Gummata Nagari

Bijapur

ರಾಜು ಆಲಗೂರ ಸಂಸದರಾಗುವದು ನಿಶ್ಚಿತ : ಸಚಿವ ಎಂ.ಬಿ. ಪಾಟೀಲ ಹೆಳಿಕೆ

 

ಬಿಜಾಪುರ: ಕಾಂಗ್ರೇಸ್ ಪಕ್ಷದ ಜಿಲ್ಲಾಧ್ಯಕ್ಷ ಮಾಜಿ ಶಾಸಕ ರಾಜು ಆಲಗೂರ ಅವರಿಗೆ ಶಿವರಾತ್ರಿಯ ಶುಭ ದಿನದಂದು ಈ ಬಾರಿ ಲೋಕಸಭಾ ಚುನಾವಣೆಯ ಟಿಕೆಟ್ ಘೋಷಣೆಯಾಗಿದೆ. ಇದು ನಮ್ಮೆಲ್ಲರ ಒಟ್ಟಾಭ್ರಿಪಾಯ ಇದಕ್ಕೆ ನಾನು ಹೈ ಕಮಾಂಡ್‌ಗೆ ಅಭಿನಂದನೆ ಸಲ್ಲಿಸುತ್ತೇನೆ. ನಾವೆಲ್ಲರೂ ಕೂಡಿ ಒಗ್ಗಟ್ಟಾಗಿ ಜನರ ಆಶಿವಾದದಿಂದ ಆರಿಸಿ ತರುವ ಕೆಲಸ ಮಾಡುತ್ತೇವೆ ಎಂದು ಬ್ರಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ತಿಳಿಸಿದ್ದಾರೆ.

ಜಿಲ್ಲೆಯ ಬಬಲೇಶ್ವರದಲ್ಲಿ ಇಂದು ನೂತನ ಮಿನಿ ವಿಧಾನಸೌಧ ಕಟ್ಟಡ ಉದ್ಘಾಟನೆ ಸಮಾರಂಭದಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ಮಾದ್ಯಮದವರು ಮಾಜಿ ಶಾಸಕ ರಾಜು ಆಲಗೂರ ಅವರಿಗೆ ಎಂ.ಪಿ.ಟಿಕೆಟ್ ನೀಡಿರುವ ಕುರಿತು ಕೇಳಿದ ಪ್ರಶ್ನೆ ಅವರು ಉತ್ತರಿಸಿದ ಅವರು, ಸಚಿವ ಶಿವಾನಂದ ಪಾಟೀಲ, ಇಂಡಿ ಶಾಸಕ ಯಶವಂರಾಯಗೌಡ ಪಾಟೀಲ, ನಾಗಠಾಣ ಶಾಸಕ ವಿಠ್ಠಲ ಕಟಕದೊಂಡ, ಸಿಂದಗಿ ಶಾಸಕ ಅಶೋಕ ಮನಗೂಳಿ, ಮುದ್ದೇಬಿಹಾಳ ಶಾಸಕ ಸಿ.ಎಸ್. ನಾಡಗೌಡ, ಬಿಜಾಪುರ ನಗರದ ಕಾಂಗ್ರೇಸ್ ಮುಖಂಡ ಹಮೀದ್ ಮುಶ್ರೀಪ್, ಮಾಜಿ ಶಾಸಕ ಶರಣಪ್ಪ ಸುಣಗಾರ ಸೇರಿದಂತೆ ಕಾಂಗ್ರೇಸ್ ಪಕ್ಷದ ಹಲವು ಮುಖಂಡರು ಈ ಅಪೇಕ್ಷೆಯನ್ನು ವ್ಯಕ್ತಪಡಿಸಿದ್ದೇವು ಎಂದರು.

ದಲಿತ ಸಮಾಜದವರಿಗೆ ಟಿಕೆಟ್ ನೀಡಬೇಕು ಎಂಬುದು ನಮ್ಮ ದಶಕದ ಬೇಡಿಕೆಯಾಗಿತ್ತು. ಜಿಲ್ಲೆಯಲ್ಲಿ 2. 50 ಲಕ್ಷ ಜನ ದಲಿತರಿದ್ದಾರೆ. ಈ ಸಮುದಾಯಕ್ಕೆ ಟಿಕೆಟ್ ನೀಡಬೇಕು ಎಂದು ಆ ಸಮುದಾಯದ ಬಹುದಿನದ ಬೇಡಿಕೆ ಆಗಿತ್ತು. ಈ ಬೇಡಿಕೆ ಕಾಂಗ್ರೇಸ್ ಪಕ್ಷದ ಹೈಕಮಾಂಡ್ ಸ್ಪಂದಿಸಿದೆ. ಮಾಜಿ ಶಾಸಕ ಪ್ರೋ. ರಾಜು ಆಲಗೂರ ಅವರಿಗೆ ಪ್ರಥಮ ಪಟ್ಟಿಯಲ್ಲೆ ಟಿಕೆಟ್ ಲಭಿಸಿದೆ. ರಾಜು ಆಲಗೂರ ದಲಿತ ಸಮಾಜದ ಬಲ ಪಂಥಿಯ ಪ್ರಬಲ ನಾಯಕರಾಗಿದ್ದಾರೆ. ಅವರ ಗೆಲವು 100ಕ್ಕೆ 100 ರಷ್ಟು ನಿಶ್ಚಿತ, ಅವರು ಸಂಸದರಾಗುವದರಲ್ಲಿ ಯಾವುದೇ ಸಂಶಯ ಇಲ್ಲ ಎಂದು ಮಾದ್ಯಮದ ಮುಂದೆ ವಿಶ್ವಾಸ ವ್ಯಕ್ತಪಡಿಸಿದರು.

 

 

Most Popular

To Top
error: Content is protected !!