರದಲ್ಲಿ ನಮ್ಮದೇ ಸರಕಾರ ಬಂದರೆ ಸಿಗುವ ಯೋಜನೆಗಳು ನಮ್ಮ ಕೈಹಿಡಿಯಲಿವೆ. ಬಿಜೆಪಿಯವರಿಗೆ ಸುಳ್ಳು ಹೇಳುವುದು ಬಿಟ್ಟು ಬೇರೆ ಗೊತ್ತಿಲ್ಲ. ಇವರ ಆಡಳಿತ ಮತ್ತು ಮೋದಿಯವರ ಭ್ರಮೆಗಳಿಂದ ಭ್ರಮನಿರಸನಗೊಂಡಿದ್ದಾರೆ ಎಂದರು.
ಆಲಗೂರ ಅವರ ಮಗಳು ಭವಾನಿ ಮಾತನಾಡಿ, ತಂದೆಯವರ ಜೊತೆಗೆ ಮತ ಚಲಾಯಿಸಿದ್ದಕ್ಕೆ ಖುಷಿಯಾಗಿದೆ. ಅವರು ಈ ಮುಂಚೆ ಶಾಸಕರಾಗಿ ಮಾಡಿದ ಕೆಲಸಗಳ ಕುರಿತು ಹೆಮ್ಮೆ ಇದೆ. ಲೋಕಸಭೆ ಕ್ಷೇತ್ರದ ಜನರು ಅವರ ಬಗ್ಗೆ ತೋರಿಸುತ್ತಿರುವ ಪ್ರೀತಿ, ಅಭಿಮಾನಕ್ಕೆ ಸಂತಸವಾಗಿದೆ. ನಮ್ಮ ತಂದೆ ಗೆಲ್ಲುವುದು ಖಚಿತ ಎಂದರು.

 

ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಎಂ. ಬಿ. ಪಾಟೀಲ ಅವರು ಬಿಜಾಪುರ ನಗರದ ಮದ್ದಿನ ಖಣಿಯಲ್ಲಿರುವ ಸಮನ್ವಯ ಇಂಗ್ಲಿಷ್ ಮೀಡಿಯಮ್ ಪ್ರೈಮರಿ ಬಿ ಸ್ಕೂಲ್ ನಲ್ಲಿರುವ ಮತಗಟ್ಟೆ ಸಂಖ್ಯೆ 46 ರಲ್ಲಿ ಮತದಾನ ಮಾಡಿದರು.

 

ಸಿಂದಗಿ ಮತಕ್ಷೇತ್ರದ ಶಾಸಕ ಅಶೋಕ ಮನಗೂಳಿಯವರು ತಮ್ಮ ಪತ್ನಿ ನಾಗರತ್ನ ಅವರೊಂದಿಗೆ ಮಲಘಾಣ ಗ್ರಾಮದ ಬೂತ್ ನಂ.106 ರಲ್ಲಿ ಮತದಾನ ಮಾಡಿದರು.

 

Most Popular

To Top
error: Content is protected !!