Gummata Nagari

Bijapur

ಅಕಾಲಿಕ ಮಳೆ: ಧರೆಗುರಳಿದ ಬಿಎಸ್ ಎನ್ ಎಲ್ ಟವರ್

ಚಡಚಣ: ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಸುರಿದ ಮಳೆ ಹಾಗೂ ಬೀಸಿದ ಬಿರುಗಾಳಿಗೆ ಬಿ ಎಸ್ ಎನ್ ಎಲ್ ಟವರ್, ವಿವಿಧ ಮನೆ ಮೇಲಿನ ಪಾತ್ರ, ಲಿಂಬೆ ಗಿಡಗಳು, ಗ್ಲಾಸ್ ಗಳು ಒಡೆದು ಚುರಾಗಿ ಅಪಾರ ಪ್ರಮಾಣದಲ್ಲಿ ಹಾನಿಯಾದ ಘಟನೆ ಸೋಮವಾರ ಸಂಜೆ ನಡೆದಿದೆ.
ಧರೆಗುರಳಿದ ಟವರ್: ತಾಲೂಕಿನ ರೇವತಗಾಂವ ಗ್ರಾಮದಲ್ಲಿ ಬೀಸಿದ ಬಿರುಗಾಳಿಗೆ ಬಿ ಎಸ್ ಎನ್ ಎಲ್ ಟವರ್ ಬಿದ್ದು ಸುಮಾರು ಐದರಿಂದ ಆರು ಮನೆಗಳು ಜಖಂ ಗೊಂಡಿವೆ. ಯಾವುದೇ ಜೀವ ಹನಿಯಾಗಿಲ್ಲ ಎಂದು ತಿಳಿದು ಬಂದಿದೆ.
ಪಟ್ಟಣದ ದೇವರ ನಿಂಬರಗಿ ಕ್ರಾಸ್ ಬಳಿಯಿರುವ ಓಂ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ತಡೆ ಗೋಡೆ ಬಿದ್ದಿದೆ. ಅದೇ ಅವರಣದಲ್ಲಿದ ಜಿಪಿ ಕಾಲೇಜ್ ಫಾರ್ಮಸಿ ಕಾಲೇಜಿನ ಗ್ಲಾಸಗಳು ಬಿರುಗಾಳಿಗೆ ಸಹಿತ ಆಲಿಕಲ್ಲು ಮಳೆಗೆ ಒಡೆದು ಚುರಾಗಿ ಲಕ್ಷಾಂತರ ರೂಪಾಯಿ ಹಾನಿಯಾಗಿದೆ ಎಂದು ಹೇಳಲಾಗುತ್ತಿದೆ.
ಆರಿಫ್ ಕೊತ್ವಲ್ ಅವರಿಗೆ ಸೇರಿದ ಸುಮಾರು 40ಕ್ಕೂ ಅಧಿಕ ಪತ್ರಾ ಸೆಡ್ಡು ಹಾರಿಹೋಗಿದೆ. ಸ್ವಲ್ಪ ಸಮೀಪದಲ್ಲಿರುವ ಟಾಟಾ ಮೋಟರ್ಸ ತಡೆಗೋಡೆ ಬಿದ್ದು ಒಳಗಿದ್ದ ವಾಹನಗಳು ಜಕಮ್ಗೊಂಡಿವೆ ಎಂದು ತಿಳಿದು ಬಂದಿದೆ.

ಸಂಗೊಳ್ಳಿ ರಾಯಣ್ಣ ವೃತ್ತದ ದ್ವಜ ಕಂಬ ಮುರಿದು ಬಿದ್ದಿದೆ. ಪಟ್ಟಣದ ಎಂ ಇ ಎಸ್ ಕೈಗಾರಿಕಾ ತರಬೇತಿ ಕೇಂದ್ರದ ಪಾತ್ರಸ್ ಹಾರಿ ಹೋಗಿ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ ಎಂದು ತಿಳಿದು ಬಂದಿದೆ.
ಪಟ್ಟಣದ ಹೊರವಲಯದಲ್ಲಿರು ವಿನಾಯಕ ದೈಟನ ಎಂಬುವವರಿಗೆ ಸೇರಿದ ಒಂದು ಎಕರೆ ಜಮೀನಿನಲ್ಲಿದ್ದ ಸುಮಾರು 30 ಲಿಂಬೆ ಗಿಡಗಳು ನೇಲಸಮಗೊಂಡ ಘಟನೆ ನಡೆದಿದೆ.
ಘಟನಾ ಸ್ಥಳಕ್ಕೆ ತಹಶೀಲ್ದಾರ ರಾಜೇಶ ಬುರ್ಲಿ, ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಶಿವಾನಂದ ಪೂಜಾರಿ, ಸರ್ಕಲ್ ಪಂಡಿತ ಕೊಡಹೊನ್ನ, ಗ್ರಾಮ ಲೆಕ್ಕಾಧಿಕಾರಿ ವಿಠ್ಠಲ ಕೋಳಿ ಸೇರಿದಂತೆ ವಿವಿಧ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.

Most Popular

To Top
error: Content is protected !!