Gummata Nagari

Headlines

ಉಡಗಿ ಗ್ರಾಮದಲ್ಲಿ ಭರಪೂರ ಮಳೆ : ಸಿಡಿಲಿಗೆ 2 ಎತ್ತು 2 ಎಮ್ಮೆ ಸಾವು

 

ಬಿಜಾಪುರ: ಆ ಗ್ರಾಮದಲ್ಲಿ ಮಳೆಗಾಲದ ಸಂದರ್ಭದಲ್ಲೆ ಮಳೆ ಕಡಿಮೆ. ಬೇಸಿಗೆ ಕಾಲದಲ್ಲಂತೂ ಅಲ್ಲಿ ಕುಡಿಯುವ ನೀರಿಗೆ ಬರ. ಹಣ ಕೊಟ್ಟರೂ ನೀರು ಸಿಗದ ದುಸ್ಥಿತಿ. ಇನ್ನೇನು ನಮ್ಮ ಕಥೆ ಮುಗಿದೇ ಹೋಯಿತು ಎಂದು ಅಲ್ಲಿನ ಜನರು ಅಂದುಕೊಳ್ಳುತ್ತಿರುವಾಗಲೇ ಇಂಥಹ ಸಂಕಷ್ಟದ ಸಮಯದಲ್ಲಿ ಶನಿವಾರದಂದು ಸುರಿದ ಧಾರಾಕಾರ ದಾಖಲೆಯ ಮಳೆ ಜನರಲ್ಲಿ ಸಂತಸ ಭಾವ ಮೂಡಿಸಿದರೆ, ಈ ನುಡುವೆ ಸಿಡಿದ ಸಿಡಿಲಿಗೆ ಎರಡು ಎತ್ತು, ಎರಡು ಎಮ್ಮೆ ಬಲಿಯಾದ ಸಂಗತಿ ವಿಷಾದ ಮೂಡಿಸಿದೆ.

ಹೌದು, ನೆರೆಯ ಮಹಾರಾಷ್ಟ್ರ ರಾಜ್ಯದ ಸೋಲಾಪುರ ಜಿಲ್ಲೆಯ ಅಕ್ಕಲಕೋಟ ತಾಲೂಕಿನ ಉಡಗಿ ಎಂಬ ಗ್ರಾಮದಲ್ಲಿ ಕಳೆದ ಶನಿವಾರದಂದು ಮಧ್ಯಾಹ್ನ ಸುರಿದ ಅಕಾಲಿಕ ಮಳೆಗೆ ಅಲ್ಲಿನ ಹಳ್ಳ, ಕೊಳ್ಳಗಳು ತುಂಬಿ ಹರಿದಿವೆ. ಹೊಲಗದ್ದೆಗಳಲ್ಲಿ ಬರಪೂರ ಮಳೆಯಾಗಿ ಒಡ್ಡುಗಳಲ್ಲಿ ನೀರು ತುಂಬಿದ, ಆ ಭಾಗದ ಕೆರೆಗೂ ಅಪಾರವಾದ ನೀರು ಹರಿದು ಬಂದ ನೋಟ ಮೇಘ ಸ್ಪೋಟದಂತೆ ಕಂಡು ಬಂದಿತು. ಬೇಸಿಗೆಯಲ್ಲಿ ಎಂದು ಕಂಡರಿಯದ ಈ ನೋಟ ಅಲ್ಲಿನ ಜನರಲ್ಲಿ ಅಚ್ಚರಿಮೂಡಿಸಿದೆ.

ಗಂಟೆಗಟ್ಟಲೆ ಧಾರಾಕಾರವಾಗಿ ಸುರಿದ ಈ ಮಳೆಯಲ್ಲಿ ಉಂಟಾದ ಸಿಡಿದ ಹೊಡೆತಕ್ಕೆ ಅಲ್ಲಿನ ರೈತರು ತಮ್ಮ ಹೊಲಗದ್ದೆಗಳಲ್ಲಿ ಕಟ್ಟಿದ ಬೆಲೆ ಬಾಳುವ ಎರಡು ಎತ್ತು. ಎರಡು ಎಮ್ಮೆ ಸ್ಥಳದಲ್ಲೆ ಬಲಿಯಾದ ಘಟನೆ ನಡೆದಿದೆ.

ಉಡಗಿ ಗ್ರಾಮದಲ್ಲಿ ನಡೆದ ಈ ಘಟನೆ ಗ್ರಾಮದ ರೈತರಲ್ಲಿ ಒಂದೆಡೆ ನೀರಿನಿಂದ ಬಸವಳಿದ ಜನತೆಗೆ ಎಂದು ಕಂಡಿರಿಯದ ಮಳೆಯ ನೀರು ಸಂತಸ ಮೂಡಿಸಿದರೆ, ಮತ್ತೊಂದೆಡೆ ಜಾನುವಾರಗಳ ಬಲಿ ವಿಷಾದ ಮೂಡಿಸಿತು ಎಂದು ಅಲ್ಲಿನ ಗ್ರಾಮಸ್ಥರು ತಿಳಿಸಿದ್ದಾರೆ.


ಇದಲ್ಲದೆ ಸಮೀಪದ ಶಿಲವಂತಿ ವಾಡಿ ಗ್ರಾಮದ ಸುತ್ತ ಮುತ್ತ  ಶುಕ್ರವಾರದಂದು ಮಳೆಯಾದ ವರದಿಯಾಗಿದೆ. ಈ ಗ್ರಾಮದಲ್ಲಿ ಸಿಡಿನಿನ ಅರ್ಭಟ ಇರಲಿಲ್ಲ. ಆದರೆ ಧಾರಾಕಾರ ಸುರಿದ ಮಳೆಯಿಂದ ಇಲ್ಲನ ರಸ್ತೆಗಳು ಜಲಾವೃತವಾದ ನೋಟ ಕಂಡುಬoದಿತು.
—–
ವರದಿ: ಎಂ.ವ್ಹಿ. ಹೂಗಾರ.

Most Popular

To Top
error: Content is protected !!