Gummata Nagari

Bijapur

ವಿಶ್ವ ಜಲ ದಿನಾಚರಣೆ ನಿಮಿತ್ಯ ವಿಚಾರ ಸಂಕಿರಣ

 

ಬಿಜಾಪುರ: ನಗರದ ಮಹಾತ್ಮಗಾಂಧಿ ಭವನದಲ್ಲಿಕರ್ನಾಟಕ ಜಲ ಬಿರಾದಾರಿ, ಜಿಲ್ಲಾ ಕಾನೂನು ಸೇವಾ ಪ್ರಧಿಕಾರ, ಪರಸಕ್ಕಾಗಿ ನಾವು ಒಕ್ಕೂಟ, ರೋಟರಿಕ್ಲಬ್ ಮಾರ್ನುಮೆಂಟ್ ಹೆರಿಟೇಜ್ ಸಹಯೋದಲ್ಲಿ ವಿಶ್ವ ಜಲ ದಿನದ ನಿಮಿತ್ಯ ನೀರಿನ ಅಭಾವ ಮತ್ತು ಸದ್ಬಳಕೆ ಕುರಿತು ವಿಚಾರ ಸಂಕಿರಣ ಕಾರ್ಯಕ್ರಮ ನಡೆಯಿತು.
ಪ್ರಧಾನ ಸಿವಿಲ್ ನ್ಯಾಯಾಧೀಶ ಶ್ರೀ.ವಿಶ್ವನಾಥ ಯಮಕನ ಮರಡಿ 101 ನದಿಗಳಿಂದ ಸಂಗ್ರಿಹಿಸಿಟ್ಟ ನೀರಿನ ಕಳಸದಿಂದ ಸಸಿಗೆ ನೀರುಣಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ನಂತರ ಪ್ರಧಾನ ಸಿವ್ಹಿಲ್ ನ್ಯಾಯಾಧೀಶರಾದ ಶ್ರೀ.ವಿಶ್ವನಾಥ ಯಮಕನ ಮರಡಿ ಅವರು ಮಾತನಾಡಿ, ಪಂಚ ಮಹಾಭೂತಗಳಾದ ನೀರು, ಭೂಮಿ, ಆಕಾಶ, ಅಗ್ನಿ, ಗಾಳಿ ಇವುಗಳನ್ನು ಸಂರಕ್ಷಿಸಿ ಉಳಿಸಿ ಕಾಪಾಡಿಕೊಂಡು ಬರಬೇಕಾದ ಕರ್ತವ್ಯ ಪ್ರತಿಯೊಬ್ಬ ಪ್ರಜೆಯದ್ದಾಗಿದೆ. ನೀರನ್ನು ಹಿತವಾಗಿ ಮಿತವಾಗಿ ಬಳಸಿ ಮುಂದಿನ ಭವಿಶ್ಯದಜನಾಂಗಕ್ಕೂ ನೀರು ಉಳಿಸಬೇಕೆಂದು ಹೇಳಿದರು.

ನೀರು ಭೂಮಿಯ ಮೇಲಿನ ಅಮೂಲ್ಯವಾದ ವಸ್ತು ಇದರಿಂದ ಪ್ರತಿಯೊಂದುಜೀವಸoಕುಲಕ್ಕೆ ಬುನಾದಿಯಾಗಿದೆ.ಇಂದು ನೀರಿನ ಮಹತ್ವಗೊತ್ತಿದ್ದರೂಬಹುತೇಕರುರಕ್ಷಣೆ ಮಾಡುವಲ್ಲಿ ಬೇಜವಾಬ್ದಾರಿತೋರುತ್ತಿದ್ದಾರೆ.ಪ್ರತಿಯೊಬ್ಬರೂ ಪರಿಸರ ಪೂರಕವಾಗಿ ಕಾರ್ಯಚಟುವಟಿಕೆಗಳು ಮಾಡಿದರೆ ಮಾತ್ರ ಭವಿಷ್ಯದಲ್ಲಿ ನೀರು ಸಿಗಲು ಸಾದ್ಯ.ಇಲ್ಲದೇ ಪರಿಸರ ವಿರುದ್ದ ನಡೆದುಕೊಂಡರೆ ನಿಸರ್ಗವೇ ಮುನಿಸಿಕೊಂಡು ಅತೀವೃಷ್ಠಿ ಅನಾವೃಷ್ಠಿಯಂತಹ ಅನಾಹುತಗಳು ಎದುರಿಸಬೇಕಾಗುತ್ತದೆ.ಇಂದು ಮನುಷ್ಯತನ್ನಅತೀಯಾದಆಸೆಯಿಂದ ಪರಿಸರ ನಾಶಮಾಡಿ ಪ್ರತಿಯೋಂದುಜೀವವೈವಿದ್ಯತೆಗೆಕಾರಣವಾಗಿದ್ದಾನೆ. ಇಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆದುಜನರಲ್ಲಿಅರಿವು ಮೂಡಿಸುವುದು ಈ ಘಳಿಗೆಯ ತುರ್ತುಅವಶ್ಯವಾಗಿದೆಎಂದರು.

ನೀರಿಲ್ಲದೇ ಪ್ರತಿ ಜೀವರಾಶಿಗಳು ಬದುಕುಳಿಯಲು ಸಾಧ್ಯವಿಲ್ಲ,ನೀರು ಮಹತ್ವದ್ದಾಗಿದ್ದುಇದರ ಸಂರಕ್ಷಣೆಗೆ ವಿಶ್ವದ ಪ್ರತಿಯೊಬ್ಬ ಪ್ರಜ್ಞಾವಂತನಾಗರಿಕರು ಪ್ರತಿಜ್ಞೆ ಮಾಡಬೇಕು.ಜಲವನ್ನು ಮನಬಂದAತೆ ಪೋಲು ಮಾಡಿ ಹಾಳು ಮಾಡಬಾರದು. ಮಾನವ ನಿರ್ಮಿತಯಾವುದೇ ಅಂಶ ಕೈಕೊಟ್ಟರೆರಿಪೇರಿಮಾಡಬಹುದುಆದರೆ ನಿಸರ್ಗವೇ ಹಾಳದರೆ ಮಾನವರ ಸಕಲ ಜೀವಿಗಳ ನಾಶಕ್ಕೆ ದಾರಿಯಾಗುತ್ತದೆಕಾರಣ ಎಚ್ಚರಿಕೆವಹಿಸಿ ಜಲ ಸಂರಕ್ಷಿಸಬೇಕೆoದುಎoದು ನುಡಿದರು.

ಮುಖ್ಯ ಅತಿಥಿಯಾಗಿ ಜಲ ಬಿರಾದರಿ ಸಂಸ್ಥೆಯ ಜಿಲ್ಲಾ ಅಧ್ಯಕ್ಷ ಪೀಟರ್ ಅಲೆಕ್ಸಾಂಡರ ಮಾತನಾಡಿ, ಬಿಜಾಪುರ ಜಿಲ್ಲೆಯಲ್ಲಿ ಐದು ನದಿಗಳ ಜಿಲ್ಲೆ ಎಂದು ಹೆಸರುವಾಸಿಯಾಗಿದೆ. ಬಿಜಾಪುರ ಆದಿಲ್‌ಶಾಹಿ ರಾಜರಕಾಲದಲ್ಲಿ ಬಾವನ್ ಸೌ ಬಾವಡಿಗಳು ನೂರಾರು ಕೆರೆಗಳು ಇದ್ದವು. ಆದರೆ ಇಂದು ಇವೆಲ್ಲಾ ನೋಡಲು ಸಿಗುತ್ತಿಲ್ಲ. ಎಷ್ಟೋ ಬಾವಿಗಳು ಕೆರೆಗಳು ಖಾಸಗಿಯವರ ಪಾಲಾಗುತ್ತಿವೆ. ಸರಕಾರ ಇವುಗಳನ್ನು ಸ್ವಾದಿನಪಡಿಸಿಕೊಂಡು ಅಬಿವೃದ್ಧಿ ಮಾಡಬೇಕಾಗಿದೆ. ಅಂದಾಗ ಮಾತ್ರ ನೀರು ಒದಗಿಸಲು ಸಾದ್ಯವಾಗುತ್ತದೆ ಎಂದರು.

ವಕೀಲ ಮಲ್ಲಿಕಾರ್ಜುನ ಭೃಂಗಿಮಠ ಮಾತನಾಡಿ, ಬಿಜಾಪುರ ಸೇರಿದಂತೆ ಕರ್ನಾಟಕದ ಭೀಮೆ, ಕಾಗಿಣ, ಕೃಷ್ಣ, ಮುಂತಾದ ನದಿಗಳ ನೀರು ನದಿಗಳ ನೀರು ಕೆಲವು ಜನರಿಂದ ಕಲುಷಿತವಾಗುತ್ತಿವೆ. ಅದರಿಂದ ಜನಜೀವನದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿರುವುದು ಸಾಕಷ್ಟು ಮಾದ್ಯಮಗಳಲ್ಲಿ ವರದಿಯಾದರೂ ಸಂಬoಧಿಸಿದ ಅಧಿಕಾರಿಗಳು ರಾಜಕಾರಣಿಗಳು ಏನು ಮಾಡುತ್ತಿದ್ದಾರೆ ಎಂಬ ಪ್ರಶ್ನೆ ಸಮಾಜದಲ್ಲಿ ವ್ಯಕ್ತವಾಗುತ್ತಿದೆ ಎಂದರು.

ಪ್ರಾದ್ಯಪಕ ಡಾ.ಚೇತನ ಮುರಾಳ ಮತ್ತು ಪ್ರೊ.ಸೈಫ್‌ಅತ್ತಾರ ಮಾತನಾಡಿದರು.

ಸಮಾಜ ಚಿಂತಕ ಡಾ.ರಿಯಾಜ್ ಫಾರುಕಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು.

ಸಂಘಟಿಕರಾದ ಮಹಾಂತೇಶ ಕೆರುಟಗಿ, ಪ್ರವೀಣಗೌಡ ಪಾಟೀಲ, ಸತೀಶ ಪಡಸಲಗಿ, ರಾಜು ಹಾಗೂ ಬಾಲಾಶ್ರಮದ ಸಿಬ್ಬಂದಿಗಳಾದ ಯಲ್ಲಪ್ಪ ಇರಕಲ್, ಮಂಜುನಾಥ ಸಿಕ್ಯಾಬ ಇಂಜನಿಯರಿAಗ ಕಾಲೇಜಿನ ನೀರು ನಿರ್ವಹಣೆ ವಿಭಾಗದ ವಿದ್ಯಾರ್ಥಿಗಳು ಹಾಗೂ ಬಾಲಶ್ರಮದ ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಜಲ ಬಿರಾದರಿ ಸಂಸ್ಥೆಯ ಜಿಲ್ಲಾ ಕಾರ್ಯದರ್ಶಿ ಬಾಳು ಜೇವೂರ ಕಾರ್ಯಕ್ರಮ ನೀರೂಪಣೆ ಮಾಡಿದರು.

 

 

 

 

 

 

 

Most Popular

To Top
error: Content is protected !!