Gummata Nagari

Bijapur

ಹೋಳಿ ಹಾಗೂ ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ಶಾಂತಿಸಭೆ

 

ನಿಡಗುoದಿ: ಪಟ್ಟಣದ ಪೋಲಿಸ್ ಠಾಣೆಯಲ್ಲಿ ಹೋಳಿ ಹಬ್ಬ ಹಾಗೂ ರಂಜಾನ್ ಹಬ್ಬ ಬರುತ್ತಿರುವ ಹಿನ್ನೆಲೆಯಲ್ಲಿ ಯಾವುದೇ ಕೋಮು ಗಲಭೆಗೆ ಆಸ್ಪದ ಕೊಡದೇ ಸೌಹಾರ್ದದಿಂದ ಹಬ್ಬಗಳನ್ನು ಆಚರಿಸುವ ಉದ್ದೇಶದಿಂದ ಶಾಂತಿ ಸಭೆ ಏರ್ಪಡಿಸಲಾಗಿತ್ತು.

ಈ ಕುರಿತು ಮಾತನಾಡಿದ ಸಿಪಿಐ ಶರಣಗೌಡ ಪಾಟೀಲ, ಹಬ್ಬ ಹರಿದಿನಗಳು ನಮ್ಮನ್ನು ಒಂದುಗೂಡಿಸಲು ಇರುವ ಆಚರಣೆಗಳಾಗಿವೆ, ಯಾವುದೇ ಹಬ್ಬಗಳಿರಲಿ, ಒಂದಾಗಿ ಆಚರಣೆ ಮಾಡಬೇಕು, ಬೇಧ ಭಾವವಿಲ್ಲದೇ ಪರಸ್ಪರ ಸೌಹಾರ್ದತೆಯಿಂದ ಆಚರಣೆ ಮಾಡಬೇಕು ಎಂದರು.

 

ಪಿಎಸ್ಐ ಶಿವರಾಜ್ ಧರಿಗೊಂಡ ಮಾತನಾಡಿ, ಮುಂಬರುವ ಹೋಳಿ ಹಬ್ಬ ಹಾಗೂ ರಂಜಾನ್ ಹಬ್ಬಗಳನ್ನು ಸಾಮರಸ್ಯದಿಂದ ಆಚರಣೆ ಮಾಡಬೇಕು, ಸಾಮರಸ್ಯ ಕದಡುವ ಕಿಡಿಗೇಡಿಗಳ ವಿರುದ್ಧ ಪೋಲಿಸ್ ಇಲಾಖೆ ಕ್ರಮ ಕೈಗೊಳ್ಳುತ್ತದೆ, ಆತಂಕವಿಲ್ಲದೇ ಹಬ್ಬಗಳನ್ನು ಆಚರಿಸಿ ಎಂದು ಹೇಳಿದರು.

ಕಾಂಗ್ರೆಸ್ ಮುಖಂಡ ಶೇಖಪ್ಪ ಬಳಿಗಾರ ಮಾತನಾಡಿ, ಸಮಾಜದಲ್ಲಿ ಶಾಂತಿ ಸಹಬಾಳ್ವೆಯಿಂದ ಬಾಳಬೇಕು, ಎಲ್ಲಾ ಸಮಾಜಗಳನ್ನು ಒಗ್ಗೂಡಿ ಹಬ್ಬ ಹರಿದಿನಗಳನ್ನು ಆಚರಿಸಬೇಕು, ವಿಜಯಪುರ ಜಿಲ್ಲೆಯಲ್ಲಿಯೇ ಸೌಹಾರ್ದತೆಗೆ ನಿಡಗುಂದಿ ಹೆಸರಾಗಿದೆ ಎಂದರು.

ಮಾಜಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಮೌಲಾಸಾಬ ಅತ್ತಾರ ಮಾತನಾಡಿ, ಹಬ್ಬಹರಿದಿನಗಳನ್ನು ಹಿಂದೂ ಮುಸ್ಲಿಮರು ಒಟ್ಟಾಗಿ ಆಚರಿಸುಂತಾಗಬೇಕು, ಬರುವ ಹೋಳಿ ಹಬ್ಬ ಹಾಗೂ ರಂಜಾನ್ ಹಬ್ಬಗಳನ್ನು ಸಾಮರಸ್ಯದಿಂದ ಆಚರಿಸೋಣ ಎಂದರು. ಇದೇ ವೇಳೆ ಪಟ್ಟಣ ಪಂಚಾಯಿತಿ ಸದಸ್ಯರಾದ ಶಿವಾನಂದ ಮುಚ್ಚಂಡಿ, ಕಾಂಗ್ರೆಸ್ ಮುಖಂಡರಾದ ಸುರೇಶ್ ಸಣ್ಣಮನಿ , ಕಾಂಗ್ರೆಸ್ ಮುಖಂಡ ರಾಘವೇಂದ್ರ ವಡವಡಗಿ ಮಾತನಾಡಿದರು.

ರೈತ ಮುಖಂಡರಾದ ರಾಜೇಸಾಬ್ ಬಾಣಕಾರ್ ,ಅಂಜುಮನ್ ಕಾರ್ಯದರ್ಶಿ ಲಾಲಸಾಬ್ ಹೆರಕಲ್, ರೈತ ಸಂಘದ ತಾಲೂಕ ಗೌರವಾಧ್ಯಕ್ಷರಾದ ಅಲ್ಲಾಭಕ್ಷ ಲಷ್ಕರಿ, ನಿಡಗುಂದಿಯ ಗಣ್ಯರಾದ ಹುಸೇನ್ ಬಾಷಾ ಲಷ್ಕರಿ, ಮುಖಂಡರಾದ ಮೆಹಬೂಬ ವಾಲಿಕಾರ್, ಎಐಸಿಸಿ ಮಾನವ ಹಕ್ಕುಗಳ ಸಮಿತಿಯ ಗೊಳಸಂಗಿ ಗ್ರಾಮ ಘಟಕದ ಅಧ್ಯಕ್ಷ ಇಮ್ತಿಯಾಜ್ ಹೆಬ್ಬಾಳ, ಪಟ್ಟಣ ಪಂಚಾಯತಿ ಸದಸ್ಯರಾದ ಗಂಗಾಧರ್ ವಾರದ್, ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷ ಮೋತಿಸಾಬ್ ತಳೆವಾಡ, ರೈತ ಸಂಘದ ಗೊಳಸಂಗಿ ಗ್ರಾಮ ಘಟಕದ ಅಧ್ಯಕ್ಷ ಇಬ್ರಾಹಿಂ ಸಾಬ್ ಕಮತಗಿ, ಪಟ್ಟಣ ಪಂಚಾಯಿತಿ ಸದಸ್ಯರಾದ ಬಸಲಿಂಗಪ್ಪ ಕಾಜಗಾರ, ಕಾಂಗ್ರೆಸ್ ಯುವ ಮುಖಂಡರಾದ ರಾಘವೇಂದ್ರ ವಡವಡಗಿ, ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಬಸವರಾಜ ಆಲಕೊಪ್ಪರ, ನಿಡಗುಂದಿ ತಾಲೂಕಾ ರೈತ ಸಂಘದ ಅಧ್ಯಕ್ಷರಾದ ಡಾ. ಕೆ.ಎಂ.ಬಿರಾದಾರ (ಗುಡ್ನಾಳ) ಹಾಗೂ ಅನೇಕರು ಹಾಜರಿದ್ದರು.

Most Popular

To Top
error: Content is protected !!