Gummata Nagari

Bijapur

ಚಡಚಣ: ಸಂಗಮೇಶ್ವರ ಕಾಲೇಜು ವಿದ್ಯಾರ್ಥಿಗಳ ಸಾಧನೆ

ಚಡಚಣ:  ಪಟ್ಟಣದ ಸಂಗಮೇಶ್ವರ ಪಪೂ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಪಿಯುಸಿ ದ್ವಿತೀಯ ವರ್ಷದ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.
ಮಹಾವಿದ್ಯಾಲಯದ ಒಟ್ಟು ಫಲಿತಾಂಶ 99% ಆಗಿದೆ. ವಿಜ್ಞಾನ ವಿಭಾಗದ ಫಲಿತಾಂಶ 100% ಆಗಿದ್ದು, ಕಲಾ ಹಾಗೂ ವಾಣಿಜ್ಯ ವಿಭಾಗದ ಫಲಿತಾಂಶ 99 % ರಷ್ಠಾಗಿದೆ. ಪರೀಕ್ಷೆಗೆ ಹಾಜರಾದ 394 ವಿದ್ಯಾರ್ಥಿಗಳಲ್ಲಿ 110 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ, 210 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, 50 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಮತ್ತು 20 ವಿದ್ಯಾರ್ಥಿಗಳು ತೃತಿಯ ಶ್ರೇಣಿಯಲ್ಲಿ ಪಾಸಾಗಿದ್ದಾರೆ.

ಮಹಾವಿದ್ಯಾಲಯದ ಕಲಾ ವಿಭಾಗದ ವಿದ್ಯಾರ್ಥಿನಿ ಕಾಂಚನಾ ಡೋಣಗಾಂವ 590 (98.33%) ಅಂಕಗಳನ್ನು ಪಡೆದು ರಾಜ್ಯಕ್ಕೆ 7 ರ‍್ಯಾಂಕ, ಜಿಲ್ಲೆಗೆ 5 ರ‍್ಯಾಂಕ ಮತ್ತು ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾಳೆ. ವಿಜ್ಞಾನ ವಿಭಾಗದ ವಿದ್ಯಾರ್ಥಿ ಆನಂದ ಅಡಕೆ 589 (98.17%) ಅಂಕಗಳನ್ನು ಪಡೆದು ರಾಜ್ಯಕ್ಕೆ 10 ರ‍್ಯಾಂಕ, ಜಿಲ್ಲೆಗೆ 6 ರ‍್ಯಾಂಕ ಮತ್ತು ಕಾಲೇಜಿಗೆ ದ್ವಿತೀಯ ರ‍್ಯಾಂಕ ಪಡೆದಿದ್ದಾನೆ.

ವಿಜ್ಞಾನ ವಿಭಾಗದ ಕಸ್ತೂರಿ ಬಿರಾದಾರ 586 (97.67%) ಅಂಕಗಳನ್ನು ಪಡೆದು ಕಾಲೇಜಿಗೆ ತೃತಿಯ ಸ್ಥಾನ ಪಡೆದಿದ್ದಾಳೆ. ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಡಾ.ಎಸ್.ಆರ್.ಡೋಣಗಾಂವ, ಉಪಾಧ್ಯಕ್ಷ ವಿ.ಜಿ.ಮುತ್ತಿನ, ಗೌರವ ಕಾರ್ಯದರ್ಶಿ ವಿ.ಎಸ್.ಗಿಡವೀರ ಹಾಗೂ ಆಡಳಿತ ಮಂಡಳಿಯ ಸದಸ್ಯರು, ಪ್ರಾಚಾರ್ಯ ಮನೋಜ ಕಟಗೇರಿ ಮತ್ತು ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದಾರೆ.

Most Popular

To Top
error: Content is protected !!