Gummata Nagari

Bijapur

ವೈಭವದ ಜಗದ್ಗುರು ರೇವಣಸಿದ್ದೇಶ್ವರ ರಥೋತ್ಸವ

ಕಾಳಗಿ: ಕಲ್ಯಾಣ ಕರ್ನಾಟಕದ ಪ್ರಸಿದ್ಧ ದೇವಸ್ಥಾನ ಶ್ರೀಕ್ಷೇತ್ರ ರೇವಗ್ಗಿ (ರಟಕಲ್) ಗುಡ್ಡದಲ್ಲಿ ಶುಕ್ರವಾರ ಸಂಜೆ ರೇವಣಸಿದ್ದೇಶ್ವರ ರಥೋತ್ಸವ ಅದ್ಧೂರಿಯಾಗಿ ಜರುಗಿತು.

ಪ್ರತಿ ವರ್ಷದಂತೆ ಈ ಬಾರಿಯೂ ರೇಣುಕಾಚಾರ್ಯರ ಜಯಂತಿಯoದು ಭಕ್ತರು ರಥೋತ್ಸವ ನೆರವೇರಿಸಿ ಸ್ವಾಮಿ ಕೃಪೆಗೆ ಪಾತ್ರರಾದರು. ಹೂಹಾರಗಳಿಂದ ಸಿಂಗರಿಸಿದ ರಥಕ್ಕೆ ಪೂಜೆ ಸಲ್ಲಿಸಿ, ತೆಂಗು ಒಡೆದು, ಕಳಸಾರೋಹಣ ಮಾಡಿ ಪುರವಂತರ ವೀರಗಾಸೆ ನೃತ್ಯ ಮುಗಿಯುತ್ತಿದ್ದಂತೆ, ಭಕ್ತರಿಂದ ಜೈ ಘೋಷ ಕೇಳಿಬಂದವು. ಗುಡ್ಡದಲ್ಲಿ ಸೇರಿದ್ದ ಅಪಾರ ಭಕ್ತರು ರಥದ ಮೇಲೆ ಖಾರೀಕ್ ನಾರು, ಬಾಳೆಹಣ್ಣು ಎಸೆದು ಹರೆಕೆ ಸಲ್ಲಿಸಿದರು.

ಇದಕ್ಕೂ ಮುಂಚೆ ಬೆಳಿಗ್ಗೆ ಜಗದ್ಗುರು ರೇವಣಸಿದ್ದೇಶ್ವರ ಕರ್ತೃ ಗದ್ದುಗೆಗೆ ಸುತ್ತಲಿನ ಏಳೂರು ಭಕ್ತರಿಂದ ವಿಶೇಷ ಪೂಜೆ ಸಲ್ಲಿಸಿದರು. ನಂತರ ವಿವಿಧ ಮಠಾಧೀಶರ ಸಮ್ಮುಖದಲ್ಲಿ ಜಂಗಮ ವಟುಗಳ ಅಯ್ಯಾಚಾರ ದಿಕ್ಷೆ ನೀಡಲಾಯಿತು. ಬಳಿಕ ಜಗದ್ಗುರು ರೆಣುಕಾಚಾರ್ಯರ ಬೆಳ್ಳಿ ತೊಟ್ಟಿಲು ಕಾರ್ಯಕ್ರಮ ಇದೆ ವೇಳೆ 51 ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಜರುಗಿತು.

ಬಳಿಕ ಹಲಗೆ, ಡೊಳ್ಳು, ಭಾಜಾ-ಭಜಂತ್ರಿ ವಾದ್ಯ-ಮೇಳದ ಝೇಂಕಾರದೊAದಿಗೆ ಭೆಡಸೂರ, ಅರಣಕಲ್ ಗ್ರಾಮದಿಂದ ನಂದಿಕೋಲು, ಸುಭಾಷ ದೇವರಮನಿಯಿಂದ ಕುಂಭ ಹಾಗೂ ಗುಡಿಯಿಂದ ಕಳಸದ ಭವ್ಯ ಮೆರವಣಿಗೆಯೊಂದಿಗೆ ರಥೋತ್ಸವದೆಗೆ ತರುವರು. ರೆಣುಕಾಚಾರ್ಯರ ಮೂರ್ತಿ ರಥದಲ್ಲಿಡುತ್ತಿದ್ದಂತೆ ಸೇಡಂ ಎ.ಸಿ.ಹಾಶಪ್ಪ, ದೇವಸ್ಥಾನ ಕಾರ್ಯದರ್ಶಿ ಸದಾಶಿವ ವಗ್ಗೆ ಅವರಿಂದ ಚಾಲನೆ ದೊರಕಿತು.

ನೀರಗುಡಿ ಹವಾಮಲ್ಲಿನಾಥ ಮಹಾರಾಜ, ಹೊನ್ನಕಿರಣಗಿ ಚಂದ್ರಗುoಡ ಶ್ರೀ ಸುಗೂರ ಚನ್ನರುದ್ರಮುನಿ ಶ್ರೀ, ಚಂದನಕೇರಾ ಅಭಿನವ ರಾಚೋಟೇಶ್ವರ ಶ್ರೀ ಕೋಡ್ಲಿಯ ಬಸವಲಿಂಗ ಶ್ರೀ, ಸಂಸ್ಥಾನಿಕ ಚನ್ನಬಸಪ್ಪ ದೇವರಮನಿ, ಶಾಸಕ ಅವಿನಾಶ ಜಾಧವ, ಗಿರೀಶ್ ದೇವರಮನಿ, ವೀರಯ್ಯ ಮಠಪತ್ತಿ ಮುಕರಂಬಾ,ಸುಭಾಷ್ಚoದ್ರ ಪಾಟೀಲ ಕನ್ನಡಗಿ, ಶಂಕರ ಹೇರೂರ, ಅಣವೀರಯ್ಯ ಸಾಲಿ, ದತ್ತಾತ್ರೇಯ ಕುಲಕರ್ಣಿ,ಶಿವರಾಜ ಪಾಟೀಲ ಗೊಣಗಿ, ದತ್ತಾತ್ರೇಯ ರಾಯಗೋಳ, ರೇವಶೆಟ್ಟಿ ಪಾಟೀಲ ಗೊಣಗಿ, ರಾಜು ಗುಡದಾ ರಟಕಲ್, ರೇವಣಸಿದ್ದ ಬಡಾ,ಈ ವೀರಣ್ಣಾ ಗಂಗಾಣಿ, ರವೀಂದ್ರ ಪಾಟೀಲ ಭೇಡಸೂರ, ಅಜೀಂ ಪಟೇಲ್, ಇಮ್ತೀಯಾಜ ಅಲಿ, ಸುರೇಶ್ ಪೆದ್ದಿ ಅರಣಕಲ, ಶರಣು ಸೀಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಕಾಳಗಿ ಸಿಪಿಐ, ಪಿಎಸ್ಐ ವಿಶ್ವನಾಥ ಬಾಕಳೆ, ಎಎಸ್‌ಐ ಅಶ್ವಥ್ ಕುಲಕರ್ಣಿ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ ವದಗಿಸಲಾಗಿತ್ತು.

Most Popular

To Top
error: Content is protected !!