Gummata Nagari

Bijapur

ಅಬಕಾರಿ ನಿಯಂತ್ರಣಕ್ಕೆ ಸಹಾಯವಾಣಿ ಆರಂಭ

ಬಿಜಾಪುರ: ಚುನಾವಣೆ ಸಮಯದಲ್ಲಿ ಅಕ್ರಮ ಮಧ್ಯ ಹಾಗೂ ಕಳ್ಳಭಟ್ಟಿ, ಸಾರಾಯಿ ತಯಾರಿಸಿ, ಸಂಗ್ರಹಿಸಿ, ಮಾರಾಟ ಮಾಡುವಂತಹ ಅಕ್ರಮಗಳು ಮಾಡುವ ಹಾಗೂ ಇಂತಹ ಕಳ್ಳ ಭಟ್ಟಿಯನ್ನು ಮತದಾರರಿಗೆ ಸರಬರಾಜು ಮಾಡುವ ಸಾಧ್ಯತೆ ಇದ್ದು, ಇವುಗಳನ್ನು ತಡೆಗಟ್ಟಲು ಅಬಕಾರಿ ಇಲಾಖೆ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಸಾರ್ವಜನಿಕರು ಮಾಹಿತಿ ನೀಡಲು 18004250461 ಸಹಾಯವಾಣಿ ಆರಂಭಿಸಲಾಗಿದೆ ಎಂದು ಅಬಕಾರಿ ಉಪ ಆಯುಕ್ತರು ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ನಕಲಿ ಮದ್ಯ ತಯಾರಿಕೆ, ಮಾರಾಟ ಮಾಡುವಂತಹ ಚಟುವಟಿಕೆಗಳು ತಮ್ಮ ವ್ಯಾಪ್ತಿ ಪ್ರದೇಶದ ಸುತ್ತ ಮುತ್ತ ಕಂಡುಬoದಲ್ಲಿ ಸಂಬAಧಪಟ್ಟ ಕಂಟ್ರೋಲ್ ರೂಮ್ ಟೋಲ್ ಫ್ರೀ ದೂರವಾಣಿ ಸಂಖ್ಯೆಗೆ ಸಾರ್ವಜನಿಕರು ಕರೆ ಮಾಡಿ ಮಾಹಿತಿ ನೀಡಬಹುದು ಮತ್ತು ಕಂಟ್ರೋಲ್ ರೂಮ್ ಹಾಗೂ ಸಹಾಯವಾಣಿಗೆ ಮಾಹಿತಿ ನೀಡುವವರ ವಿವರಗಳನ್ನು ಗೌಪ್ಯವಾಗಿ ಇಡಲಾಗುವುದು. ಚುನಾವಣೆ ಸಂದರ್ಭದಲ್ಲಿ ಮತದಾರರಿಗೆ ಹಂಚಲು ಅಥವಾ ಅಕ್ರಮ ಚಟುವಟಿಕೆಗಳನ್ನು ನಡೆಸಲು ಮಾಡುವ ಕಳಭಟ್ಟಿ ಸರಾಯಿ, ನಕಲಿ ಮದ್ಯ ತಯಾರಿಕೆ, ಸಂಗ್ರಹಣೆ ಮತ್ತು ಮಾರಾಟ ಮಾಡುವ ಕಾನೂನು ಬಾಹಿರ ಕೃತ್ಯಗಳ ಬಗ್ಗೆ ಸಾರ್ವಜನಿಕರು ಅಬಕಾರಿ ಇಲಾಖೆಗೆ ಮಾಹಿತಿ ನೀಡಬಹುದಾಗಿದಾಗಿದೆ.

ಸಾರ್ವಜನಿಕರ ಮಾಹಿತಿಗಾಗಿ ಅಧಿಕಾರಿಗಳ ಮತ್ತು ದೂರವಾಣಿ ಸಂಖ್ಯೆಗಳ ವಿವರ:
ಅಬಕಾರಿ ಉಪ ಆಯುಕ್ತರ ಕಚೇರಿ ವಿಜಯಪುರ:08352-244062, 9449597164, 9449597165, 9449597166, ಅಬಕಾರಿ ಉಪ ಅಧೀಕ್ಷಕರು ಬಿಜಾಪುರ ಉಪ ವಿಭಾಗ: 08352-252451, 9449597167, 9449597168, 8095736654, ಅಬಕಾರಿ ನಿರೀಕ್ಷಕರು ಬಿಜಾಪುರ ವಲಯ: 08352-254478, 9538608641, 9036645944,8970981551, ಅಬಕಾರಿ ನಿರೀಕ್ಷಕರು ಬಸವನ ಬಾಗೇವಾಡಿ ವಲಯ: 08358-295029, 9164856313, 9611199314, 9964230398, ಅಬಕಾರಿ ನಿರೀಕ್ಷಕರು ಮುದ್ದೇಬಿಹಾಳ ವಲಯ: 08356-222331, 9845638920, ಅಬಕಾರಿ ನಿರೀಕ್ಷಕರು ಇಂಡಿ ವಲಯ: 08359-222093, 9686824969, 9036645944, ಅಬಕಾರಿ ನಿರೀಕ್ಷಕರು ಸಿಂದಗಿ ವಲಯ: 8892163575, 9980182779, ಬಬಲೇಶ್ವರ: 8970981551, ದೇವರ ಹಿಪ್ಪರಗಿ: 9964230398 ಇವರನ್ನು ಸಂಪರ್ಕಿಸಬಹುದು ಎಂದು ಅಬಕಾರಿ ಉಪ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Most Popular

To Top
error: Content is protected !!