Gummata Nagari

Bijapur

ಲಚ್ಯಾಣ: ಲಿಂ.ಶ್ರೀ ಶಂಕರಲಿoಗೇಶ್ವರ ಮಹಾರಥೋತ್ಸವ

 

ಇಂಡಿ: ತಾಲೂಕಿನ ಸುಕ್ಷೇತ್ರ ಲಚ್ಯಾಣ ಕ್ಷೇತ್ರದ ಅಧಿಪತಿ ಪವಾಡ ಪುರುಷ ಶ್ರೀ ಸಿದ್ಧಲಿಂಗ ಮಹಾರಾಜರು ಪ್ರಾರಂಭಿಸಿದ ಗುರು ಶ್ರೀ ಶಂಕರಲಿoಗೇಶ್ವರ ಮಹಾರಥೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ, ಕ್ರೀಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಇದೇ ಏಪ್ರೀಲ್ 25 ರಿಂದ 30ರ ವರೆಗೆ ಆಯೋಜಿಸಲಾಗಿದೆ.

ಏ.25 ರಂದು ಜಾನುವಾರ ಜಾತ್ರೆಗೆ ಚಾಲನೆ ನೀಡಲಾಗುವದು. ಏ.27 ರಂದು ಬೆಳಿಗ್ಗೆ 8 ಗಂಟೆಗೆ ಶ್ರೀ ಸಿದ್ಧಲಿಂಗ ಮಹಾರಾಜ ಕಮರಿಮಠದ ಆವರಣದಲ್ಲಿ ಬಂಥನಾಳದ ಶ್ರೀ ಡಾ. ವೃಷಭಲಿಂಗೇಶ್ವರ ಮಹಾಶಿವಯೋಗಿಗಳ ಸಾನಿಧ್ಯದಲ್ಲಿ ಜರುಗುವ ಷಟಸ್ಥಲ ಧ್ವಜಾರೋಹಣವನ್ನು ಹಳಿಂಗಳಿಯ ಶ್ರೀ ಶಿವಾನಂದ ಮಹಾಸ್ವಾಮೀಜಿ ನೆರವೇರಿಸಲಿದ್ದಾರೆ.

ಬಳಿಕ 10.30 ಗಂಟೆಗೆ “ಸರ್ವಧರ್ಮದ ಸರಳ ಸಾಮೂಹಿಕ ವಿವಾಹ” ಕಾರ್ಯಕ್ರಮ ಜರುಗಲಿದೆ. ಬಂಥನಾಳ ಹಾಗೂ ಲಚ್ಯಾಣ ಮಠದ ಪೀಠಾಧೀಶ ಶ್ರೀ ಡಾ. ವೃಷಭಲಿಂಗೇಶ್ವರ ಮಹಾಶಿವಯೋಗಿಗಳು, ಮುಗಳಖೋಡದ ಶ್ರೀ ಷಡಕ್ಷರಿ ಶ್ರೀ ಡಾ. ಮುರುಘರಾಜೇಂದ್ರ ಮಹಾಸ್ವಾಮೀಜಿ, ಹಳಿಂಗಳಿಯ ಶ್ರೀ ಶಿವಾನಂದ ಮಹಾಸ್ವಾಮೀಜಿ, ಹುಣಶ್ಯಾಳ ಪಿ.ಜಿ.ಯ ಶ್ರೀ ನಿಜಗುಣಾನಂದ ಮಹಾಸ್ವಾಮೀಜಿ, ಮದರಖಂಡಿ ಕಮರಿಮಠದ ಶ್ರೀ ದುಂಡೇಶ್ವರ ಮಹಾಸ್ವಾಮೀಜಿ ಸಾನಿಧ್ಯವಹಿಸಲಿದ್ದಾರೆ. ಬಳಿಕ ರೈತ ಮುಖಂಡ ಬಸವಂತರಾಯಗೌಡ ಪಾಟೀಲ ಅವರಿಂದ ಅನ್ನ ಪ್ರಸಾದ ಸೇವೆ ನಡೆಯಲಿದೆ.

ಇದೇ ದಿನ ಸಾಯಂಕಾಲ 4.30 ಗಂಟೆಗೆ ಇತ್ತೀಚೆಗೆ ತೆರೆದ ಕೊಳವೆ ಬಾವಿಯಲ್ಲಿ ಬಿದ್ದು ಬದುಕುಳಿದು ಪವಾಡ ಸೃಷ್ಟಿಸಿದ “ಬಾಲಕ ಸಾತ್ವಿಕ್ ಮುಜಗೊಂಡನ ತೊಟ್ಟಿಲೋತ್ಸವ ಹಾಗೂ ಮರುನಾಮಕರಣ” ಕಾರ್ಯಕ್ರಮ ನಡೆಯಲಿದೆ. ಬಳಿಕ 5 ಗಂಟೆಗೆ “ಶಿವಾನುಭವ ಗೋಷ್ಠಿ” ನಡೆಯಲಿದೆ. ಬಂಥನಾಳದ ಶ್ರೀ ಡಾ. ವೃಷಭಲಿಂಗೇಶ್ವರ ಮಹಾಶಿವಯೋಗಿಗಳು, ಯರನಾಳದ ಶ್ರೀ ಗುರು ಸಂಗನಬಸವ ಮಹಾಸ್ವಾಮೀಜಿ, ನಾಗಠಾಣದ ಉದಯೇಶ್ವರ ಮಠದ ಶ್ರೀ ಚನ್ನಮಲ್ಲಿಕಾರ್ಜುನ ಮಹಾಸ್ವಾಮೀಜಿ, ಹಳಿಂಗಳಿಯ ಶ್ರೀ ಶಿವಾನಂದ ಮಹಾಸ್ವಾಮೀಜಿ, ಜಕನೂರಿನ ಶ್ರೀ ಸಿದ್ಧಲಿಂಗ ದೇವರು, ಗೊಳಸಾರದ ಶ್ರೀ ಅಭಿನವ ಪುಂಡಲಿoಗ ಮಹಾಸ್ವಾಮೀಜಿ, ಹೂವಿನಹಿಪ್ಪರಗಿಯ ಪತ್ರಿಮಠದ ಮೋತೋಶ್ರೀ ದ್ರಾಕ್ಷಾಯಣಿ ಅಮ್ಮನವರು, ತುಂಗಳದ ಶ್ರೀ ಸಿದ್ಧಲಿಂಗ ಶಾಂಭವಿ ಆಶ್ರಮದ ಮಾತೋಶ್ರೀ ಅನುಸೂಯಾದೇವಿ ಅಮ್ಮನವರು ಹಾಗೂ ಚಿಕ್ಕಪಡಸಲಗಿಯ ಶ್ರೀ ಸಿದ್ಧಲಿಂಗ ಮಹಾರಾಜರ ಮಠದ ಮಾತೋಶ್ರೀ ಅಕ್ಕಮಹಾದೇವಿ ಅಮ್ಮನವರು ಈ ಕಾರ್ಯಕ್ರಮದ ಸಾನಿಧ್ಯವಹಿಸಲಿದ್ದಾರೆ.

ರಾತ್ರಿ 8ಕ್ಕೆ ಬಂಥನಾಳದ ಲಿಂ. ಶ್ರೀ ವೃಷಭಲಿಂಗೇಶ್ವರ ಮಹಾಶಿವಯೋಗಿಗಳ ಪಾಲಕಿ ಪುರ ಪ್ರವೇಶ, 9 ಗಂಟೆಗೆ ಅಗ್ನಿ ಪ್ರಜ್ವಲನ, 10 ಗಂಟೆಗೆ ಲೋಣಿ. ಕೆ.ಡಿ. ಗ್ರಾಮದ ಯುವ ಧುರಿಣ ರಮೇಶ ದಾಯಗೋಡೆ ಭಕ್ತಿ ಸೇವೆಯಲ್ಲಿ ಮದ್ದು ಸುಡುವ ಕಾರ್ಯಕ್ರಮ. ನಂತರ 10.30ಕ್ಕೆ ಸ್ಥಳಿಯ ಶ್ರೀ ಸಿದ್ಧಲಿಂಗೇಶ್ವರ ನಾಟ್ಯ ಸಂಘದಿAದ “ರೇಣುಕಾ ಯಲ್ಲಮ್ಮ” ಎಂಬ ಭಕ್ತಿ ಪ್ರದಾನ ನಾಟಕ ಪ್ರದರ್ಶನಗೊಳ್ಳಲಿದೆ.

ಏ.28 ರಂದು ಬೆಳಿಗ್ಗೆ 11 ಗಂಟೆಗೆ ಬಂಥನಾಳದ ಶ್ರೀ ಡಾ. ವೃಷಭಲಿಂಗ ಮಹಾಶಿವಯೋಗಿಗಳ ಅಡ್ಡ ಪಲ್ಲಕ್ಕಿ ಉತ್ಸವ ಹಾಗೂ ಅಗ್ನಿ ಶಮನ ಕಾರ್ಯಕ್ರಮ. ಸಂಜೆ 5 ಗಂಟೆಗೆ ಬಂಥನಾಳದ “ಲಿಂಗೈಕ್ಯ ಶ್ರೀ ಶಂಕರಲಿAಗೇಶ್ವರ ಮಹಾಶಿವಯೋಗಿಗಳ ಮಹಾರಥೋತ್ಸವ” ಜರುಗಲಿದೆ. ರಾತ್ರಿ 10.30 ಗಂಟೆಗೆ ಸ್ಥಳಿಯ ಶ್ರೀ ಸಿದ್ಧಲಿಂಗೇಶ್ವರ ನಾಟ್ಯ ಸಂಘದಿoದ “ಪಂಕಜಾ” ಅರ್ಥಾತ್ “ರಕ್ಷಾಬಂಧನ” ಎಂಬ ಸಾಮಾಜಿಕ ನಾಟಕ ಪ್ರದರ್ಶಗೊಳ್ಳಲಿದೆ.

ಏ.29 ರಂದು ಬೆಳಿಗ್ಗೆ 11 ಗಂಟೆಗೆ ಪ್ರಸಿದ್ದ ಜಂಗಿ ಕುಸ್ತಿ, ಸಂಜೆ 4 ಗಂಟೆಗೆ “ಬೆಳ್ಳಿಯ ಗಧೆಯ ಕುಸ್ತಿ” ಪಂದ್ಯ ಜರುಗಲಿದೆ. ಕುಸ್ತಿ ಪಟು ಚಂದಪ್ಪ ಯಳಮೇಲಿ ಅವರಿಂದ ಗಧಾ ಕುಸ್ತಿ ಸೇವೆ ನಡೆಯಲಿದೆ.

ಏ.30 ರಂದು ಪ್ರಸಿದ್ಧ ಜಾನುವಾರಗಳಿಗೆ ಪ್ರಶಸ್ತಿ ಪತ್ರ ವಿತರಣೆ ಮಾಡಲಾಗುವದು. ಇಂಡಿ ಪಟ್ಟಣದಿಂದ 12 ಕಿ.ಮೀ. ದೂರದಲ್ಲಿರುವ ಈ ಕ್ಷೇತ್ರ ತಲುಪಲು ಬಸ್, ಬಿಜಾಪುರ, ಸೋಲಾಪುರದಿಂದ ನೇರ ರೈಲು ಸೌಲಭ್ಯವಿದೆ ಎಂದು ಇಲ್ಲಿನ ಕಮರಿಮಠದ ಮಠದ ವ್ಯವಸ್ಥಾಪಕ ಮಂಡಳಿಯು ಪ್ರಕಟಣೆಯಲ್ಲಿ ತಿಳಿಸಿದೆ.

 

Most Popular

To Top
error: Content is protected !!