Gummata Nagari

Bijapur

ಕಬ್ಬಿನ ಬೆಳೆಯಿಂದ ಅರ್ಥಿಕ ಅಭಿವೃದ್ದಿ – ಈಶ ಪ್ರಸಾದ ಶ್ರೀಗಳು

ಇಂಡಿ: ಉತ್ತರ ಕರ್ನಾಟಕದ ಬಹುತೇಕ ಬಯಲು ಸೀಮೆ ಭೂಮಿಯಲ್ಲಿ ಕಬ್ಬು ಇಳುವರಿ ಹೆಚ್ಚಿಗೆ ಮತ್ತು ಉತ್ಕೃಷ್ಟತೆಯಿಂದ ಬರುತ್ತದೆ. ರೈತರು ಹೆಚ್ಚು ಕಬ್ಬು ಬೆಳೆ ಬೆಳೆಯಲು ಮುಂದಾಗಬೇಕು. ಕೃಷಿ ಇಲಾಖೆ ಯೋಜನೆಯಡಿ ಕಬ್ಬು ಬೆಳೆಯಲು ಅನೇಕ ಅನುಕೂಲತೆ ಇದೆ. ಇದರ ಪ್ರಯೋಜನ ಪಡೆಯಬೇಕು ಎಂದು ಅಥರ್ಗಾ ಗುರುದೇವ ಆಶ್ರಮದ ಈಶ ಪ್ರಸಾದ ಶ್ರೀ ಗಳು ಹೇಳಿದರು.

ತಾಲೂಕಿನ ಬೆನಕನಹಳ್ಳಿ ಗ್ರಾಮದ ರಾಜಶೇಖರ ನಿಂಬರಗಿ ಇವರ ತೋಟದ ವಸ್ತಿಯಲ್ಲಿ ನಡೆದ ಒಂದು ಎಕರೆಗೆ ಕಬ್ಬು 100 ಟನ್ ಇಳುವರಿ ಮತ್ತು ಸುಧಾರಿತ ನಿಂಬೆ ಬೆಳೆಯ ಕುರಿತು ನಡೆದ ವಿಚಾರ ಸಂಕೀರಣದಲ್ಲಿ ಮಾತನಾಡಿದರು.

ಮಹಾಲಿಂಗಪುರ ರೋಹಣಿ ಬಯೋಟೆಕ್ ದ ಎಂ.ವಾಯ್. ಕಟ್ಟಿಯವರು ಮಾತನಾಡಿ ಕಬ್ಬು ಬೆಳೆ ಸಾಗಿಸಲು ತಾಲೂಕಿನಲ್ಲಿ ಮತ್ತು ಜಿಲ್ಲೆಯಲ್ಲಿ ಸಾಕಷ್ಟು ಕಾರ್ಖಾನೆಗಳಿವೆ. ಹೀಗಾಗಿ ಉತ್ತಮ ತಳಿಯ ಬೀಜಗಳನ್ನು ಪಡೆದು ಉತ್ತಮ ರೀತಿಯಲ್ಲಿ ಬೆಳೆ ಬೆಳೆದರೆ ಅಧಿಕ ಇಳುವರಿ ಸಾದ್ಯ ಎಂದ ಅವರು ಮಹಾಲಿಂಗಪುರದಲ್ಲಿ ಸಿಗುವ ತಳಿಯಿಂದ ಒಂದು ಎಕರೆಗೆ 100 ಟನ್ ಬೆಳೆದ ನೂರಾರು ಉಧಾಹರಣೆಗಳಿವೆ. ರೈತರು ಹೆಚ್ಚಿನ ಮಾಹಿತಿ ಪಡೆದು ಜಾಗೃತರಾಗಿ ಕಬ್ಬಿನ ಇಳುವರಿ ಪಡೆಯುವತ್ತ ಗಮನ ಹರಿಸಬೇಕು ಎಂದರು.

ಆತ್ಮ ಯೋಜನೆಯ ಡಾ. ಎಂ.ಬಿ.ಪಟ್ಟಣಶೆಟ್ಟಿ,ರೈತರಾದ ರಾಜಶೇಖರ ನಿಂಬರಗಿ ಮಾತನಾಡಿ ಇಂಡಿಯ ನಿಂಬೆ ಈಗಾಗಲೇ ಜಿಯೋಗ್ರಾಫಿಕಲ್ ಐಡೆಂಟಿಟಿ ಪಡೆದಿದ್ದು ರೈತರು ನಿಂಬೆ ಬೆಳೆಯ ಕುರಿತು ಮಾಹಿತಿ ನೀಡಿದರು.
ಸಭೆಯಲ್ಲಿ ಪ್ರಗತಿಪರ ರೈತರಾದ ಹಲಸಂಗಿಯ ಅಶೋಕ ಬಿಂದುರಾವ ಕುಲಕರ್ಣಿ, ಶ್ರೀಮತಿ ಲಕ್ಷಿö್ಮÃ ಬಸಗೊಂಡ ಶಿರಮಗೊಂಡ, ಶ್ರೀಮತಿ ಭಾರತಿ ಅಶೋಕ ಮೆಂಡೆಗಾರ,ಭೀರಪ್ಪ ವಗ್ಗಿ ಇವರನ್ನು ಸನ್ಮಾನಿಸಲಾಯಿತು.
ಸಭೆಯಲ್ಲಿ ಬೆನಕನಹಳ್ಳಿ ಗ್ರಾ.ಪಂ ಅಧ್ಯಕ್ಷೆ ಕವಿತಾ ಭಜಂತ್ರಿ,ಅಥರ್ಗಾ ಗ್ರಾ.ಪಂ ಅಧ್ಯಕ್ಷ ನಾಗುಗೌಡ ಪಾಟೀಲ,ಕಾಶಿನಾಥ ಹಚಡದ, ರಾಯಗೊಂಡ ಅಂಕಲಗಿ,ಶಿವಪ್ಪ ಹೊನಕಟ್ಟಿ, ಸುನೀಲ ನಾರಾಯಣಕರ,ಐ.ಜಿ.ಕನ್ನೂರ,ಶಿವಾನಂದ ಜೋತೆಪೆನ್ನವರ, ಸಂದೀಪಗೌಡ ಪಾಟೀಲ, ವಿನಾಯಕ ಭೋಸಗಾ ಮತ್ತಿತರಿದ್ದರು.

Most Popular

To Top
error: Content is protected !!