Gummata Nagari

Bijapur

ಭೂತಾನ್‌ನ ಅತ್ಯುನ್ನತ ನಾಗರಿಕ ಪ್ರಶಸ್ತಿ ಸ್ವೀಕರಿಸಿದ ಪ್ರಧಾನಿ ಮೋದಿ

 

ದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಭೂತಾನ್‌ನ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಆರ್ಡರ್ ಆಫ್ ದಿ ಡ್ರುಕ್ ಗ್ಯಾಲ್ಪೋವನ್ನು ಸ್ವೀಕರಿಸಿದ್ದು, ಈ ಗೌರವವನ್ನು ಪಡೆದ ಮೊದಲ ಭೂತನ್ ದೇಶದ ಹೊರಗಿನ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಭೂತಾನ್‌ನ ದೊರೆ ಜಿಗ್ಮೆ ಖೇಸರ್ ನಾಮ್‌ಗ್ಯೆಲ್ ವಾಂಗ್‌ಚುಕ್ ಅವರನ್ನು ಥಿಂಪುವಿನಲ್ಲಿ ಅವರು ತಮ್ಮ ಎರಡು ದಿನಗಳ ರಾಜ್ಯ ಭೇಟಿಯ ಮೊದಲ ದಿನ ಭೇಟಿಯಲ್ಲಿ ಮೋದಿಯರನ್ನು ಈ ಪ್ರಶಸ್ತಿ ನೀಡಿ ಸನ್ಮಾನಿಸಲಾಗಿದೆ.

ಪ್ರಧಾನಿ ಮೋದಿ ಭೂತಾನ್‌ನ ಪ್ರತಿಷ್ಠಿತ ನಾಗರಿಕ ಗೌರವವನ್ನು ಪಡೆದ ಮೊದಲ ವಿದೇಶಿ ಸರ್ಕಾರದ ಮುಖ್ಯಸ್ಥರಾಗಿದ್ದಾರೆ. ಉಭಯ ನಾಯಕರು ರಾಜಧಾನಿಯಲ್ಲಿ ಭೇಟಿಯಾದ ನಂತರ ಭೂತಾನ್‌ನ ರಾಜ ಜಿಗ್ಮೆ ಅವರು ಪಿಎಂ ಮೋದಿಯವರಿಗೆ ಆರ್ಡರ್ ಆಫ್ ದಿ ಡ್ರುಕ್ ಗ್ಯಾಲ್ಪೋ ಪ್ರಶಸ್ತಿಯನ್ನು ನೀಡಿದರು. ಸ್ಥಾಪಿತವಾದ ಶ್ರೇಯಾಂಕ ಮತ್ತು ಪ್ರಾಶಸ್ತ್ಯದ ಪ್ರಕಾರ, ಆರ್ಡರ್ ಆಫ್ ದ ಡ್ರುಕ್ ಗ್ಯಾಲ್ಪೋ ಅನ್ನು ಜೀವಮಾನದ ಸಾಧನೆಗಾಗಿ ನೀಡುವ ಪ್ರಶಸ್ತಿಯಾಗಿ ಸ್ಥಾಪಿಸಲಾಯಿತು. ಇದು ಭೂತಾನ್‌ನಲ್ಲಿ ಅತ್ಯುನ್ನತ ಗೌರವವಾಗಿದೆ.

ಪ್ರಶಸ್ತಿಯನ್ನು ಇಲ್ಲಿಯವರೆಗೆ ಕೇವಲ ನಾಲ್ಕು ಗಣ್ಯ ವ್ಯಕ್ತಿಗಳಿಗೆ ಮಾತ್ರ ನೀಡಲಾಗಿದೆ. 2008 ರಲ್ಲಿ ಹರ್ ಮೆಜೆಸ್ಟಿ ರಾಯಲ್ ಕ್ವೀನ್ ಗ್ರ‍್ಯಾಂಡ್ ಮದರ್ ಆಶಿ ಕೆಸಾಂಗ್ ಚೋಡೆನ್ ವಾಂಗ್‌ಚುಕ್ ಪ್ರಶಸ್ತಿ ಸ್ವೀಕರಿಸಿದ್ದರು. 2008 ರಲ್ಲಿ ಜೆ ತ್ರಿಜೂರ್ ಟೆಂಜಿನ್ ಡೆಂಡಪ್ (68 ನೇ ಭೂತಾನ್ ನ ಜೆ ಖೆನ್ಪೋ) ಮತ್ತು 2018 ರಲ್ಲಿ ಅವರ ಜೆ ಖೆನ್ಪೋ ಟ್ರುಲ್ಕು ನ್ಗಾವಾಂಗ್ ಜಿಗ್ಮೆ ಚೋಡ್ರಾ ಸ್ವೀಕರಿಸಿದ್ದಾರೆ. ಜೆ ಖೆನ್ಪೋ ಭೂತಾನ್ ನ ಕೇಂದ್ರ ಸನ್ಯಾಸಿಗಳ ಮುಖ್ಯ ಮಠಾಧೀಶರಾಗಿದ್ದಾರೆ.

Most Popular

To Top
error: Content is protected !!