Gummata Nagari

Headlines

ಟಿವ್ಹಿಯಲ್ಲಿ ಎಕ್ಸಿಟ್ ಪೋಲ್ ಪ್ರಸಾರಕ್ಕೆ ನಿರ್ಬಂಧ : ಜಿಲ್ಲಾಧಿಕಾರಿ

 

ಕಲಬುರಗಿ: ಸಾರ್ವತ್ರಿಕ ಲೋಕಸಭೆ ಚುನಾವಣೆ-2024ಕ್ಕೆ ಸಂಬAಧಿಸಿದoತೆ ಗುಲಬರ್ಗಾ ಲೋಕಸಭಾ ಕ್ಷೇತ್ರಕ್ಕೆ ಮೇ 7 ರಂದು ಸೇರಿ ದೇಶದಾದ್ಯಂತ ಒಟ್ಟು 7 ಹಂತದಲ್ಲಿ ಮತದಾನ ನಡೆಯಲಿದ್ದು, ಜನಪ್ರತಿನಿಧಿ ಕಾಯ್ದೆ-1951ರ 126(ಎ) ಪ್ರಕಾರ ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮದಲ್ಲಿ ಎಕ್ಸಿಟ್ ಪೋಲ್ ಪ್ರಸಾರಕ್ಕೆ ನಿರ್ಬಂಧಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಮತ್ತು ಜಿಲ್ಲಾ ಎಂ.ಸಿ.ಎA.ಸಿ ಸಮಿತಿ ಅಧ್ಯಕ್ಷೆ ಬಿ.ಫೌಜಿಯಾ ತರನ್ನುಮ್ ತಿಳಿಸಿದ್ದಾರೆ.

ಏಪ್ರಿಲ್ 19 ರಂದು ಮೊದಲನೇ ಹಂತದ ಮತದಾನ ಮತ್ತು ಜೂನ್ 1ಕ್ಕೆ ಕೊನೆ ಹಂತದ ಮತದಾನ ನಡೆಯಲಿರುವ ಹಿನ್ನೆಲೆಯಲ್ಲಿ ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಏಪ್ರಿಲ್ 19ರ ಬೆಳಿಗ್ಗೆ 7 ಗಂಟೆಯಿoದ ಜೂನ್ 1 ರ ಸಾಯಂಕಾಲ 6.30 ಗಂಟೆ ವರೆಗೆ ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳು ಮತದಾನ್ನೋತ್ತರ ಸಮೀಕ್ಷೆ ಪ್ರಸಾರ ಮಾಡುವಂತಿಲ್ಲ ಎಂದು ಅವರು ತಿಳಿಸಿದ್ದಾರೆ.

ಇದಲ್ಲದೆ ಜನಪ್ರತಿನಿಧಿ ಕಾಯ್ದೆ-1951ರ ಸೆಕ್ಷನ್ 126(1)(ಬಿ) ಪ್ರಕಾರ ಸಹ ಮತದಾನದ ಕೊನೆ 48 ಗಂಟೆ ಅವಧಿಯಲ್ಲಿ ಎಲೆಕ್ಟಾçನಿಕ್ ಮಾಧ್ಯಮದಲ್ಲಿ ಮತದಾರರ ಮೇಲೆ ಪ್ರಭಾವ ಬೀರುವ ಯಾವುದೇ ಅಭಿಪ್ರಾಯ ಸಂಗ್ರಹಣೆ ಅಥವಾ ಯಾವುದೇ ಇತರ ಸಮೀಕ್ಷೆಯ ಫಲಿತಾಂಶಗಳನ್ನು ಒಳಗೊಂಡAತೆ ಚುನಾವಣಾ ವಿಷಯವನ್ನು ಪ್ರದರ್ಶಿಸುವುದನ್ನು ಸಹ ನಿಷೇಧಿಸಲಾಗಿದೆ.

 

Most Popular

To Top
error: Content is protected !!