Gummata Nagari

Bijapur

ವಿದ್ಯುತ್ ಅವಘಡ ತಡೆಗೆ ಕ್ರಮ ವಹಿಸಿ

ದೇವರ ಹಿಪ್ಪರಗಿ: ಹಳ್ಳಿಗಳಲ್ಲಿ ಮಳೆಗಾಲದಲ್ಲಿ ಸಂಭವಿಸುವ ವಿದ್ಯುತ್ ಅವಘಡಗಳಿಗೆ ಅಗತ್ಯ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹುಣಶ್ಯಾಳ ಗ್ರಾಪಂ ಮಾಜಿ ಅಧ್ಯಕ್ಷೆ ಬಂಗಾರೆಮ್ಮ ಮಾನಪ್ಪ ದೊಡಮನಿ ತಹಶೀಲ್ದಾರರಿಗೆ ಮನವಿ ಸಲ್ಲಿಸಿ ಆಗ್ರಹಿಸಿದರು.

ಮನವಿ ಸಲ್ಲಿಸಿದ ಬಳಿಕ ಬಂಗಾರೆಮ್ಮ ದೊಡಮನಿ ಮಾತನಾಡಿ, ಹಿಂದಿನ ವರ್ಷಗಳಿಗಿಂತ ಈ ವರ್ಷ ಹೆಚ್ಚು ಗಾಳಿ, ಮಳೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕಂಬ ಹತ್ತಿ ಕೆಲಸ ಮಾಡುತ್ತಿದ್ದ ಲೈನ್‌ಮನ್ ವಿದ್ಯುತ್ ಸ್ಪರ್ಶಿಸಿ ಸಾವು, ಅಪಾಯಕ್ಕೆ ಆಹ್ವಾನ ನೀಡುವ ಟ್ರಾನ್ಸ್ಫಾರ್ಮರ್, ಮರದ ಕೊಂಬೆ ತಗುಲಿ ವಿದ್ಯುತ್ ಕಡಿತ, ಫುಟ್‌ಪಾತ್, ರಸ್ತೆ ಅತಿಕ್ರಮಿಸಿಕೊಂಡ ವಿದ್ಯುತ್ ಕಂಬ. ಹೀಗೆ ನಿತ್ಯ ನೂರೆಂಟು ವಿದ್ಯುತ್ ಅವಘಡಗಳು ಕಂಡು ಬರುತ್ತವೆ ಎಂದರು.

ಲೈನ್‌ಮನ್‌ಗಳು ಕಂಬಗಳಲ್ಲಿ ವಿದ್ಯುತ್ ಸ್ಪರ್ಶಿಸಿ ಸಾಯುವ ಸಂಗತಿಗಳು ಇತ್ತೀಚೆಗೆ ಹೆಚ್ಚುತ್ತಿವೆ. ಬಹುತೇಕ ಯುವ ಲೈನ್‌ಮನ್‌ಗಳನ್ನು ನೇಮಕ ಮಾಡಿಕೊಂಡ ನಂತರ ನಿಯಮಿತವಾಗಿ ತರಬೇತಿ ಕೊಡುತ್ತಿಲ್ಲ. ಪವರ್‌ಮನ್ ಆಗಿ ಕೆಲಸಕ್ಕೆ ಸೇರುವವರು ಕಾಲೇಜಿನಲ್ಲಿ ಕಲಿತ ತಾಂತ್ರಿಕತೆಗೂ, ಈಗ ಅವರು ಸೇವೆ ಸಲ್ಲಿಸುತ್ತಿರುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಕೆಲಸದ ಸ್ಥಳದಲ್ಲಿ ನಿರ್ಲಕ್ಷ್ಯ. ಕಂಬ ಹತ್ತುವ ಮುನ್ನ ಫೀಡರ್ ಆಫ್ ಮಾಡಿಕೊಳ್ಳದೆ ಹಾಗೂ ಅದೇ ಫೀಡರ್‌ನಲ್ಲಿ ವಿದ್ಯುತ್ ಪ್ರವಹಿಸುತ್ತಿದೆಯೇ ಅಥವಾ ಇಲ್ಲವೇ ಎಂಬುದನ್ನು ಖಾತರಿಪಡಿಸಿಕೊಳ್ಳದೇ ಇದ್ದದ್ದು ಅವಘಡಕ್ಕೂ ಕಾರಣವಾಗಿವೆ. ಕೆಲವು ಸಂದರ್ಭದಲ್ಲಿ ಹೋಟೆಲ್, ಆಸ್ಪತ್ರೆಗಳಲ್ಲಿ ಬಳಕೆ ಮಾಡುವ ಜನರೇಟರ್‌ಗಳಲ್ಲಿನ ವಿದ್ಯುತ್ ಪ್ರವಹಿಸುತ್ತದೆ. ಇವೆಲ್ಲವೂ ಅವಘಡಕ್ಕೆ ಕಾರಣವಾಗಿವೆ ಎಂದು ಹೆಳಿದರು.

ಗುತ್ತಿಗೆದಾರರು ಎಂಜಿನಿಯರ್ ಹೇಳಿದ ನಿರ್ದಿಷ್ಟ ಕಡೆ ಕಂಬಗಳನ್ನು ಅಳವಡಿಸದೇ ಎಲ್ಲೆಂದರಲ್ಲಿ ಹಾಕಿರುತ್ತಾರೆ. ಇದು ಕೂಡ ಅಪಾಯಕ್ಕೆ ಆಹ್ವಾನ ವಾಗಿದೆ. ಗ್ರಾಮೀಣದಲ್ಲಿ ರೈತರ ಹೊಲ ಗದ್ದೆಗಳಲ್ಲಿ ತೆಂಗಿನ ಮರದ ಗರಿಗೆ, ಇತರ ಮರದ ರೆಂಬೆ-ಕೊAಬೆಗಳಿಗೆ ವಿದ್ಯುತ್ ತಂತಿಗಳು ಸ್ಪರ್ಶಿಸುವಷ್ಟು ವಿದ್ಯುತ್ ತಂತಿ ಹಾಗೂ ಕಂಬಗಳು ಭಾಗಿರುತ್ತವೆ, ಇವುಗಳಲ್ಲಿ ವಿದ್ಯುತ್ ಪ್ರವಹಿಸಿ ಜನ ಜಾನುವಾರುಗಳ ಜೀವಹಾನಿ ಸಂಭವಿಸಬಹುದು ಎಂದರು.

ಹಳೆಯ ಕಂಬಗಳ ಬದಲಿಗೆ ಹೊಸ ವಿದ್ಯುತ್ ಕಂಬಗಳನ್ನು ಮತ್ತು ತಂತಿಗಳನ್ನು ಹಾಕಲು ಕ್ರಮ ಕೈಗೊಳ್ಳಬೇಕು. ವಿದ್ಯುತ್ ಕಂಬ ಹಾಗೂ ತಂತಿಗಳನ್ನು ಕೆಇಬಿ ಇಲಾಖೆಯವರು ಆಗಾಗ ಪರಿಶೀಲಿಸಬೇಕು. ರಸ್ತೆಗಳ ಪಕ್ಕದಲ್ಲಿ ವಿದ್ಯುತ್ ತಂತಿಗಳು ಹಾಗೂ ಪರಿವರ್ತಕ ತಂತಿಗಳು ಮರದ ಕೊಂಬೆಗಳಿಗೆ ತಗುಲಿರುವ ದೃಶ್ಯ ಕಾಣಸಿಗುತ್ತವೆ. ಕೈಚಾಚಿದರೆ ಕೈಗೆ ತಗುಲುವ ರೀತಿಯಲ್ಲಿರುವ ವಿದ್ಯುತ್ ತಂತಿಗಳು ಹಾಗೂ ಮೀಟರ್ ಬೋರ್ಡ್ ಅನ್ನು ಸರಿಪಡಿಸಬೇಕು. ಮಳೆ ಸುರಿದ ಸಂದರ್ಭ ವಿದ್ಯುತ್ ತಂತಿಗಳು ಹಾಗೂ ಪರಿವರ್ತಕಗಳಿಂದ ಸಾವು ನೋವು ಉಂಟಾಗಬಹುದು. ಕೆಲವು ಕಡೆ ಬೀದಿ ದೀಪಗಳನ್ನು ಸಂಪರ್ಕ ನೀಡಲು ಅಳವಡಿಸಿರುವ ಸ್ವಿಚ್ ಬೋರ್ಡ್ ಮಕ್ಕಳ ಕೈಗೆ ಎಟುಕುವಂತಿರುತ್ತವೆ. ವಿದ್ಯುತ್ ಅವಘಡಗಳಿಗೆ ಸಂಬAಧಿಸಿದAತೆ ಸಾಮಾನ್ಯ ನಿರ್ವಹಣಾ ನಿಯಮ (ಎಸ್.ಓ.ಪಿ.) ಜಾರಿಗೊಳಿಸಲು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಗಮನವಹಿಸಬೇಕು. ಜನರ ಈ ಬೇಡಿಕೆಗೆ ಆಯೋಗ ಸ್ಪಂದಿಸಬೇಕು ಎಂದರು.

Most Popular

To Top
error: Content is protected !!