Gummata Nagari

Bijapur

ಶಿವನ ಒಲುಮೆ ಇದ್ದರೆ ಕೊರಡು ಕೊನರುವದು : ಸಾಹಿತಿ ಮೇತ್ರಿ ಹಿತನುಡಿ

 

ಬಿಜಾಪುರ: ಜಗ ವಂದಿತ ಶಿವನು ಶ್ರೇಷ್ಠ ಸ್ವರೂಪದವನು. ಅವನ ಮಹಿಮೆ ಅಪಾರ. ಅವನನ್ನು ಈ ಕಾರಣವೇ ದೇವರ ದೇವ ಮಹಾದೇವ ಎಂದು ಕರೆಯಲಾಗುತ್ತದೆ. .ಅವನ ಒಲುಮೆ ಇದ್ದರೆ ಕೊರಡು ಕೊನರುವುದು ಬರಡು ಹೈನಾಗುವುದು, ವಿಷವು ಅಮೃತವಾಗುವುದು ಎಂದು ಸಿಕ್ಯಾಬ ಪದವಿ ಮಹಿಳಾ ಮಹಾವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ, ಸಾಹಿತಿ, ಡಾ. ಮಲ್ಲಿಕಾರ್ಜುನ ಮೇತ್ರಿ ಅಭಿಪ್ರಾಯ ಪಟ್ಟರು.

ನಗರದ ಐಶ್ವರ್ಯ ನಗರದ ಈಶ್ವರ ದೇವಾಲಯದಲ್ಲಿ ಹಮ್ಮಿಕೊಂಡ ಶಿವ ಸ್ಮರಣೆ ಕಾರ್ಯಕ್ರಮದಲ್ಲಿ ಅತಿಥಿ ಉಪನ್ಯಾಸಕರಾಗಿ ಪಾಲ್ಗೊಂಡು ಅವರು ಮಾತನಾಡಿ, ಶಿವನ ಪಂಚವಿoಶತಿಗಳ ಕುರಿತು ವಿಶೇಷವಾಗಿ ವಿವರಿಸಿದ ಅವರು ಶಿವನು ಜಗದಗಲ ಮುಗಿಲಗಲ ಮಿಗೆ ಅಗಲ ಆಗಿರುವನು. ಅವನ ಮಹಿಮೆ ಅಪಾರ. ಇವನ ಭಕ್ತರಾದ ಶಿವಶರಣರು ಬದುಕಿನಲ್ಲಿ ಶ್ರೇಷ್ಠತೆ ಮೆರೆದವರು ಎಂದರು.

ಆಶೆಯ ದಾಶತ್ವ ,ನಿರಾಶೆಯೇ ಈಶತ್ವ ಎಂಬುದನ್ನು ಅರಿತು ನಾವೆಲ್ಲ ಬದುಕಬೇಕಾಗಿದೆ ಎಂದು ತಿಳಿಸಿದರು. ಜನಪದ ತಾಯಂದಿರು ಮಾದೇವ ನಿನ್ನ ಹೊರತು ನಾನ್ಯರ ನಂಬಿಲ್ಲ ನೀನೇ ನಮಗೆ ಸರ್ವಸ್ವ ಎಂದು ಹಾಡಿದ್ದನ್ನು ನೆನಪಿಸಿದರು .ಅಲ್ಲದೆ ಶಿವಶಿವ ಎಂದರೆ ಸಿಡಿಲಿಲ್ಲ ಬಯಲಾಗಿ ನಿರಾಳವಾದ ದಾರಿ ನಮಗೆ ತೋರುವದು .ಬದುಕನ್ನು ಗೆಲುವಿನತ್ತ ಕೊಂಡೊಯ್ಯುವುದು ಇದೆಲ್ಲವೂ ಶಿವನ ಸ್ಮರಣೆಯಿಂದ ಸಾಧ್ಯವಾಗುತ್ತದೆ ಎಂದು ಹಲವಾರು ಶರಣರ ನಿದರ್ಶನಗಳನ್ನು ವಿವರಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ಎಸ್ ಎ ಪಾಟೀಲ ಮಾತನಾಡಿ, ಶಿವರಾತ್ರಿ ಶಿವನ ಶ್ರೇಷ್ಠತೆ ಸಾರುವ ರಾತ್ರಿಯಾಗಿದೆ ಶಿವನೋ ಕರುಣಾಮಯಿ ಅವನ ಸ್ಮರಣೆಯಿಂದ ಬದುಕಿನಲ್ಲಿ ಏನೆಲ್ಲ ಸಾಧ್ಯವಿದೆ ಎಂಬುದನ್ನು ವಿವರಿಸಿದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ ಜ್ಞಾನ ಯೋಗಾಶ್ರಮದ ವಿದ್ಯಾನಂದ ಮಹಾಸ್ವಾಮೀಜಿ ಮಾತನಾಡಿ, ಪಂಚಾಕ್ಷರಿ ಮಂತ್ರ ಹಾಗೂ ಷಡಕ್ಷರಿ ಮಂತ್ರಗಳನ್ನು ಕುರಿತು ಹೇಳಿದರು.

ಇದೇ ಸಂದರ್ಭದಲ್ಲಿ ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಸಮಾಜ ಸೇವಕಿ ,ಯೋಗ ಶಿಕ್ಷಕಿ ಹಾಗೂ ಗಾಯಕಿ ಸುನಿತಾ ಬಿರಾದಾರ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದ ವೇದಿಕೆಯಲ್ಲಿ ವಿರುಪಾಕ್ಷಪ್ಪ ಪಟ್ಟಣಶೆಟ್ಟಿ, ಪ್ರಥಮ ದರ್ಜೆ ಗುತ್ತಿಗೆದಾರರ ಎಂ .ಎಸ್ ಬಿರಾದಾರ, ಪಾಯಣ್ಣ ನಿಂಬೆಣ್ಣ ಪಡಸಲಗಿ ಈಶ್ವರ ದೇವಸ್ಥಾನದ ಅಧ್ಯಕ್ಷರು ಹಾಗೂ ಕೃಷಿ ಪರಿಕರಗಳ ಮಾರಾಟಗಾರ ಸಂಘದ ಅಧ್ಯಕ್ಷರಾದ ಬಸವರಾಜ ಕೋರಿ ಉಪಸ್ಥಿತರಿದ್ದರು.

ಸಮಾರಂಭದಲ್ಲಿ ವಿಜಯಪುರ ಮಹಾನಗರ ಪಾಲಿಕೆಯ ಸದಸ್ಯೆ ರಶ್ಮಿ ಕೋರಿ , ಶ್ರೀ ವೀರಣ್ಣ ಹುಂಡೇಕಾರ, ಎಸ್ ಎಸ್ ತೊಗಲವಾಗಿ ,ವೀರಣ್ಣ ಹುಲಸುರ.
ಎನ್ ಎಂ ಬಿರಾದಾರ, ಎಮ್ ಕೆ. ಬಿಸ್ನಾಳ, ಡಾ. ವಿಜಯಕುಮಾರ್ ವಾರದ, ಪ್ರೊ. ಎಸ್ ಜಿ ಹೆಬ್ಬಳ್ಳಿ ,ಹರ್ಷ ಬರಟಗಿ, ನಾನಾಗೌಡ ಪಾಟೀಲ, ಜಯಪ್ರಕಾಶ್ ಅಂಬಲಿ, ಬಿ .ಎನ್ ಬಿರಾದಾರ ಪ್ರೊ.ಬೈಚಬಾಳ , ಎಂ ಎ ದೇವರ ಮುಂತಾದ ಗಣ್ಯಮಾನ್ಯರು ಪಾಲ್ಗೊಂಡಿದ್ದರು.

ಸುನಿತಾ ಬಿರಾದಾರ ಪ್ರಾರ್ಥನೆ ಗೀತೆ ಹಾಡಿದರು, ಪ್ರೊ.ಎಂ ಓಂ ಶಿರೂರ ಕಾರ್ಯಕ್ರಮ ನಿರೂಪಿಸಿದರು.

Most Popular

To Top
error: Content is protected !!