Gummata Nagari

Bijapur

ನೇಹಾ ಹತ್ಯೆ ಖಂಡಿಸಿ ಬಿಜೆಪಿಯಿಂದ ಬೃಹತ್ ಪ್ರತಿಭಟನೆ

ಬಿಜಾಪುರ: ಹುಬ್ಬಳ್ಳಿಯ ಹಿಂದೂ ಯುವತಿ ಕು.ನೇಹಾ ಹಿರೇಮಠ ಅವರ ಹತ್ಯೆ ಖಂಡಿಸಿ, ಆರೋಪಿಗೆ ಕಠಿಣ ಶಿಕ್ಷೆ ವಿಧಿಸಲು ಆಗ್ರಹಿಸಿ ಭಾರತೀಯ ಜನತಾ ಪಾರ್ಟಿ ವತಿಯಿಂದ ಇಂದು (ಸೋಮವಾರದಂದು) ಬೃಹತ್ ಪ್ರತಿಭಟನೆ ನಡೆಸಲಾಯಿತು.
ನಗರದ ಆರಾಧ್ಯದೈವ ಶ್ರೀ ಸಿದ್ದೇಶ್ವರ ದೇವಸ್ಥಾನ ಆವರಣದಿಂದ ಆರಂಭಗೊoಡ ರ್ಯಾಲಿ, ಮಹಾತ್ಮ ಗಾಂಧಿ ಚೌಕ್, ಬಸವೇಶ್ವರ ವೃತ್ತದ ಮಾರ್ಗವಾಗಿ ಡಾ.ಬಿ.ಆರ್.ಅಂಬೇಡ್ಕರ್ ವೃತ್ತಕ್ಕೆ ತೆರಳಿ ಪ್ರತಿಭಟನೆ ನಡೆಸಿ, ತಕ್ಷಣ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಆಗ್ರಹಿಸಿ, ಕಾಂಗ್ರೆಸ್ ಸರ್ಕಾರದ ಹಿಂದೂ ವಿರೋಧಿ ಧೋರಣೆ ಖಂಡಿಸಲಾಯಿತು. ನಂತರ ಜಿಲ್ಲಾಡಳಿಕ್ಕೆ ಮನವಿ ಸಲ್ಲಿಸಲಾಯಿತು.


ಮೆರವಣಿಯುದ್ದಕ್ಕೂ ಬೋಲೋ ಭಾರತ್ ಮಾತಾ ಕೀ ಜೈ, ಮತಾಂದ್ ಶಕ್ತಿಗಳಿಗೆ ಧಿಕ್ಕಾರ, ಹಿಂದೂ ವಿರೋಧಿ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ, ಬೇಜವಾಬ್ದಾರಿ ಹೇಳಿಕೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಸಚಿವರುಗಳಿಗೆ ಧಿಕ್ಕಾರ್ ಎಂಬಿತ್ಯಾದಿ ಘೋಷಣೆಗಳನ್ನು ಮೊಳಗಿಸಲಾಯಿತು.

ಪ್ರತಿಭಟನೆಯಲ್ಲಿ ಭಾಗವಹಿಸಿದ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ ಮಾತನಾಡಿ, ಅಮಾಯಕ ಹಿಂದೂ ಯುವತಿಯನ್ನು ಕೊಂದಿರುವ ಹೀನ ಕೃತ್ಯಕ್ಕೆ ಕಾರಣನಾದ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಲು ಕ್ರಮ ಕೈಗೊಳ್ಳುವ ಜೊತೆಗೆ ಯುವತಿಯ ಕುಟುಂಬದ ಜೊತೆಗೆ ರಾಜ್ಯ ಕಾಂಗ್ರೆಸ್ ಸರ್ಕಾರ ನಿಲ್ಲಬೇಕಿತ್ತು. ಆದರೆ, ಮುಖ್ಯಮಂತ್ರಿ ಆದಿಯಾಗಿ ಬಹುತೇಕ ಸಚಿವರು ಆಕಸ್ಮಿಕ, ವೈಯಕ್ತಿಕ ಘಟನೆ ಎಂದು ಬೇಜಾಬ್ದಾರಿ ಹೇಳಿಕೆ ನೀಡುವ ಮೂಲಕ ತನಿಖೆ ಹಾದಿ ತಪ್ಪಿಸುವ ಜೊತೆಗೆ ನೊಂದ ಕುಟುಂಬದ ತೇಜೋವಧೆ ಮಾಡುತ್ತಿರುವುದು ಖಂಡನೀಯ ಎಂದರು.

ಸ್ವತ ಯುವತಿಯ ಪಾಲಕರೇ ಕಾಂಗ್ರೆಸ್ ಧೋರಣೆಯನ್ನು ಖಂಡಿಸಿದ್ದಾರೆ. ಕಾಂಗ್ರೆಸ್‌ನ ಓಲೈಕೆ ರಾಜಕಾರಣದಿಂದಾಗಿ ರಾಜ್ಯದಲ್ಲಿ ಹಿಂದೂಗಳು ಭಯದಲ್ಲಿ ಜೀವನ ಮಾಡುವಂತಾಗಿದೆ. ಎಲ್ಲೆಂದರಲ್ಲಿ ದೇಶದ್ರೊಹಿ ಹೇಳಿಕೆ, ಘೋಷಣೆ ಕೇಳುತ್ತಿವೆ. ನಮ್ಮ ಯುವತಿಯರ ಮೇಲೆ ಅತ್ಯಾಚಾರ, ದೌರ್ಜನ್ಯ ಹೆಚ್ಚುತ್ತಿವೆ ಎಂದು ಕಿಡಿಕಾರಿದರು.

ಯುವ ಮುಖಂಡ ರಾಮನಗೌಡ ಪಾಟೀಲ ಯತ್ನಾಳ ಮಾತನಾಡಿ, ಅಮಾಯಕ ಯುವತಿಯನ್ನು ಹತ್ಯೆಗೈದಿರುವ ಘಟನೆ ಖಂಡನೀಯ. ಇಂತಹ ಹೀನ ಕೃತ್ಯ ವಿಚಾರದಲ್ಲಿ ರಾಜಕೀಯ ಮಾಡದೆ ಕಾಂಗ್ರೆಸ್ ಸರ್ಕಾರ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಇಂತಹ ಘಟನೆಗಳು ಮರುಕಳಿಸದಂತೆ ತಡೆಯಲು ರಾಜ್ಯದಲ್ಲಿ ಯೋಗಿ ಮಾದರಿಯ ಸರ್ಕಾರದ ಅವಶ್ಯಕತೆಯಿದೆ ಎಂದರು.

ಸAಸದ ರಮೇಶ ಜಿಗಜಿಣಗಿ, ಮಹಿಳಾ ಘಟಕದ ಅಧ್ಯಕ್ಷೆ ಸ್ವಪ್ನಾ ಕಣಮುಚನಾಳ ಮಾತನಾಡಿದರು.

ಮುಖಂಡರಾದ ಅರುಣ ಶಹಾಪುರ, ವಿಜುಗೌಡ ಪಾಟೀಲ, ಕಾಶುಗೌಡ ಬಿರಾದಾರ, ಸಂಜಯ ಪಾಟೀಲ ಕನಮಡಿ, ವಿವೇಕಾನಂದ ಡಬ್ಬಿ, ಶ್ರೀಹರ್ಷಗೌಡ ಪಾಟೀಲ, ಪ್ರಕಾಶ ಅಕ್ಕಲಕೋಟ, ಈರಣ್ಣ ರಾವುರ, ಸಾಬು ಮಾಶ್ಯಾಳ,ಉಮೇಶ್ ಕೊಳಕರ್ ಭೀಮಾಶಂಕರ್ ಹದ್ನೂರ್ ಗೋಪಾಲ್ ಘಟಕಂಬಳೆ, ನಗರ ಮಂಡಲ ಅಧ್ಯಕ್ಷ ಶಂಕರ ಹೂಗಾರ, ಮಹಾನಗರ ಪಾಲಿಕೆ ಸದಸ್ಯರಾದ ಶಿವರುದ್ರ ಬಾಗಲಕೋಟ, ಮಳುಗೌಡ ಪಾಟೀಲ, ಕಿರಣ ಪಾಟೀಲ, ವಿಠ್ಠಲ ಹೊಸಪೇಟ, ಶಿಲ್ಪಾ ಕುದುರಗೊಂಡ, ಗೀತಾ ಕುಗ್ನೂರ್ಸಿ, ದ್ದು ಬುಳ್ಳಾ,ಗುರುಲಿಂಗಪ್ಪ ಅಂಗಡಿ, ಬಸವರಾಜ ಬಿರಾದಾರ, ಮಲ್ಲಿಕಾರ್ಜುನ ಜೋಗೂರ, ಉಮೇಶ ಕೋಳಕೂರ, ಕೃಷ್ಣಾ ಗುನ್ನಾಳಕರ, ರಾಜೇಶ ತಾವಸೆ, ಮಂಜುನಾಥ ಮೀಸೆ, ಸಿದ್ದು ಬುಳ್ಳಾ, ಬಸವರಾಜ ಹೂಗಾರ, ಶೀತಲಕುಮಾರ ಓಗಿ ವಿಜಯ ಜೋಶಿ,ಪಾಪುಸಿಂಗ ರಜಪೂತ, ಭರತ ಕೋಳಿ, ಗಚ್ಚಿನ್ ಮಠ,ಲಕ್ಷ್ಮಿ ಕನ್ನೊಳ್ಳಿ ಮತ್ತಿತರರು ಇದ್ದರು.

Most Popular

To Top
error: Content is protected !!