Gummata Nagari

Bijapur

ಬಿಜಾಪುರ: ಚುನಾವಣಾ ಸಿಬ್ಬಂದಿ ನಡೆ ಮತಗಟ್ಟೆ ಕಡೆ

 

ಬಿಜಾಪುರ: ಬಿಜಾಪುರ ಮೀಸಲು (ಪ.ಜಾ) ಲೋಕಸಭಾ ಕ್ಷೇತ್ರಕ್ಕೆ ಮೇ. 7 ರಂದು ಮತದಾನ ನಡೆಯಲಿರುವ ಹಿನ್ನಲೆಯಲ್ಲಿ ಸೋಮವಾರ (ಇಂದು) ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ವಿವಿಧ ವಿಧಾನಸಭಾ ಕ್ಷೇತ್ರದ ಮಸ್ಟರಿಂಗ್ ಕೇಂದ್ರಗಳಿoದ ವಿದ್ಯುನ್ಮಾನ (ಇವಿಎಂ) ಮತಯಂತ್ರ ಹಾಗೂ ಇನ್ನಿತ್ತರ ಸಾಮಗ್ರಿ ಪಡೆದ ಚುನಾವಣಾ ಸಿಬ್ಬಂದಿ ತಮಗೆ ಸೂಚಿಸಿರುವ ಮತಗಟ್ಟೆಯತ್ತ ಕಡೆ ಸಾಗಿದರು.


ಸೋಮವಾರ ಬೆಳಗ್ಗೆಯಿಂದಲೆ ಮಸ್ಟರಿಂಗ್ ಕೇಂದ್ರಗಳಲ್ಲಿ ಚುನಾವಣಾ ಸಿಬ್ಬಂದಿ ಹಾಜರಿದ್ದು ತಮ್ಮ ಮತಗಟ್ಟೆಗೆ ಇವಿಎಂ ಯಂತ್ರ, ಬ್ಯಾಲೆಟ್ ಯೂನಿಟ್, ಕಂಟ್ರೋಲ್ ಯೂನಿಟ್, ವಿವಿ ಪ್ಯಾಟ್ ಸೇರಿದಂತೆ ಇನ್ನಿತರ ಸಾಮಗ್ರಿಗಳನ್ನು ಸಹಾಯಕ ಚುನಾವಣಾಧಿಕಾರಿಗಳಿಂದ ಪಡೆಯುವ ದೃಶ್ಯ ಕಂಡು ಬಂದಿತು
ಮುದ್ದೇಬಿಹಾಳ, ದೇವರ ಹಿಪ್ಪರಗಿ, ಬಸವನ ಬಾಗೇವಾಡಿ, ಬಬಲೇಶ್ವರ, ವಿಜಯಪುರ ನಗರ, ನಾಗಠಾಣ, ಸಿಂದಗಿ, ಇಂಡಿ ಸೇರಿ ಎಲ್ಲಾ ಕ್ಷೇತ್ರದ ಮಸ್ಟರಿಂಗ್ ಕೇಂದ್ರದಲ್ಲಿ ಅಗತ್ಯವಾದ ಸಿದ್ಧತೆಯಲ್ಲಿ ತೊಡಗಿರುವ ಸಿಬ್ಬಂದಿ ಹಾಜರಿದ್ದಿದ್ದು ಕಾಣಬಹುದಾಗಿತ್ತು.

 


ಬೇಸಿಗೆಯ ಬಿಸಿಗಾಳಿ ಶಾಖವಿರುವ ಕಾರಣ ಪೋಲಿಂಗ್ ಸಿಬ್ಬಂದಿಗಳ ಆರೋಗ್ಯ ಬಗ್ಗೆಯೂ ಕಾಳಜಿ ವಹಿಸಲು ಚುನಾವಣಾ ಆಯೋಗ ಸೂಚಿಸಿದ್ದು, ಓಆರ್‌ಎಸ್ ಪಾಕಿಟ್, ಪ್ರಥಮ ಚಿಕಿತ್ಸಾ ಕಿಟ್ ಸಹ ಈ ಸಂದರ್ಭದಲ್ಲಿ ನೀಡಲಾಯಿತು. ಅಲ್ಲದೇ ಆರೋಗ್ಯ ಸಿಬ್ಬಂದಿ ಸಹ ಉಪಸ್ಥಿತರಿದ್ದರು.

 


ಮಹಿಳಾ ಸಿಬ್ಬಂದಿಗಳ 10 ವರ್ಷದೊಳಗಿನ ಮಕ್ಕಳನ್ನು ನೋಡಿಕೊಳ್ಳಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಶಿಶು ಪಾಲನಾ ಕೇಂದ್ರಗಳ ವ್ಯವಸ್ಥೆ ಕಲ್ಪಿಸಲಾಗಿತ್ತು. ಪೋಲಿಂಗ್ ಸಿಬ್ಬಂದಿಗೆ ಮಸ್ಟರಿಂಗ್ ಸೆಂಟರ್‌ನಲ್ಲಿ ಮಧ್ಯಾಹ್ನದ ಊಟದ ವ್ಯವಸ್ಥೆ ಸಹ ಮಾಡಲಾಗಿತ್ತು.

 

Most Popular

To Top
error: Content is protected !!