Gummata Nagari

Headlines

ಬಾಂಬ್ ಸ್ಪೋಟದ ಕುರಿತು ಬಿಜಾಪುರದಲ್ಲಿ ಯತ್ನಾಳ ಪ್ರತಿಕ್ರಿಯೆ

 

ಬಿಜಾಪುರ:   ಬೆಂಗಳೂರಿನಲ್ಲಿನ ರಾಮೇಶ್ವರo  ಹೋಟೇಲ್‌ನಲ್ಲಿನ ಬಾಂಬ್ ಸ್ಪೋಟ ಪ್ರಕರಣದ ಹೋಣೆಯನ್ನು ಭಜರಂಗದಳದ ಮೇಲೆ ಹೊರಿಸುವರಿದ್ದರು ಎಂದು ಆರೋಪಿಸಿ ಬಿಜಾಪುರ ನಗರದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ರಾಜ್ಯ ಕಾಂಗ್ರೇಸ್ ನಾಯಕರ ವಿರುದ್ದ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.

ನಗರದ ರಾಣಿ ಬಗೀಚ್ ಪ್ರದೇಶದಲ್ಲಿ ಇಂದು ಈ ಕುರಿತು ಮಾದ್ಯದೊಂದಿಗೆ ಮಾತನಾಡಿದ ಯತ್ನಾಳ, ಬೆಂಗಳೂರಿನಲ್ಲಿನ ರಾಮೇಶ್ವರo ಹೊಟೇಲ್‌ನಲ್ಲಿನ ಬಾಂಬ್ ಸ್ಪೋಟ ಘಟನೆಯಿಂದ ಬೆಂಗಳೂರು ನಗರ ಬ್ರಾಂಡ್ ಬೆಂಗಳೂರು ಬದಲಾಗಿ ಬಾಂಬ್ ಬೆಂಗಳೂರಾಗಿ ಬದಲಾಗಿದೆ ರಾಜ್ಯ ಭಯೋತ್ಪಾದನ ಚಟುವಟಿಕೆಯ ಪ್ರಯೋಗ ಶಾಲೆಯಾಗಿದೆ. ಜನನಿಬಿಡ ಪ್ರದೇಶದಲ್ಲಿ ಇಂಥಹ ಬಾಂಬ್ ಸ್ಪೋಟಗೊಂಡಿದ್ದರೆ ದೊಡ್ಡ ಅನಾಹುತ ಆಗುತ್ತಿತ್ತು ಎಂದು ದೂರಿದ ಅವರು, ಕುಕ್ಕರ್ ಸ್ಪೋಟ ಘಟನೆಯಲ್ಲೂ ಅವರು ಹೀಗೆಯೇ ಹೇಳಿದ್ದರು. ರಾಜ್ಯದಲ್ಲಿ ನಡೆಯುತ್ತಿರುವ ಇಂಥಹ ಘಟನೆಗಳನ್ನು ನಿಭಾಯಿಸಲು ಆಗದಿದ್ದರೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಕಿಡಿಕಾರಿದ್ದಾರೆ.

ಇತ್ತೀಚೆಗೆ ಬೆಂಗಳೂರಿನ ವಿಧಾನಸಭೆ ಆವರಣದಲ್ಲಿ ನಡೆದ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಎಫ.ಎಸ್.ಎಲ್. ವರದಿ ವಿಚಾರಕ್ಕೆ ಸಂಬoಧಿಸಿದoತೆ ಪ್ರತಿಕ್ರಿಯಸಿದ ಅವರು, ನಾನು ಎಸ್.ಎಫ್.ಎಲ್. ಪರೀಕ್ಷೆಗೆ ಒಳಪಡಿಸುವದು ಬೇಡ ಎಂದಿದ್ದೆ. ಟೆಸ್ಟ ಅನವಶ್ಯಕ ಎಂದಿದ್ದೆ, ಖರ್ಗೆ, ಪರಮೇಶ್ವರ ಸಮರ್ಥನೆ ಮಾಡಿದ್ದರು ಎಂದರು.

ವಿಧಾನಸಭೆಯಲ್ಲಿ ಪಾಕ್ ಪರ ಘೋಷಣೆ ಕೂಗಿದ ಘಟನೆ ನಿಜಾ ಎಂದು ನಾನೆ ಮೊದಲಿ ಟ್ವಿಟ್ ಮಾಡಿದ್ದೆ, ಕರ್ನಾಟಕ ಭಯೋತ್ಪಾದನೆ ಕೃತ್ಯಗಳಿಗೆ ಸುರಕ್ಷಿತ ತಾಣವಾಗಿದೆ ಎಂದು ಆರೋಪಿಸಿ, ಪಾಕಿಸ್ತಾನ ಜಿಂದಾಬಾದ್ ಘೋಷಣೆ ವಿಚಾರದಲ್ಲಿ ನಾಶೀರ್ ಹುಸೇನ್ ಮೇಲೆ ಕ್ರಮ ತೆಗೆದುಕೊಂಡಿಲ್ಲಾ ಎಂದು ಆಕ್ರೋಶ ವ್ಯಕ್ತಪಡಿಸಿದ ಯತ್ನಾಳ ಇಂಥ ಘಟನೆಗಳು ರಾಜ್ಯದಲ್ಲಿ ಭಯೋತ್ಪಾದನೆ ಇಂಬು ಕೊಡುತ್ತಿವೆ ಎಂದ ಅವರು, ಗ್ಯಾರಂಟಿ ಯೋಜನೆ ಮಾತ್ರ ಹೇಳಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಮೇಶ್ವರo ಹೊಟೇಲ್ ನಲ್ಲಿ ಶುಕ್ರವಾರ ದಿನವೇ ಬ್ಲಾಸ್ಟ್ ಮಾಡಿದ್ದಾರೆ. ಉದ್ದೇಶ ಪೂರ್ವಕವಾಗಿ ಮಾಡಿದ್ದಾರೆ. ಅಯೋದ್ಯಾ ಮಂದಿರ ನಿರ್ಮಾಣವಾದ ಕಾರಣ ಮಾಡಿದ್ದಾರೆ. ಇವರೆಲ್ಲಾ ನಾಶವಾಗೋ ಕಾಲ ಬಂದಿದೆ ಎಂದ ಯತ್ನಾಳ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ನಾವೇ ಅಧಿಕಾರಕ್ಕೆ ಬರುತ್ತೇವೆ. ಸಮಾನ ನಾಗರೀಕ ಕಾಯ್ದೆ ಜಾರಿ ಮಾಡುತ್ತೇವೆ. ಒಂದು ಕುಟುಂಬಕ್ಕೆ ಎರಡೇ ಮಕ್ಕಳು ಕಾನೂನು ಜಾರಿ ಮಾಡುತ್ತೇವೆ. ಯಾರಿಗೆ ಪಾಕಿಸ್ತಾನ ಪ್ರೀತಿ ಇದೆ ಅವರು ಪಾಕಿಸ್ತಾನಕ್ಕೆ ಹೋಗಲಿ. ಪಾಕಿಸ್ತಾನಕ್ಕೆ ಜಿಂದಾಬಾದ್ ಎನ್ನುವವರು ಅಲ್ಲಿ ಹೋಗಿ ಎಂದು ವಾಗ್ದಾಳಿ ನಡೆಸಿದರು.

ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ ವಿಚಾರದಲ್ಲಿ ಸ್ಪೀಕರ್ ಯು. ಟಿ. ಖಾದರ್ ಖಡಕ್ ಆಗಿ ಮಾತನಾಡಿ ಎಂದ ಅವರಿಗೆ ಅಭಿನಂದನೆ ಸಲ್ಲಿಸುವೆ. ಮಾಯನ್ಮಾರ್ ನಲ್ಲಿ ರೋಹಿಂಗ್ಯಾಗಳನ್ನು ಹೊಡೆದು ಹೊರ ಹಾಕಿದಂತೆ ಇಲ್ಲಿಯೂ ಹೊಡೆದು ಹೊರ ಹಾಕಬೇಕಾಗುತ್ತದೆ. ಈ ಮೂಲಕ ದೇಶದ್ರೋಹಿಗಳಿಗೆ ಪಾಕ್ ಪರ ಘೋಷಣೆ ಕೂಗುವವರ ವಿರುದ್ದ ಯತ್ನಾಳ ಕಿಡಿಕಾರಿದ್ದಾರೆ.

Most Popular

To Top
error: Content is protected !!