Gummata Nagari

Headlines

ನಿರ್ಗತಿಕರ ಅನಾಥರ ಸಂಜೀವಿನಿ ರಜನಿಕಮಲ ಮನೆ

 

ಅಥಣಿ : ಕತ್ತಲಾಗುತ್ತಿದ್ದಂತೆ ಕೃಪಾ ಆರೋಗ್ಯ ಮತ್ತು ಸಮಾಜ ಸೇವಾ ಸಂಸ್ಥೆಯ ನಿಜಪ್ಪಾ ಹಿರೇಮನಿ. ಸಂಗೀತಾ ಹಿರೇಮನಿ ದಂಪತಿಗಳು ಪಟ್ಟಣದ ವಿವಿಧ ವೃತ್ತಗಳಲ್ಲಿ. ಬಸ್ ನಿಲ್ದಾಣದಲ್ಲಿ ಹಾಗೂ ರಸ್ತೆ ಬದಿಯಲ್ಲಿ ಮಲಗಿದವರನ್ನು ಎಚ್ಚರಿಸಿ ಊಟ ಮಾಡಿದೆಯಾ ಎಂದು ಕೇಳುತ್ತಾರೆ. ಅವರ ಆರೋಗ್ಯ ವಿಚಾರಿಸುತ್ತಾರೆ. ಅವರ ಬರುವಿಕೆಯನ್ನು ನಿರ್ಗತಿಕರು, ವೃದ್ಧರು. ಅನಾಥರು. ಮಾನಸಿಕ ಅಸ್ವಸ್ಥರು ಹಾಗೂ ಅಲೆಮಾರಿಗಳು, ಆ ದಂಪತಿಗಳನ್ನ ಪ್ರೀತಿಯಿಂದ ಕಾಯುತ್ತವೆ. ಗೌರವದಿಂದ ಕಾಣುತ್ತವೆ.
ಹೌದು. ಅಥಣಿ ಪಟ್ಟಣದಲ್ಲಿರುವ ಕೃಪಾ ಆರೋಗ್ಯ ಮತ್ತು ಸಮಾಜ ಸೇವಾ ಸಂಸ್ಥೆಯ ನಿಜಪ್ಪ ಹಾಗೂ ಸಂಗೀತಾ ಹಿರೇಮನಿ ದಂಪತಿಗಳು ಅವರ ತಂದೆತಾಯಿ ರಜನಿಕಮಲ ಹೆಸರಿನಲ್ಲಿ ರಜನಿ ಕಮಲ ಮನೆಯಿಂದ ಪ್ರತಿದಿನ ಅನಾಥರಿಗೆ, ವೃದ್ಧರಿಗೆ ನಿರ್ಗತಿಕರಿಗೆ ಮಾನಸಿಕ ಅಸ್ವಸ್ಥರು ಸೇರಿದಂತೆ ಪರ ಊರಿನಿಂದ ರಾತ್ರಿ ವೇಳೆ ಬಸ್ಸ್ ತಪ್ಪಿ ಬಸ್ ನಿಲ್ದಾನದಲ್ಲಿ ವಾಸಿಸುವ ಪರ ಊರಿನ ಸುಮಾರು 50 ಕ್ಕೂ ಅಧಿಕ ಜನರಿಗೆ ರಜನಿಕಮಲ್ ಮನೆಯಿಂದ ರಾತ್ರಿ ಊಟವನ್ನು ಸುಮಾರು 12 ವರ್ಷಗಳಿಂದ ಕೊಡುತ್ತಾ ಬಂದಿದ್ದಾರೆ.
ಇವರಿಗೆ ಸಹಾಯವೆಂಬAತೆ ದಾನಿಗಳು ಹಾಗೂ ಪಟ್ಟಣದಲ್ಲಿ ಯಾರದಾದರೂ ಮದುವೆ, ಹುಟ್ಟುಹಬ್ಬ ಹಾಗೂ ಇನ್ನಿತರ ವಿವಿಧ ಸಭೆ ಸಮಾರಂಭಗಳಲ್ಲಿ ಉಳಿದ ಅನ್ನವನ್ನು ಈ ಸಂಸ್ಥೆಗೆ ತಂದುಕೊಡುತ್ತಿದ್ದಾರೆ. ಆ ಅನ್ನವನ್ನು ಸಹ ಸಂಸ್ಥಯ ವತಿಯಿಂದ ಪಟ್ಟಣದ ಅಲೆಮಾರಿ ಜನರಿಗೆ ಕೊಡುತಿದ್ದು ಇದು ಅಥಣಿ ಪಟ್ಟಣದಲ್ಲಿ ಇಂತಹ ಒಳ್ಳೆಯ ಕಾರ್ಯ ಮಾಡುತ್ತಿರುವ ಮೊದಲ ಸಂಸ್ಥೆ ಇದಾಗಿದೆ,
ಈ ವೇಳೆ ಕೃಪಾ ಆರೋಗ್ಯ ಮತ್ತು ಸಮಾಜ ಸೇವಾ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ನೀಜಪ್ಪ ಹಿರೇಮನಿ ಮಾತನಾಡಿ ಧಾನಗಳಲ್ಲಿ ಶ್ರೇಷ್ಠದಾನ ಅನ್ನದಾನ ಎಂಬ ಪುರಾಣ ಪ್ರಸಿದ್ಧ ಸತ್ಯವನ್ನು ಅನ್ನದಾನದ ಮೂಲಕ ನಾನು ಕಾಣುತ್ತಿದ್ದೇನೆ ಜಾತಿ, ಮಥ, ಪಂಥ, ಬಡವ, ಎಂಬ ಭೇದಭಾವ ಇಲ್ಲದೆ ಇಂತಹ ಸಾಮಾಜಿಕ ಕಾರ್ಯವನ್ನು ಮಾಡಿ ಅವರಲ್ಲಿ ನಾನು ದೇವರ ಸ್ವರೂಪ ಕಾಣುತ್ತಿದ್ದೇನೆ ಹಾಗೆಯೇ ಅನಾಥರು ನಿರ್ಗತಿಕರು ವೃದ್ದರು ಮಾನಸಿಕ ಅಸ್ವಸ್ಥರು ಕೂಡ ನಮ್ಮನ್ನು ಹಾಗೂ ಸಂಸ್ಥೆಯ ಕಾರ್ಯವನ್ನು ಮನಸಾರೆ ಹರಿಸಿ ನಮ್ಮಲ್ಲಿ ದೈವ ಸ್ವರೂಪವನ್ನು ಕಾಣುತ್ತಿದೆ ಎಂದು ಹೇಳುತ್ತಾರೆ ಎಂದರು.

ಕಳೆದ 12 ವರ್ಷಗಳಿಂದ ಕೃಪಾ ಆರೋಗ್ಯ ಮತ್ತು ಸಮಾಜ ಸೇವಾ ಸಂಸ್ಥೆಯಿAದ ಇಂತಹ ಹತ್ತು ಹಲವಾರು ಸಾಮಾಜಿಕ ಸೇವಾ ಕಾರ್ಯಗಳನ್ನು ಮಾಡುತ್ತಿದ್ದು ಈ ಸಂಸ್ಥೆ ಬಾಡಿಗೆ ಕಟ್ಟಡದಲ್ಲಿದ್ದು ಇಲ್ಲಿ 30ಕ್ಕೂ ಅಧಿಕ ವಿಶೇಷ ಮಕ್ಕಳ ಸೇವೆ ಕೂಡಾ ನಡೆಯುತ್ತಿದೆ. ಈ ಸಂಸ್ಥೆಗೆ ಸ್ವಂತ ಕಟ್ಟಡ ಇಲ್ಲದಿರುವುದು ವಿಪರ್ಯಾಸವೇ ಸರಿ. ಈಗಲಾದರೂ ಸರ್ಕಾರ ಇಂತಹ ಸಂಸ್ಥೆಗಳ ಸೇವೆಯನ್ನು ಗುರುತಿಸಿ ಸ್ವಂತ ಕಟ್ಟಡಕ್ಕೆ ಸ್ಥಳಾವಕಾಶ ಹಾಗೂ ಅನುದಾನವನ್ನು ಕಲ್ಪಿಸಿಕೊಡಬೇಕೆಂದು ಪ್ರಜ್ಞಾವಂತ ನಾಗರಿಕರ ಒತ್ತಾಯವಾಗಿದೆ. ಸಂಸ್ಥೆಗೆ ಯಾವುದೇ ರೂಪದಲ್ಲಿ ಸಹಾಯ, ಸಹಕಾರ, ದಾನ, ಧರ್ಮ, ಮಾಡುವವರೂ ಈ ಕೆಳಗಿನ ಬ್ಯಾಂಕ ಖಾತೆಗೆ ಕಳುಹಿಸಿ ತಾವು ಕೂಡಾ ಈ ಪುಣ್ಯದ ಕೆಲಸಕ್ಕೆ ಕೈ ಜೋಡಿಸಬೇಕು ಎಂದು ಕಳಕಳಿಯ ಮನವಿಯಾಗಿದೆ.
ವರದಿ: ಜಬ್ಬಾರ ಚಿಂಚಲಿ, ಅಥಣಿ

Most Popular

To Top
error: Content is protected !!