Gummata Nagari

Bijapur

ಬಿಜಾಪುರ: ಕಾರ್ಖಾನೆ ಬಂದ್ ಮಾಡಿಸಿಲ್ಲ ಎಂದು ಫ್ಯಾಕ್ಟರಿ ಮತದಾನ ಬಹಿಷ್ಕಾರದ ಎಚ್ಚರಿಕೆ

 

ಬಿಜಾಪುರ: ತಾಲೂಕಿನ ಮದಭಾವಿ ತಾಂಡಾ 1 ರ ಜನರು ಮುಂಬರುವ ಲೋಕಸಭಾ ಚುನಾವಣೆಗೆ ಮತದಾನ ಬಹಿಷ್ಕಾರ ಹಾಕಿದ್ದಾರೆ. ಸುಮಾರು 5 ಸಾವಿರಕ್ಕೂ ಆಧಿಕ ಜನಸಂಖ್ಯೆಯನ್ನು ಹೊಂದಿರೋ ತಂಡಾದಲ್ಲಿ, 3 ಸಾವಿರ ಮತದಾರರಿದ್ದಾರೆ. ಆದರೆ, ಈ ಬಾರಿಯ ಲೋಕಸಭಾ ಚುನಾವಣೆಗೆ ಮದಭಾವಿ ತಾಂಡಾದವರು ಮತದಾನ ಮಾಡಲ್ಲ ಎಂದು ಪಟ್ಟು ಹಿಡಿದಿದ್ದಾರೆ.

ಹೌದು, ಕಳೆದ 6 ವರ್ಷಗಳ ಹಿಂದೆ ಮದಭಾವಿ ತಾಂಡಾ 1 ರ ಅನತಿ ದೂರದಲ್ಲಿ ಮುಂಬೈ ಮೂಲದ ಹೆಸರಿರುವ ಉದ್ಯಮಿ, ಟೈರ್ ನಾಶ ಮಾಡಿ ಇತರೆ ರಾಸಾಯನಿಕ ಉತ್ಪಾದನೆ ಮಾಡುವ ಕಾರ್ಖಾನೆ ಸ್ಥಾಪಿಸಿದ್ದಾರೆ. ಈ ಕಾರ್ಖಾನೆಯಿಂದ ವಿಪರೀತ ಕೆಟ್ಟ ವಾಸನೆಯ ಜೊತೆಗೆ ಹೊಗೆ ಹೊರಬರುತ್ತಿದೆ.
ಇದರಿಂದ ಮದಭಾವಿ ತಾಂಡಾ 1 ಹಾಗೂ ಸುತ್ತಮುತ್ತಲಿನ ಜನರ ಆರೋಗ್ಯದ ಮೇಲೆ ಪರಿಣಾಮ ಬೀರಿದೆ. ವಿಷಕಾರಿ ಹೊಗೆಯ ಕಾರಣ ಜನರು ಪಾರ್ಶುವಾಯು, ಶ್ವಾಸಕೋಶದ ತೊಂದರೆ, ಹೃದಯ ಸ್ತಂಭನ, ಮಹಿಳೆಯರಲ್ಲಿ ಗರ್ಭಪಾತ ಸೇರಿದಂತೆ ಇತರೆ ರೋಗಗಳಿಂದ ಬಾಧಿತರಾಗಿದ್ದಾರೆ. ಮಕ್ಕಳು, ಮಹಿಳೆಯರು, ವೃದ್ದರು ಅನೇಕ ರೋಗಗಳಿಂದ ಬಳಲುವಂತಾಗಿದೆ. ಇಷ್ಟೆಲ್ಲ ಅವಾಂತರಕ್ಕೆ ಕಾರಣವಾದ ಈ ಕಾರ್ಖಾನೆಯನ್ನು ಬಂದ್ ಮಾಡಬೇಕೆಂದು ಕೆಲ ವರ್ಷಗಳಿಂದ ಜಿಲ್ಲಾಡಳಿತ ಸೇರಿದಂತೆ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ನಮ್ಮ ಆರೋಗ್ಯಕ್ಕೆ ಮಾರಕವಾಗಿರುವ ಕಾರ್ಖಾನೆ ಬಂದ್ ಮಾಡಿಸಿಲ್ಲ. ಹಾಗಾಗಿ ಕಾರ್ಖಾನೆ ಬಂದ್ ಮಾಡೋವರೆಗೂ ನಾವು ಲೋಕಸಭಾ ಚುನಾವಣೆ ಮತದಾನ ಬಹಿಷ್ಕಾರ ಹಾಕುತ್ತೇವೆ ಎಂದು ಇಡೀ ತಂಡಾದ ಜನರು ನಿರ್ಧಾರ ಮಾಡಿದ್ದಾರೆ.

ಅನಾರೋಗ್ಯಕ್ಕೆ ಕಾರಣವಾಗಿರುವ ಟೈರ್ ನಾಶ ಮಾಡುವ ಕಾರ್ಖಾನೆ ಮೇಲೆ ಜಿಲ್ಲಾಡಳಿತ, ಕೈಗಾರಿಕಾ ಇಲಾಖೆ ಆಧಿಕಾರಿಗಳು ಯಾವುದೇ ಕ್ರಮ ತೆಗೆದುಕೊಳ್ಳದಿರೋದಕ್ಕೆ ಜನರು ತೀವ್ರ ಅಸಮಾಧಾನವನ್ನು ಹೊರ ಹಾಕಿದ್ದಾರೆ. ಕಾರ್ಖಾನೆಯಿಂದ ನಮ್ಮ ಹಾಗೂ ಸುತ್ತಮುತ್ತಲಿನ ಜನರ ಆರೋಗ್ಯ ಅಷ್ಟೇಯಲ್ಲ, ಕೃಷಿಕರ ಬೆಳಗಳ ಮೇಲೂ ತೀವ್ರ ಪರಿಣಾಮ ಬೀರಿದೆ. ದ್ರಾಕ್ಷಿ ಸೇರಿದಂತೆ ತೋಟಗಾರಿಕೆ ಬೆಳೆಗಳು ಹಾಗೂ ಇತರೆ ಬೆಳೆಗಳು ವಿಷಪೂರಿತ ಹೊಗೆಯಿಂದ ಹಾಳಾಗಿವೆ. ಈ ಕುರಿತು ಆಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನೆವೇ ಇಲ್ಲವಾಗಿದೆ ಎಂದು ಇಲ್ಲಿಯ ಜನರು ಆಕ್ರೋಶವನ್ನು ಹೊರ ಹಾಕಿದ್ಧಾರೆ.

ಹತ್ತಾರು ಸಮಸ್ಯೆಗೆ ಕಾರಣವಾಗಿರುವ ಈ ಫ್ಯಾಕ್ಟರಿ ಮುಚ್ಚಿದ್ರೆ ಮಾತ್ರ ಮತದಾನ ಮಾಡುತ್ತೇವೆ. ಇಲ್ಲದಿದ್ದರೆ ನಮ್ಮೂರ ಒಳಗೆ ಯಾವ ಪಕ್ಷದ ಅಭ್ಯರ್ಥಿ, ಮುಖಂಡರನ್ನು ಅಧಿಕಾರಿಯನ್ನು ಬಿಡುವುದಿಲ್ಲ ಎಂದು ತಾಂಡಾದ ಜನರು ಲೋಕಸಭಾ ಚುನಾವಣಾ ಮತದಾನ ಬಹಿಷ್ಕಾರ ಹಾಕುವ ನಿರ್ಧಾರ ಮಾಡಿದ್ದಾರೆ.

Most Popular

To Top
error: Content is protected !!