Gummata Nagari

Bijapur

ಗಡಿಚೆಕ್ ಪೋಸ್ಟನಲ್ಲಿ ಕಟ್ಟುನಿಟ್ಟಿನ ಕ್ರಮಕ್ಕೆ ಜಿಲ್ಲಾಧಿಕಾರಿ ಸೂಚನೆ

 

ಔರಾದ್: ಅಧಿಕಾರಿಗಳು ಗಡಿಚೇಕ್ ಪೋಸ್ಟ್ ಗಳಲ್ಲಿ ಕಟ್ಟುನಿಟ್ಟಾಗಿ ಕರ್ತವ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಹೇಳಿದರು.
ಗುರುವಾರ ರಾತ್ರಿ ಅವರು ತಾಲೂಕಿನ ತೆಲಂಗಾಣದ ಗಡಿಗೆ ಹೊಂದಿಕೊAಡಿರುವ ಕರ್ನಾಟಕದ ವಿಜಯನಗರ ತಾಂಡಾ ಮತ್ತು ಮಹಾರಾಷ್ಟçದಗಡಿಗೆ ಹೊಂದಿಕೊAಡಿರುವ ಕರ್ನಾಟಕದ ವನಮಾರಪಳ್ಳಿ ಚೇಕ್ ಪೋಸ್ಟ್ ಗಳಿಗೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಮಾತನಾಡಿದ ಅವರು, ಲೋಕ ಸಭೆಚುನಾವಣೆ 2024ರ ಸಂಬAಧ ಚುನಾವಣಾ ಅಕ್ರಮಗಳನ್ನು ತಡೆಗಟ್ಟಲು ಜಿಲ್ಲಾಡಳಿತ ಎಲ್ಲ ಸಕಲ ವ್ಯವಸ್ಥೆಗೆ ಸನ್ನಧವಾಗಿದೆ. ಚೇಕ್ ಪೋಸ್ಟ್ ಗಳಲ್ಲಿ ಕಾರ್ಯನಿರತ ಸಿಬ್ಬಂದಿಗಳು ಉತ್ತಮ ರೀತಿಯಿಂದ ಕೆಲಸ ಮಾಡಿ ಚುನಾವಣಾ ಕಾರ್ಯಕ್ಕೆ ಸಹಕರಿಸಬೇಕಾಗಿದೆ ಎಂದರು.
ಎಸ್ ಪಿ ಚನ್ನಬಸವಣ್ಣ ಲಂಗೋಟಿ ಮಾತನಾಡಿ, ಚುನಾವಣಾ ಅಕ್ರಮಗಳನ್ನು ತಡೆಗಟ್ಟಲು ಅಧಿಕಾರಿಗಳು ಅತ್ಯಂತ ಚಾಣಕ್ಷö್ಯತನದಿಂದ ಚುರುಕಾಗಿ ಮತ್ತು ಪ್ರಮಾಣಿಕವಾಗಿ ಕೆಲಸ ಮಾಡುವ ಅಗತ್ಯವಿದೆ. ಮತದಾರರಿಗೆ ನೀಡಲು ಹಣ, ಉಡುಗೊರೆ, ಸಾಗಿಸುವುದನ್ನುತಡೆಗಟ್ಟಲುಎಲ್ಲ ಗಡಿಗಳಲ್ಲಿ ಚೇಕ್ ಪೋಸ್ಟ್ ಗಳನ್ನು ತೆರೆಯಲಾಗಿದೆ.ಕಾರ್ಯನಿರತ ಸಿಬ್ಬಂದಿ ಹಾಗು ಅಧಿಕಾರಿಗಳು ಗಡಿಯಲ್ಲಿ ಸಂಚರಿಸುವ ಪ್ರತಿಯೊಂದು ವಾಹನದ ಬಗ್ಗೆ ನಿಖರ ಮಾಹಿತಿ ಪಡೆದುಕೊಂಡು ಅವುಗಳನ್ನು ಕಡ್ಡಾಯವಾಗಿತಪಾಸಣೆ ಮಾಡಿ, ಅಕೃಮ ಕೃತ್ಯಗಳಿಗೆ ಕಡಿವಾಣ ಹಾಕಬೇಕು ಎಂದರು.
ನAತರ ವಾಹನಗಳನ್ನು ತಡೆದು ಪರಿಶೀಲಿಸಿದರಲ್ಲದೇ ಸಿಬ್ಬಂದಿಗಳಿಗೆ ಸಲಹೆ ಸೂಚಣೆ ಗಳನ್ನು ನೀಡಿದರು.

 

Most Popular

To Top
error: Content is protected !!