Gummata Nagari

Bijapur

ಬಿಜಾಪುರ ನಗರ ನೀರು ಸರಬರಾಜಿನಲ್ಲಿ ವ್ಯತ್ಯಯ

 

ಬಿಜಾಪುರ: ಬಿಜಾಪುರ ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಕೃಷ್ಣಾ ನದಿಯ ಮೂಲದ 2ನೇ ಹಂತದ ಕೋಲ್ಹಾರ ಮೂಲ ಸ್ಥಾವರದಿಂದ ಜಲನಗರ ನೆಲಮಟ್ಟದ ಜಲಸಂಗ್ರಹಗಾರದವರೆಗೆ 900/965ಎಂ.ಎA ವ್ಯಾಸದ ಪಿ.ಎಸ್.ಸಿ/ಎಂ.ಎಸ್‌ಏರು ಕೊಳವೆ ಮಾರ್ಗದ ಚೈನೇಜ್ 0.00ಕಿ.ಮೀ ಕೋಲ್ಹಾರ ಜಾಕವೆಲ್ ಹತ್ತಿರಎಂ.ಎಸ್ ಕೊಳವೆ ಮಾರ್ಗದಲ್ಲಿ, ಚೈನೆಜ್ 33.350ಕಿ.ಮೀ ಸಾಯಿಬಾಬಾ ಗುಡಿ ಹತ್ತಿರ ಪಿ.ಎಸ್.ಸಿ ಕೊಳವೆ ಮಾರ್ಗದಲ್ಲಿ ಚೈನೆಜ್ 34.760ಕಿ.ಮೀ ಬಾರಾಕೋಟರಿ ತಾಂಡಾ ಹತ್ತಿರ ಪಿ.ಎಸ್.ಸಿ ಕೊಳವೆ ಮಾರ್ಗದಲ್ಲಿ, ಚೈನೆಜ್ 39.910ಕಿ.ಮೀ ಮಮದಾಪೂರ ರಮೇಶ ತೋಟದ ಹತ್ತಿರ ಪಿ.ಎಸ್.ಸಿ ಕೊಳವೆ ಮಾರ್ಗದಲ್ಲಿ ಮತ್ತು ಚೈನೆಜ್ 40.955ಕಿ.ಮೀ ಅಣ್ಣಾ ಡಾಬಾ ಹತ್ತಿರ ಪಿ.ಎಸ್.ಸಿ ಕೊಳವೆ ಮಾರ್ಗದಲ್ಲಿ ನೀರು ಸೋರುವಿಕೆ ಉಂಟಾಗಿದ್ದು ಶುಧ್ದ ನೀರು ಪೋಲಾಗುತ್ತಿರುವುದರಿಂದ, ತುರ್ತು ದುರಸ್ಥಿ ಕಾಮಗಾರಿಯನ್ನು ಏಪ್ರೀಲ್ 21ರಂದು ಮಂಡಳಿ ವತಿಯಿಂದ ಕೈಗೆತ್ತಿಕೊಳ್ಳಲು ಯೋಜಿಸಲಾಗಿದೆ.
ಆದಕಾರಣ ಏಪ್ರೀಲ್ 21ರಂದು ಬಿಜಾಪುರ ನಗರಕ್ಕೆ ಕೋಲ್ಹಾರ ಶುದ್ಧ ಕುಡಿಯುವ ನೀರಿನ ಘಟಕದಿಂದ ನೀರು ಸರಬರಾಜು ಆಗುವ ಪ್ರದೇಶಗಳಿಗೆ ಕುಡಿಯುವ ನೀರು ಸರಬರಾಜುವಿನಲ್ಲಿ ವ್ಯತ್ಯಯ ಉಂಟಾಗುತ್ತದೆ.

ಆದ್ದರಿಂದ ನಗರದ ಸಾರ್ವಜನಿಕರು ಜಲಮಂಡಳಿಯೊAದಿಗೆ ನೀರು ಸೋರುವಿಕೆ ದುರಸ್ಥಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲು ಸಹಕರಿಸಲು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಂ.1 ನಿರ್ವಹಣಾ ಉಪ ವಿಭಾಗ ವಿಜಯಪುರದ ಸಹಾಯಕ ಕಾರ್ಯಪಾಲ ಅಭಿಯಂತರರು ಪ್ರಕಟಣೆಯಲ್ಲಿ ಕೋರಿದ್ದಾರೆ.

 

Most Popular

To Top
error: Content is protected !!