Gummata Nagari

Bijapur

ಒಂದು ಲಕ್ಷ ಕೋಟಿ ಅನುದಾನ ತಂದಿದ್ದೇನೆ: ರಮೇಶ ಜಿಗಜಿಣಗಿ

ಇಂಡಿ: ಬಿಜಾಪುರ ಮತಕ್ಷೇತ್ರಕ್ಕೆ ಕಳೆದ 10 ವರ್ಷಗಳಲ್ಲಿ ಒಂದು ಲಕ್ಷ ಕೋಟಿ ರೂ ಅನುದಾನ ತಂದು ವಿವಿಧ ರೀತಿಯ ಅಭಿವೃದ್ಧಿ ಕಾರ್ಯ ಮಾಡಿದ್ದೇನೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.
ಪಟ್ಟಣದ ಶ್ರೀ ಶಾಂತೇಶ್ವರ ಮಂಗಲ ಕಾರ್ಯಾಲಯದಲ್ಲಿ ಇಂಡಿ ವಿಧಾನಸಭಾ ಮತಕ್ಷೇತ್ರದ ಲೋಕ ಸಭಾ ಚುನಾವಣೆಯ ಚುನಾವಣೆ ನಿರ್ವಹಣಾ ಸಮಿತಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿ, ಅಕ್ಕಲಕೋಟ – ವಿಜಯಪುರ 100 ಕಿಮಿ 1000 ಕೋಟಿ ವೆಚ್ಚದಲ್ಲಿ ರಾಷ್ಟಿçÃಯ ಹೆದ್ದಾರಿ ಕಾರ್ಯ, ಚತುಷ್ಟ ರಸ್ತೆಗಳು, ರೇಲ್ವೆ ಬ್ರಾಡಗೇಜ ಅಗಲೀಕರಣ, ರೇಲ್ವೆ ಸ್ಟೇಷನ್ ನವೀಕರಣ, ರೇಲ್ವೆ ಓಡಾಟಕ್ಕೆ ವಿದ್ಯುತ್ ಸಂಪರ್ಕ, ವಿಮಾನ ನಿಲ್ದಾಣ, ಕೂಡಗಿ ಥರ್ಮಲ್ ಪವರ್ ಸೇರಿದಂತೆ ಅನೇಕ ಕಾರ್ಯ ಮಾಡಿರುವದಾಗಿ ತಿಳಿಸಿದರು.
ಇಂಡಿಯ ಶ್ರೀ ರೇವಣಸಿದ್ದೇಶ್ವರ ಏತ ನೀರಾವರಿಗೆ ರೂ 3000 ಕೋಟಿ ಅನುದಾನ, ಗುರುತ್ವಾಕರ್ಷಣೆ ಮೇಲೆ ಕೆರೆಗಳನ್ನು ತುಂಬಿಸುವದು ಸೇರಿದಂತೆ ಜಲಜೀವನ ಮಿಷನ ನಿಂದ ಪ್ರತಿ ಗ್ರಾಮದವರಿಗೂ ಕುಡಿಯುವ ನೀರು ದೊರೆಯುವಂತೆ ಮಾಡಿದ್ದೇನೆ ಎಂದರು.
ತಾನು ಭಾವನಾತ್ಮಕ ಸಂಬAಧವಿಟ್ಟುಕೊAಡು ರಾಜಕೀಯ ಮಾಡಿದ್ದೇನೆ. ಸೇಡಿನ ಜಾತಿಯ ರಾಜಕಾರಣ ಎಂದು ಮಾಡಿಲ್ಲ. ಮೂರು ಬಾರಿ ಶಾಸಕನಾಗಿ, ಮೂರು ಬಾರಿ ಚಿಕ್ಕೋಡಿ ಸಂಸದನಾಗಿ, ಮತ್ತೆ ಎರಡು ಬಾರಿ ಬಿಜಾಪುರ ಸಂಸದ ನಾಗುವಲ್ಲಿ ಇಂಡಿಯ ಜನರ ಆಶೀರ್ವಾದವಿದೆ. ಎಲ್ಲ ಸಮಾಜದ ಜೊತೆ ಒಳ್ಳೆ ಸಂಬAಧವಿದ್ದು ಇನ್ನು ಮುಂದೆ ಇನ್ನೂ ಒಳ್ಳೆಯ ಕಾರ್ಯ ಮಾಡಿ ಇಂಡಿಯ ಇತಿಹಾಸ ನಿರ್ಮಿಸುವ ಕಾರ್ಯ ಮಾಡುತ್ತೇನೆ ಎಂದ ಅವರು ತಾನು ಇಂಡಿ ತಾಲೂಕಿನವ ಎಂದು ಪ್ರತಿ ಬಾರಿಯು ನನ್ನನ್ನು ಹೆಚ್ಚಿನ ಮತ ನೀಡಿ ಬೆಂಬಲಿಸಿದ್ದೀರಿ.ಅದಕ್ಕೆ ಪ್ರತಿಯಾಗಿ ನಿಮ್ಮ ಸೇವೆ ಮಾಡುತ್ತೇನೆ ಎಂದರು.
ರಾಜ್ಯ ನಿಂಬೆ ಅಭಿವೃದ್ದಿ ಮಂಡಳಿ ಮಾಜಿ ಅಧ್ಯಕ್ಷ ಅಶೋಕ ಅಲ್ಲಾಪುರ , ವಿಧಾನ ಪರಿಷತ್ತ ಮಾಜಿ ಸದಸ್ಯ ಅರುಣ ಶಹಾಪುರ, ಚಂದ್ರಶೇಖರ ಕವಟಗಿ, ಇಂಡಿ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕಿವಡೆ,ಕಾಸುಗೌಡ ಬಿರಾದಾರ, ಪುರಸಭೆ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ದೇವೆಂದ್ರ ಕುಂಬಾರ ಮಾತನಾಡಿದರು.
ವೇದಿಕೆಯ ಮೇಲೆ ಬಿ.ಎಸ್.ಪಾಟೀಲ ಹಿರೇಬೇವನೂರ,ಸಿದ್ದಲಿಂದ ಹಂಜಗಿ, ಶೀಲವಂತ ಉಮರಾಣಿ,ಹಣಮಂತಗೌಡ ಪಾಟೀಲ,ಮಲ್ಲುಗೌಡ ಪಾಟೀಲ,ಅನೀಲಗೌಡ ಬಿರಾದಾರ,ಶ್ರೀಕಾಂತ ದೇವರ, ಅನೀಲ ಜಮಾದಾರ, ಶಂಕರಗೌಡ ಪಾಟೀಲ, ಶ್ರೀಪತಿಗೌಡ ಬಿರಾದಾರ, ವೇಂಕಟೇಶ ಕುಲಕರ್ಣಿ ಮತ್ತಿತರಿದ್ದರು.

Most Popular

To Top
error: Content is protected !!