Gummata Nagari

Bijapur

ರಾಜಕೀಯ ಅನುಭವ ನನ್ನ ಕುಟುಂಬದ ರಕ್ತದಲ್ಲಿದ್ದೆ: ಸಾಗರ ಖಂಡ್ರೆ

 

ಕಾಳಗಿ: ಬೀದರ ಕ್ಷೇತ್ರದ ಕಾಂಗ್ರೆಸ್ ಲೋಕಸಭಾ ಅಭ್ಯರ್ಥಿ ಸಾಗರ ಖಂಡ್ರೆ ರವರು ಚಿಕ್ಕದಿದೆ ಎಂದರು ಬೇಜಾರಿಲ್ಲ! ಆದರೆ ರಾಜಕೀಯ ಅನುಭವ ಜನರ ಸೇವೆ ಮಾಡುವ ಭಾಗ್ಯ ಖಂಡ್ರೆ ಕುಟುಂಬದ ರಕ್ತದಲ್ಲಿದೆ ಎಂದು ಕಾಂಗ್ರೆಸ್ ಲೋಕಸಭಾ ಅಭ್ಯರ್ಥಿ ಸಾಗರ ಖಂಡ್ರೆ ಹೇಳಿದರು.

ಪಟ್ಟಣದ ಗುತ್ತೇದಾರ ತೋಟದ ಮನೆಯಲ್ಲಿ ಹಮ್ಮಿಕೊಂಡ ಕಾಳಗಿ ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಮಾವೇಶದ ವೇದಿಕೆಯಲ್ಲಿ ಮಾತನಾಡಿದರು. ಒಂದು ಬಾರಿ ನನಗೆ ಲೋಕಸಭಾ ಸದಸ್ಯರಾಗಿ ಸಹಕರಿಸಿ ಕಾಂಗ್ರೆಸ್ ಪಕ್ಷಕ್ಕೆ ಮತನೀಡಿದರೆ ನಿಮ್ಮ ಮನೆ ಮಗನಿಗೆ ಸಹಕರಿಸಿದಂತೆ ಎಂದರು.

ಪ್ರೀಯಾAಕ್ ಖರ್ಗೆ ಮಾತನಾಡಿ, ಬಾಬಾ ರಾಮದೇವ ಚೋರ ಗುರು ಚಂಡಾಳ ಶಿಷ್ಯ ಭಗವಂತ ಖೂಬಾ. ಹಿಂತವರಿಗೆ ಮತ ನೀಡಿದರೆ ಈ ಭಾಗದ ಅಭಿವೃದ್ಧಿ ಕುಂಟಿತವಾಗುತ್ತದೆ.

ಬೀದರ್‌ನಲ್ಲಿ ಬಿಜೆಪಿಯಲ್ಲಿ ನೂರು ಬಾಗಿಲಾಗಿದೆ ಯಾರೋಬ್ಬ ಶಾಸಕರು ಮಚಯಾಚನಗೆ ಬರುತ್ತಿಲ್ಲ. ಖೂಬಾ ಹಾಟವೋ ಬೀದರ್ ಬಚವೋ ಎನ್ನುವ ಅಭಿಯಾನ ನಡೆಸುತ್ತಿದ್ದಾರೆ ಅಲ್ಲಿನ ಶಾಸಕರು ಹಿಂತವರಿಗೆ ನಿಮ್ಮ ಆಯ್ಕೆ ಸರಿಅಲ್ಲ ಎಂದರು.

ಸಚಿವರಾದ ಈಶ್ವರ ಖಂಡ್ರೆ, ರಹೀಮಖಾನ್, ಬಿಆರ್ ಪಾಟೀಲ, ಬಾಬುರಾವ ಚಿಂಚನಸೂರ, ತಿಪ್ಪಣ್ಣಪ್ಪ ಕಮಕನೂರ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವ ಗುತ್ತೇದಾರ, ರೇವುನಾಯಕ ಬೆಳಮಗಿ, ಶರಣು ಮೋದಿ, ಭೀಮರಾವ ಟಿಟಿ, ಬಸವರಾಜ ಪಾಟೀಲ ಹೇರೀರ, ಬಸವರಾಜ ಜಾವಬಶೆಟ್ಟಿ, ಶಂಬುಲಿAಗ ಗೂಂಡಗುರ್ತಿ, ಯುವ ಕಾಂಗ್ರೆಸ ಅಧ್ಯಕ್ಷ ಶರಣು ಮಜ್ಜಗಿ ಕೊಡದೂರ, ಚಿಂತನ ರಾಠೋಡ, ಗಣಪತಿ ಹಾಳಕಾಯಿ, ನಾರಾಯಣರಾವ ಭರತನೂರ, ರೇವಣಸಿದ್ದಪ್ಪ ಮಾಸ್ಟರ್, ಮಲ್ಲಿಕಾರ್ಜುನ ಪಾಟೀಲ ಹುಳಗೇರಾ, ಶಿವರಾಜ ಪಾಟೀಲ ಕಲಗುರ್ತಿ, ದೇವಿಂದ್ರ ಹೆಬ್ಬಾಳ, ರಾಘವೇಂದ್ರ ಗುತ್ತೇದಾರ, ಬಸವರಾಜ ಕೊಲಕುಂದಿ, ವೇದಪ್ರಕಾಶ ಮೊಟಗಿ, ಮುರುಘೇಂದ್ರ ಭರತನೂರ, ಅವಿನಾಶ್ ಸೇಗೂರ, ಪ್ರಶಾಂತ ರಾಜಾಪೂರ, ಮಲ್ಲಪ್ಪ ದಿಗ್ಗಾವ ಸೇರಿ ಅನೇಕರಿದ್ದರು.

Most Popular

To Top
error: Content is protected !!