Gummata Nagari

Bijapur

ಜಿಲ್ಲೆಯ ಜನತೆ ಬದಲಾವಣೆ ಬಯಸಿದ್ದಾರೆ: ಸಚಿವ ಶಿವಾನಂದ ಪಾಟೀಲ

 

ನಿಡಗುಂದಿ: ಲೋಕಸಭಾ ಚುನಾವಣಾ ಪ್ರಚಾರ ಸಭೆಯಲ್ಲಿ ಸಚಿವ ಶಿವಾನಂದ ಪಾಟೀಲ್ ವಿಜಯಪುರ ಲೋಕಸಭಾ ಮತಕ್ಷೇತ್ರದ ಅಭ್ಯರ್ಥಿ ರಾಜು ಆಲಗೂರ ಅವರ ಪರ ಮತಯಾಚನೆ ಮಾಡಿದರು.

ಬಳಿಕ ಅವರು ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಬಿಜಾಪುರ ಜಿಲ್ಲೆಯ ಜನತೆ ಈ ಬಾರಿ ಬದಲಾವಣೆ ಬಯಸಿದ್ದಾರೆ, ಬರುವ ಲೋಕಸಭಾ ಚುನಾವಣೆಯಲ್ಲಿ ರಾಜು ಆಲಗೂರ್ ಅವರು ಬಹುಮತದಿಂದ ಆರಿಸಿ ಬರುತ್ತಾರೆ, ಅವರ ಗೆಲುವು ನಿಶ್ಚಿತ ಎಂದು ಅವರು ಅಭಿಪ್ರಾಯಪಟ್ಟರು.

ಇದೇ ವೇಳೆ ಬಿಜಾಪುರ ಜಿಲ್ಲಾ ಲೋಕಸಭಾ ಅಭ್ಯರ್ಥಿ ರಾಜು ಆಲಗೂರ ಮಾತನಾಡಿ ಸುಮಾರು ವರ್ಷಗಳಿಂದ ಜಿಲ್ಲೆಯ ಜನ ಮೋದಿ ಅವರ ಮುಖ ನೋಡಿ ಮತ ಹಾಕಿದ ಪರಿಣಾಮವಾಗಿ ವಿಜಯಪುರ ಜಿಲ್ಲೆಯ ಅಭಿವೃದ್ಧಿಯಿಂದ ದೂರ ಉಳಿದಿದೆ, ಈ ಬಾರಿ ಜನ ಉತ್ತಮ ತೀರ್ಮಾನ ತೆಗೆದುಕೊಳ್ಳಲಿದ್ದಾರೆ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರ ಹಿಡಿಯಲಿದೆ , ದೇಶದ ಹಿತಚಿಂತನೆ ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ, ಸ್ವಾತಂತ್ರ‍್ಯ ಬಂದ ನಂತರ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕಾಂಗ್ರೆಸ್ ಪಕ್ಷ ಮಾಡಿದೆ, ಭಾರತೀಯರು ಇದನ್ನು ಅರಿತುಕೊಂಡು ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡಲಿದ್ದಾರೆ ಎಂದು ಹೇಳಿದರು.

ಗ್ಯಾರಂಟಿ ಯೋಜನೆಗಳ ಜಿಲ್ಲಾ ಅಧ್ಯಕ್ಷ ಇಲಿಯಾಸ್ ಬೋರಮಣಿ ಮಾತನಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಗೂ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ರವರು ಅನುಷ್ಠಾನ ಮಾಡಿದ ಐದು ಗ್ಯಾರಂಟಿಗಳು ಈ ಬಾರಿ ಚುನಾವಣೆಯಲ್ಲಿ ಕೈ ಹಿಡಿಯಲಿವೆ, ಜನತೆ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಭೂತಪೂರ್ವ ಬೆಂಬಲವನ್ನು ನೀಡಿ ಕರ್ನಾಟಕದಲ್ಲಿ ಅತಿ ಹೆಚ್ಚು ಲೋಕಸಭಾ ಸದಸ್ಯರನ್ನು ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಮಲ್ಲು ನಾಯಕ್ ಮಾತನಾಡಿ ಅಭಿವೃದ್ಧಿ ಹೊಂದಬೇಕಾದರೆ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿರಬೇಕು ಕಾರಣ ಎಲ್ಲರೂ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಬಹುಮತದಿಂದ ಆರಿಸಿ ತರಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಸಿದ್ದಣ್ಣ ನಾಗಠಾಣ, ಈರಣ್ಣ ಪಟ್ಟಣಶೆಟ್ಟಿ, ಸುರೇಶ ಹಾರಿವಾಳ, ಹುಸೇನ್ ಬಾಷಾ ಲಷ್ಕರಿ, ಎಂ ಎಂ ಅತ್ತಾರ್, ಡಾ.ಕೆ ಎಂ ಬಿರಾದಾರ ( ಗುಡ್ನಾಳ), ಅಲ್ಲಾಭಕ್ಷ ಲಷ್ಕರಿ, ಮೋತಿಲಾಲ್ ಉಣ್ಣಿಬಾವಿ ,ಆರ್ ಬಿ ಬಾಣಕಾರ್, ಮೋತಿಸಾಬ ತಳೇವಾಡ, ಸಂಗಮೇಶ ಬಳಿಗಾರ, ಅಲಿ ಚಪ್ಪರಬಂದ , ರಾಘವೇಂದ್ರ ವಡವಡಗಿ, ಶಂಕರಲಿAಗ ಗೌಡರ, ಮಲಿಕ್ ಬಾಗವಾನ್, ಸಂಗಮೇಶ ಕೆಂಬಾವಿ, ನೀಲು ನಾಯಕ್ ,ಆಸೀಫ್ ಕಾಶಿನಕುಂಟಿ, ಶೇಖಪ್ಪ ದೊಡಮನಿ, ರಾಜು ಚಿತ್ರದುರ್ಗ, ಪರುಶುರಾಮ ಕಾರಿ, ಗಂಗಾಧರ ವಾರದ,ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Most Popular

To Top
error: Content is protected !!