Gummata Nagari

Bijapur

ಯಲ್ಲಮ್ಮ ದೇವಿ ದರ್ಶನಕ್ಕೆ ಭಕ್ತರಿಗೆ ನಿರ್ಬಂಧ

ಬೆಳಗಾವಿ: ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಮೇ.7 ರಂದು ಮತದಾನ ನಡೆಯಲಿದೆ. ಈಗಾಗಲೇ ಬಹಿರಂಗ ಪ್ರಚಾರಕ್ಕೆ ತೆರೆಬಿದ್ದಿದೆ. 2ನೇ ಹಂತದ ಮತದಾನ ಹಿನ್ನೆಲೆ ನಾಳೆ ಜಿಲ್ಲೆಯ ಸವದತ್ತಿಯ ಯಲ್ಲಮ್ಮನ ಗುಡ್ಡಕ್ಕೆ ಭಕ್ತರಿಗೆ ನಿರ್ಬಂಧ ವಿಧಿಸಲಾಗಿದೆ. ಪ್ರತಿ ಮಂಗಳವಾರ ಲಕ್ಷಾಂತರ ಜನ ಮತದಾನ ಬಿಟ್ಟು ದೇಗುಲಕ್ಕೆ ಆಗಮಿಸುವ ಸಾಧ್ಯತೆ ಹಿನ್ನೆಲೆ ಜಿಲ್ಲಾಡಳಿತ ನಾಳೆ ಯಲ್ಲಮ್ಮ ದೇವಿ ದರ್ಶನಕ್ಕೆ ಭಕ್ತರಿಗೆ ನಿರ್ಬಂಧಿಸಲಾಗಿದೆ.

ಈಗಾಗಲೇ ಬ್ಯಾರಿಕೆಡ್ ಹಾಕಿ ದೇವಸ್ಥಾನದ ಒಳಗೆ ಯಾರು ಬರದಂತೆ ಬಂದ ಮಾಡಲಾಗಿದೆ. ದೇವಿಗೆ ಎಂದಿನAತೆ ಪೂಜಾ ಕಾರ್ಯಗಳು ನಡೆಯಲಿವೆ. ಮೇ.7 ರಂದು ಮತದಾನ ಪ್ರಕ್ರಿಯೆಯಲ್ಲಿ ಭಾಗಿಯಾಗಿ ಮತ ಚಲಾಯಿಸಿ. ದೇವಸ್ಥಾನಕ್ಕೆ ಯಾರು ಬಾರದಂತೆ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಬಿ ಮಹೇಶ್ ಮನವಿ ಮಾಡಿಕೊಂಡಿದ್ದಾರೆ.

ರಾಜ್ಯದಲ್ಲಿ 2ನೇ ಹಂತದ ಲೋಕಸಭಾ ಕ್ಷೇತ್ರಗಳ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಕೊನೆ ಹಂತದ ತಯಾರಿ ನಡೆಯುತ್ತಿದೆ. ಮತಗಟ್ಟೆಗಳತ್ತ ಇವಿಎಂ, ವಿವಿ ಪ್ಯಾಟ್ ಜೊತೆಗೆ ಸಿಬ್ಬಂದಿ ಶಿಫ್ಟ್ ಮಾಡಿದ್ದಾರೆ.
ಚುನಾವಣೆ ಪ್ರಕ್ರಿಯೆ ಅಧ್ಯಯನಕ್ಕೆ 28 ದೇಶಗಳಿಂದ ಪ್ರತಿನಿಧಿ ಬಂದಿದ್ದಾರೆ. ಕಾಂಬೋಡಿಯ, ಮಾಲ್ಡೊವಾ, ನೇಪಾಳ, ಸಿಷೆಲ್, ತುನಿಷಿಯಾದಿಂದ ಬೆಳಗಾವಿಗೆ ಐದು ದೇಶಗಳ 10 ಪ್ರತಿನಿಧಿಗಳ ತಂಡ ಆಗಮಿಸಿದ್ದಾರೆ. ಚುನಾವಣೆ ಸಿದ್ದತೆ, ವಿವಿ ಹಂತದ ಪ್ರಕ್ರಿಯೆ ವಿಕ್ಷಣೆ ಮತ್ತು ಅಧ್ಯಯನಕ್ಕೆ ಆಗಮಿಸಿದ್ದಾರೆ ಎಂದು ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಮಾಹಿತಿ ನೀಡಿದ್ದಾರೆ.

ಮೊದಲ ಹಂತದಲ್ಲಿ ದಕ್ಷಿಣ ಕರ್ನಾಟಕದ 14 ಕ್ಷೇತ್ರಗಳಲ್ಲಿ ಏಪ್ರಿಲ್ 26 ರಂದು ಮತದಾನ ನಡೆದಿತ್ತು. ಮೇ 7 ರಂದು ಅಂದರೆ ನಾಳೆ ಉಳಿದ 14 ಕ್ಷೇತ್ರಗಳಲ್ಲಿ ವೋಟಿಂಗ್ ನಡೆಯಲಿದೆ. ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದ್ದು ಮನೆ ಮನೆ ಪ್ರಚಾರಕ್ಕೆ ಮಾತ್ರ ಅವಕಾಶ ಇದೆ.

Most Popular

To Top
error: Content is protected !!