Gummata Nagari

Headlines

ರಟಕಲ್: ಸರ್ಕಾರಿ ಆಸ್ಪತ್ರೆಯಲ್ಲಿ ಮತಾಂಧತೆ ಆರೋಪ:  ಪ್ರತಿಭಟನೆ

 

ರಟಕಲ್: ಸರ್ಕಾರಿ ಆಸ್ಪತ್ರೆಯಲ್ಲಿ ಮತಾಂಧತೆ ಆರೋಪ:  ಪ್ರತಿಭಟನೆ

ಕಾಳಗಿ: ತಾಲೂಕಿನ ರಟಕಲ್ ಗ್ರಾಮದಲ್ಲಿನ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ವಸತಿ ಗ್ರಹಗಳಲ್ಲಿ ಕ್ರೈಸ್ತ ಧರ್ಮದವರು, ಬೈಬಲ್ ಪಠಿಸುತ್ತಾ, ಭಜನೆ, ಸ್ತೋತ್ರ, ಏಸುವಿನ ಆರಾಧನೆಯೊಂದಿಗೆ ಅನ್ಯ ಧರ್ಮದ ವ್ಯಕ್ತಿಗಳನ್ನೂ ಕೂಡ ಕರೆದುಕೊಂಡು ಅವರಿಗೆ ಹಣದ ಆಮಿಷವೊಡ್ಡಿ ಒತ್ತಾಯ ಪೂರ್ವಕವಾಗಿ ಮತಾoತರ ಕಾರ್ಯಕ್ಕೆ ಕೈಹಾಕಿದ್ದಾರೆ ಎಂದು ಆರೋಪಿಸಿ ತಾಲೂಕು ಹಿಂದೂ ಜಾಗೃತಿ ಸೇನೆ ಪ್ರತಿಭಟನೆ ನಡೆಸಿತು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಆಂದೋಲ ಶ್ರೀಗಳು ಹಿಂದೂಗಳನ್ನು ಹತ್ತಿಕ್ಕುವ ಕೆಲಸ ನಾಲ್ಕು ನೂರು ವರ್ಷಗಳ ಹಿಂದಿನಿAದಲೂ ಬಂದಿದೆ ಆದರೂ ಕೂಡ ಸತ್ಯಕ್ಕೆ ಜಯವಾಗಿದೆ. ಆದರೂ ಕೂಡ ಕಾಂಗ್ರೇಸ್ ಪಕ್ಷಕ್ಕೆ ಬುದ್ಧಿ ಬಂದoತೆ ಕಾಣದಾಗಿದೆ. ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಓಲೈಕೆ ರಾಜಕಾರಣಕ್ಕಾಗಿ ತಮ್ಮ ತನವನ್ನೇ ಬಿಟ್ಟು ಕೊಡುವುದು ಲಜ್ಜಗೇಡಿ ರಾಜಕೀಯವಾಗಿದೆ. ಸತ್ಯವನ್ನೇ ಮರೆಮಾಚಿ ಸುಳ್ಳುನ್ನೇ ಸಮರ್ಥನೆ ಮಾಡಿಕೊಂಡು ಪುಟ್ಟ ರಟಕಲ್ ಗ್ರಾಮದ 9 ಜನ ಹಿಂದೂ ಸಂಘಟನಾಕಾರರ ಮೇಲೆ ಸುಳ್ಳು ಜಾತಿನಿಂದನೆ ಕೇಸ್ ಮಾಡಿರುವುದು ಸಂವಿಧಾನಕ್ಕೆ ಮಾಡಿದ ಘೋರ ಅಪಮಾನವಾಗಿದೆ ಎಂದರು.
ಮಾತೆತ್ತಿದರೆ ಅಂಬೇಡ್ಕರ್ ಸಂವಿಧಾನದ ಶಿಕ್ಷೆ ತೋರಿಸುತ್ತೇನೆ ಎಂದು ಬೀಗುವ ಕಲಬುರಗಿ ಮಹಾ ಮಂತ್ರಿಗಳು, ಆ ಸಂಘಟನೆ, ಈ ಸಂಘಟನೆ ಎಂದು ಹೆಳಿಕೊಂಡು ಬರುವವರನ್ನು ಒದ್ದು ಒಳಗೆ ಹಾಕಿ ಎಂದು ತೋರಿಸುವ ತಮ್ಮ ಅಧಿಕಾರದ ದರ್ಪ ಭ್ಹಾಳ ದಿನ ನಡೆಯುವುದಿಲ್ಲ ಎಂದು ಪರೋಕ್ಷವಾಗಿ ಪ್ರಿಯಾಂಕ ಖರ್ಗೆ ಅವರನ್ನು ಟೀಕಿಸಿದರು.
ಕಲಬುರಗಿಯಲ್ಲಿ ಇತ್ತೀಚೆಗೆ ಬೆರೆ-ಬೆರೆ ಸಂಘಟನೆ ಅವರು, ಪ್ರತಿಭಟನೆ ಮಾಡಿ ಅಮಾಯಕರಿಗೆ ತೊಂದರೆ ಕೊಟ್ಟು ಸಾರ್ವಜನಿಕರ ಆಸ್ತಿ -ಪಾಸ್ತಿ ಹಾಳಾಯಿತು. ಆಗ ಎಲ್ಲಿ ಹೋಗಿತ್ತು ನಿಮ್ಮ ಪೌರುಷ. ಹಿಂದೂ ಸಂಘಟನೆಗಳು ಸಂವಿಧಾನ ಬದ್ಧವಾಗಿ ಹೋರಾಟಕ್ಕಿಳಿದರೆ ಮಾತ್ರ ಒದ್ದು ಒಳಗೆ ಹಾಕಬೇಕು. ಅದೆನಾ ತಾವು ಅರ್ಥೈಸಿಕೊಂಡ ಸಂವಿಧಾನ. ಎಂದು ಪ್ರಶ್ನಿಸಿದರು.
ಕೂಡಲೇ ರಟಕಲ್ ಸರಕಾರಿ ಆರೋಗ್ಯ ಕೇಂದ್ರದಲ್ಲಿ ನರ್ಸ್ ಗಳಾಗಿ ಕೆಲಸ ಮಾಡುತ್ತಲೇ ಮತಾಂತರ ಕಾರ್ಯಕ್ಕೆ ಕೈಹಾಕಿರುವ ಇಬ್ಬರನ್ನು ಅಮಾನತು ಮಾಡಬೇಕು. 9 ಜನ ಹಿಂದೂ ಸಂಘಟನಾಕಾರರ ಮೇಲೆ ಮಾಡಿರುವ ಸುಳ್ಳು ಜಾತಿ ನಿಂದನೆಯ ಕೇಸ್ ವಾಪಸ್ ಪಡೆಯಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟಕ್ಕೆ ಇಳಿಯುವುದು ಅನಿವಾರ್ಯ ಎಂದು ಎಚ್ಚರಿಸಿದರು.
ಹಿಂದೂ ಜಾಗೃತಿ ಸೇನೆ ಜಿಲ್ಲಾ ಅಧ್ಯಕ್ಷ ಲಕ್ಷ್ಮೀಕಾಂತ ಸ್ವಾದಿ ಸೇರಿ ಕಾಳಗಿ ತಾಲೂಕು ಹಿಂದೂ ಸಂಘಟನಾ ಪ್ರತಿನಿಧಿಗಳು ಮಾತನಾಡಿದರು.
ಜಿಲ್ಲಾ ಕುಷ್ಠರೋಗ ನಿವಾರಣಾದಧೀಕಾರಿ ಡಾ.ರಾಜಕುಮಾರ, ಚಿಂಚೋಳಿ ಡಿವೈಎಸ್ಪಿ ಸಂಗಮನಾಥ ಹಿರೇಮಠ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದರು.
ಗೌರಿಗುಡ್ಡ ರಟಕಲ್ ರೇವಣಸಿದ್ದ ಶರಣರು, ತಾಲ್ಲೂಕು ವೈದ್ಯಾಧಿಕಾರಿ ಮಹ್ಮದ್ ಗಫೂರ್, ಸುಲೆಪೇಟ ಸಿ.ಪಿ.ಐ ರಾಘವೇಂದ್ರ, ರಾಜಶೇಖರ ಗುಡದಾ, ವೀರಣ್ಣ ಗಂಗಾಣಿ, ಉಪಸ್ಥಿತರಿದ್ದರು.

Most Popular

To Top
error: Content is protected !!