Gummata Nagari

Bijapur

ವಕ್ಫ ಕಮೀಟಿ ನೂತನ ಸದಸ್ಯರಿಗೆ ಗೌರವ ಸನ್ಮಾನ

 

ಬಿಜಾಪುರ: ನಗರದ ಮನಗೂಳಿ ಅಗಸಿ ಹತ್ತಿರದ ಫತ್ಹೇ ದರವಾಜಾ ಮಸೀದಿ ಜಮಾತ್ ವತಿಯಿಂದ ವಕ್ಫ ಸಲಹಾ ಸಮಿತಿ ನೂತನ ಪದಾಧಿಕಾರಿಗಳು ಹಾಗೂ ಚಿನ್ನದ ಪದಕ ಪಡೆದ ಸಾಧಕರಿಗೆ ಸನ್ಮಾನ ಸಮಾರಂಭ ಜರುಗಿತು.

ಈ ಸಮಾರಂಭ ಉದ್ಘಾಟಿಸಿದ ಮಹಾನಗರ ಪಾಲಿಕೆಯ ಆಯುಕ್ತ ಬಿ.ಎ. ಸೌದಾಗರ ಮಾತನಾಡಿ, ಜ್ಞಾನಕ್ಕಿಂತ ಮಿಗಿಲಾದುದು ಯಾವುದು ಇಲ್ಲ ಎಲ್ಲ ಕಡೆ ಶಿಕ್ಷಣವಂತರಿಗೆ ಮಾತ್ರ ಬೆಲೆಯಿದ್ದು, ಪ್ರತಿಯೊಬ್ಬರೂ ಉತ್ತಮ ಶಿಕ್ಷಣವಂತರಾಗಿ ಸಮಾಜಮುಖಿ ಜೀವನ ರೂಪಿಸಿಕೊಳ್ಳಬೇಕು ಎಂದು ಮಹಾನಗರ ಪಾಲಿಕೆ ಆಯುಕ್ತ ಬಿ ಎ ಸೌದಾಗರ ಹೇಳಿದರು.

ಮುಖ್ಯ ಅತಿಥಿಗಳಾಗಿದ್ದ ಮಹಾನಗರ ಪಾಲಿಕೆ ಮಾಜಿ ಮೇಯರ್ ಸಜ್ಜಾದೆಪೀರಾ ಮುಶ್ರೀಫ್ ಹಾಗೂ ಜಿಲ್ಲಾ ವಕ್ಫ ಕಮೀಟಿಯ ಉಪಾಧ್ಯಕ್ಷ ಅಲ್ತಾಪ ಲಕ್ಕೂಂಡಿ ಮಾತನಾಡಿ, ನಮ್ಮ ಸಮಾಜದಲ್ಲಿ ಸಾಕಷ್ಟು ಶಿಕ್ಷಣದ ಕೊರತೆಯಿದೆ. ಒಂದೊತ್ತು ಊಟ ಕಡಿಮೆ ಮಾಡಿಯಾದರೂ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಸಬೇಕೆಂದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಜಿಲ್ಲಾ ವಕ್ಫ ಕಮೀಟಿ ನೂತನ್ ಚೇರಮನ್ ನಿಯಾಜ ಕೌಸರ್ ಇನಾಮದಾರ ನನ್ನ ಅಧಿಕಾರವಧಿಯಲ್ಲಿ ಜಿಲ್ಲಾ ವಕ್ಫ ಕಮೀಟಿ ವ್ಯವಸ್ಥೆಯನ್ನು ಬದಲಾಯಿಸುತ್ತೇನೆ. ಸರಕಾರದಿಂದ ಬರುವ ಸೌಲಭ್ಯಗಳನ್ನು ಅರ್ಹರಿಗೆ ತಲುಪಿಸಲು ಪ್ರಮಾಣಿಕ ಪ್ರಯತ್ನ ಮಾಡುತ್ತೇನೆ. ವಕ್ಫ್ ಆಸ್ತಿ ಸಂರಕ್ಷಣೆಗೆ ವಿಶೇಷ ಕಾಳಜಿ ವಹಿಸಿ ಮಾಡುತ್ತೇನೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಖ್ಯಾತ ನ್ಯಾಯವಾದಿ ಎ ಎಂ ತಾಂಬೋಳಿ ವಕ್ಫ ಆಸ್ತಿ ದೇವರ ಆಸ್ತಿಯಾಗಿದೆ. ಯಾರೊಬ್ಬರೂ ದುರುಪಯೋಗ ಪಡಸಿಕೊಳ್ಳಬಾರದು ಅದರ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕೆಂದರು.

ಕಾರ್ಯಕ್ರಮ ಸಂಘಟಕ, ದಿನಪತ್ರಿಕೆಗಳ ಸಂಪಾದಕರ ಸಂಘದ ಜಿಲ್ಲಾ ಅಧ್ಯಕ್ಷ ಇರಫಾನ್ ಶೇಖ ಪ್ರಸ್ತಾವಿಕವಾಗಿ ಮಾತನಾಡಿ, ಇಂತಹ ಕಾರ್ಯಕ್ರಮಗಳಿಂದ ಪ್ರತಿಯೊಬ್ಬರಲ್ಲಿ ಸಾಧಿಸಬೇಕೆಂಬ ಛಲ ಮೂಡುತ್ತದೆ ಎಲ್ಲರಿಗೂ ಜಾಗೃತಿಯಾಗಲಿ ಎಂದು ಆಯೋಜಿಸಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ವಕ್ಫ ಮಂಡಳಿಯ ಜಿಲ್ಲಾಧ್ಯಕ್ಷರಾದ ನಿಯಾಜ್ ಕಸರ್ ಅತ್ತಾರ, ಉಪಾಧ್ಯಕ್ಷರಾದ ಅಲ್ತಾಫ ಲಕ್ಕುಂಡಿ ಹಾಗೂ ದಿಲ್‌ಷಾದ್ ಬಣಗಾರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಶಿಕ್ಷಕ-ಸಾಹಿತಿ ಕಬೂಲ್ ಕೊಕಟನೂರ, ಗಣ್ಯರಾದ ನೂರಹಮ್ಮದ ಅತ್ತಾರ, ನ್ಯಾಯವಾದಿ ಅಸ್ಲಾಂ ಅತ್ತಾರ, ರಾಜೀವಗಾಂದಿ ಆರೋಗ್ಯ ವಿವಿಯಿಂದ ಚಿನ್ನದ ಪದಕ ಪಡೆದ ದಿಲಶಾದ್ ಬಣಗಾರ ಮಾತನಾಡಿದರು. ಆಶೀಫ ಬಣಗಾರ, ಮುದಸ್ಸರ ಖುರೇಶಿ, ಆಬಿದ್ ಇಮಾರತವಾಲೆ, ಶೈಕತ್ ಇನಾಮದಾರ, ರಶೀದ ಇನಾಮದಾರ, ಸಲೀಮ್ ಇನಾಮದಾರ, ಗಫೂರ ಇಮಾರತವಾಲೆ, ಮುನ್ನಾ ಮುಲ್ಲಾ, ಇಸಾಕ್ ಲಕ್ಕುಂಡಿ, ಅಪ್ಪು ನಾಗಠಾಣ, ಮೊಮೀನ್ ಸರ್, ಸಮದ ಮದಭಾವಿ, ರಹಿಮಾ ಮೊಮೀನ್, ಹಾಜಿ ಪಿಂಜಾರ, ಆಶೀಪ್ ಕನ್ನೂರ, ಹನೀಪ ಕನ್ನೂರ, ಬಿಸ್ಮಿಲ್ಲಾ ಲಕ್ಕುಂಡಿ, ಚಾಂದ ಮುಲ್ಲಾ, ಗುಡುಲಾಲ ಟುಬಾಕೆ ಸೇರಿದಂತೆ ವಾರ್ಡಿನ ಹಿರಿಯರು, ಮಹಿಳೆಯರು, ಸಾರ್ವಜನಿಕರು ಪಾಲ್ಗೊಂಡಿದ್ದರು.

Most Popular

To Top
error: Content is protected !!