Gummata Nagari

Bijapur

ಛಲ ಬಿಡದೆ ಪದವಿ ಜೊತೆಗೆ ಚಿನ್ನದ ಪದಕ ಪಡೆದ ಲಕ್ಷ್ಮಿ ಬಾಗಲಕೋಟ

 

ದೇವರಹಿಪ್ಪರಗಿ: ಬಿಜಾಪುರ ಜಿಲ್ಲೆ ಬರಗಾಲ ನಾಡಾದರೂ ಪ್ರತಿಭೆಗಳಿಗೇನು ಕೊರತೆಯಿಲ್ಲ. ಸಾಧಿಸುವ ಛಲದಿಂದ ಹಟಕೆ ಬಿದ್ದು, ಉನ್ನತ ಪದವಿಯ ಜೊತೆಗೆ ಚಿನ್ನದ ಪದಕ ಪಡೆದು ಕೀರ್ತಿ ತಂದ ಲಕ್ಷ್ಮಿ ಅಣ್ಣಾರಾಯ ಬಾಗಲಕೋಟ ಯುವಜನತೆಗೆ ಮಾದರಿಯಾಗಿದ್ದಾಳೆ.
ಮೂಲತಃ ಬಿಜಾಪುರ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಚಿಕ್ಕರೂಗಿ ಗ್ರಾಮದ ಯುವತಿ ಲಕ್ಷ್ಮಿ  ಅಣ್ಣಾರಾಯ ಬಾಗಲಕೋಟ ಅಪ್ಪಟ ಗ್ರಾಮೀಣ ಪ್ರತಿಭೆ. ಸಾಧಿಸುವ ಛಲದಿಂದ ಕೃಷಿ ಕುಟುಂಬದಿoದ ಬಂದರೂ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ಅಧ್ಯಯನ ಆಯ್ಕೆ ಮಾಡಿಕೊಂಡು ಸಾಧಕಿಯಾಗಿದ್ದಾರೆ. ಗ್ರಾಮೀಣ ಭಾಗದಲ್ಲಿ ಪತ್ರಿಕೆ ಸಮೂಹ ಸಂವಹನ ಕುರಿತು ಮಾಹಿತಿ ಇಲ್ಲದ ದಿನಗಳಲ್ಲಿಯೂ ಚಾಲೆಂಜ್ ಆಗಿ ತೆಗೆದುಕೊಂಡು ಬಿಜಾಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಪತ್ರಿಕೋಧ್ಯಮ ವಿಭಾಗದಲ್ಲಿ ಎರಡು ಚಿನ್ನದ ಪದಕ ಪಡೆದಿರುವುದು ಶ್ಲಾಘನೀಯವಾಗಿದೆ.

ಪಿಯುಸಿಯಲ್ಲಿ ಫೇಲ್, ಪದವಿಯಲ್ಲಿ ಚಿನ್ನದ ಪದಕ
ಲಕ್ಷ್ಮಿ ಬಾಗಲಕೋಟ ಹುಟ್ಟುರಾದ ಚಿಕ್ಕರೂಗಿಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಮುಗಿಸಿ, ಪಿಯುಸಿಗೆಂದು ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿ ಹೋಗಿದ್ದರು. ಆದರೆ ಪಿಯುಸಿಯಲ್ಲಿ ಫೇಲಾದಾಗ. ತಂದೆ ಅಣ್ಣಾರಾಯ ಬಾಗಲಕೋಟ, ಮುಂದಿನ ಶಿಕ್ಷಣ ಸಾಕು ಮನೆಗೆಲಸ ಮಾಡುತ್ತ ಇರು ಎಂದಾಗ ಹಟ ಹಿಡಿದು, ಅಪ್ಪನ ಆಕ್ಷೇಪದ ಮಧ್ಯೆಯೂ ಪಿಯುಸಿ ಪಾಸಾಗಿ ಬೆಂಗಳೂರಿನ ಬಿಎಮ್‌ಎಸ್ ಕಾಲೇಜಿನಲ್ಲಿ ಬಿಎ ಓದಿ ಛಲ ಬಿಡದೆ ಬಿಜಾಪುರದ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿವಿಯಲ್ಲಿ ಸ್ನಾತಕ್ಕೋತ್ತರ ಪದವಿ ಪಡೆದರು. ಅದೂ ಚಿನ್ನದ ಪದಕ ಪಡೆಯುವುದರೊಂದಿಗೆ ರ‍್ಯಾಂಕ ಗಳಿಸಿ ಕೀರ್ತಿ ತಂದರು. ಕಳೆದ 6 ವರ್ಷಗಳ ಹಿಂದೆ ಅಕಾಲಿಕ ಮರಣದಿಂದ ತಂದೆಯನ್ನು ಕಳೆದುಕೊಂಡ ಲಕ್ಷ್ಮಿ ಬಾಗಲಕೋಟ ಸಾಧನೆ ನೋಡಲು ಅಪ್ಪ ಇಲ್ಲ ಎನ್ನುವ ಕೊರಗು ಕಾಡುತ್ತಿರುವುದು ಕಂಡು ಬಂತು.
ಸಾಧನೆಗಾಗಿ ಪತ್ರಿಕೋಧ್ಯಮ ವಿಭಾಗವೇ ಸಾಕ್ಷಿ:
ಇತ್ತೀಚಿನ ದಿನಗಳಲ್ಲಿ ಪತ್ರಿಕೋಧ್ಯಮ ಎನ್ನುವುದು ಅಷ್ಟೊಂದು ಸುಲಭವಲ್ಲದ ಅಧ್ಯಯನವಾಗಿದೆ. ಅದರಲ್ಲೂ ಕೃಷಿ ಕುಟುಂಬದಿoದ ಬಂದು ಪತ್ರಿಕೋಧ್ಯಮ ಆಯ್ದುಕೊಳ್ಳುವುದೆಂದರೆ ಸಾಮಾನ್ಯ ಮಾತಲ್ಲ. ಎಷ್ಟೇ ಸಂಕಷ್ಟ ಬಂದರೂ ಎದುರಿಸಬೇಕೆಂಬ ಛಲದಿಂದ ತಂದೆ ಕಳೆದುಕೊಂಡ ದುಖಃದಲ್ಲಿಯೇ ತನ್ನ ತಾಯಿಯ ತವರಲ್ಲಿದ್ದುಕೊಂಡು ಸೋಧರಮಾವನ ಸಲಹೆಯಂತೆ ಪತ್ರಿಕೋಧ್ಯಮದಲ್ಲಿ ಉನ್ನತ ಶಿಕ್ಷಣದೊಂದಿಗೆ ಚಿನ್ನದ ಪದಕ ಪಡೆದಿರುವುದು ಸ್ವಾತಂತ್ರ್ಯ ಚಳುವಳಿಯಲ್ಲಿ 20 ಜನ ಸ್ವಾತಂತ್ರ್ಯ ಯೋಧರ ನೀಡಿದ ಚಿಕ್ಕರೂಗಿಯ ಹೆಮ್ಮೆಯ ಕುವರಿಯಾಗಿದ್ದಾಳೆ.
ಸಧ್ಯ ಬೆಂಗಳೂರಿನಲ್ಲಿ ಖಾಸಗಿ ವಾಹಿನಿಯಲ್ಲಿ ವರದಿಗಾರ್ತಿಯಾಗಿರುವ ಲಕ್ಷಿö್ಮÃ ಬಾಗಲಕೋಟ ಸಾಧನೆಗೆ ಛಲವೊಂದಿದ್ದರೆ ಸಾಕು ಅವಕಾಶಗಳು ಹುಡುಕಿಕೊಂಡು ಬರುತ್ತವೆ ಎಂಬುದಕ್ಕೆ ಸಾಕ್ಷಿಯಾಗಿದ್ದಾಳೆ. ಪಿಯುಸಿಯಲ್ಲಿ ಫೇಲ್ ಆದರೂ ಚಲಬಿಡದೆ ಪದವಿಯಲ್ಲಿ ಚಿನ್ನದ ಪದಕ ಪಡೆದಿರುವುದು ಸೋಜಿಗದ ಸಂಗತಿಯಾಗಿದೆ.

ಅಪ್ಪನ ಆಕ್ಷೇಪದ ಮಧ್ಯೆಯೂ ಉನ್ನತ ಶಿಕ್ಷಣ ಪಡೆದು ಇಂದು ಚಿನ್ನದ ಪದಕ ಪಡೆದಿರುವುವೆ. ಆದರೆ ಈ ಸಂತೋಷ ನೋಡಲು ಅಪ್ಪನೇ ಇಲ್ಲ ಎಂಬ ಕೊರಗು ಕಾಡುತ್ತಿದೆ. ನನ್ನ ಈ ಸಾಧನಗೆ ಅಮ್ಮ ಪದ್ಮಾ ಅಣ್ಣಾರಾಯ ಬಾಗಲಕೋಟ, ಸಹೋಧರ ಶ್ರೀಧರ ಬಾಗಲಕೋಟ ತಂಗಿ ಗಂಗಾ ಸಾಥ ನೀಡಿದ್ದಾರೆ. ನನ್ನೀ ಸಾಧನೆಯ ಚಿನ್ನದ ಪದಕಗಳನ್ನು ಅಪ್ಪನಿಗೆ ಅರ್ಪಿಸುತ್ತೇನೆ. ಯುವಜ ಜನತೆ ನಿರಂತ ಓದಿನಿಂದ ಸಾಧನೆ ಮಾಡಬಹುದು ಎನ್ನುತ್ತಾರೆ ಲಕ್ಷಿö್ಮÃ ಅಣ್ಣಾರಾಯ ಬಾಗಲಕೋಟ

Most Popular

To Top
error: Content is protected !!