Gummata Nagari

Headlines

ಆಂಧ್ರಪ್ರದೇಶದ ಹಸು ಬ್ರೆಜಿಲ್‌ನಲ್ಲಿ 40 ಕೋಟಿಗೆ ಮಾರಾಟ

 

ಆಂಧ್ರಪ್ರದೇಶ: ಜಾಗತಿಕ ಮಟ್ಟದಲ್ಲಿ ಜಾನುವಾರುಗಳ ಹರಾಜಿನಲ್ಲಿ ದಾಖಲೆಯೊಂದು ನಿರ್ಮಾಣವಾಗಿದೆ. ಈ ವಿದ್ಯಮಾನದಲ್ಲಿ ನೆಲೋರ್ ಹಸುವು ಹೆಗ್ಗುರುತಾಗಿ ರಾರಾಜಿಸಿದೆ. ಬ್ರೆಜಿಲ್‌ನಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ 40 ಕೋಟಿ ರೂಪಾಯಿ ಗಳಿಸುವ ಮೂಲಕ ಇದುವರೆಗೆ ಮಾರಾಟವಾದ ಅತ್ಯಂತ ದುಬಾರಿ ಹಸುವಾಗಿ ಇತಿಹಾಸ ನಿರ್ಮಿಸಿದೆ. ಈ ಹಸುವು ಜಾನುವಾರು ಉದ್ಯಮದಲ್ಲಿ ಉತ್ತಮ ಆನುವಂಶಿಕ ಗುಣಗಳ ಮಹತ್ವವನ್ನು ಎತ್ತಿ ಹಿಡಿಯುತ್ತದೆ. ಜೊತೆಗೆ ಅಸಾಧಾರಣ ಜಾನುವಾರು ತಳಿಶಾಸ್ತ್ರದಲ್ಲಿ ವೃದ್ಧಿಸುತ್ತಿರುವ ಮೌಲ್ಯವನ್ನು ಒತ್ತಿಹೇಳುತ್ತದೆ.

ಈ ನೆಲ್ಲೂರು ಹಸು ತಳಿಯು ಚಿತ್ರದಲ್ಲಿರುವಂತೆ ಪ್ರಕಾಶಮಾನವಾದ ಬಿಳಿ ತುಪ್ಪಳವನ್ನು ಹೊಂದಿದ್ದು, ಭುಜದ ಮೇಲಿರುವ ವಿಶಿಷ್ಟವಾದ ಗೂನು ಆಕೃತಿಗೆ ಹೆಸರುವಾಸಿಯಾಗಿದೆ. ಇದು ಆಂಧ್ರ ಪ್ರದೇಶದಲ್ಲಿ ಜನ್ಮ ಪಡೆದಿರುವುದು ಎಂಬುದು ಗಮನಾರ್ಹ. ಆದರೆ ಅದೀಗ ಬ್ರೆಜಿಲ್‌ನ ಅತ್ಯಂತ ಪ್ರಮುಖ ತಳಿಗಳಲ್ಲಿ ಒಂದಾಗಿದೆ. ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಹೆಸರನ್ನೇ ಈ ಈ ಜಾನುವಾರಿಗೂ ಇಡಲಾಗಿದ್ದು, ವೈಜ್ಞಾನಿಕವಾಗಿ ಬಾಸ್ ಇಂಡಿಕಸ್ ಎಂದು ವರ್ಗೀಕರಿಸಲಾಗಿದೆ. ಭಾರತದ ಮತ್ತೊಂದು ಸದೃಢ ವಂಶಸ್ಥ ಜಾನುವಾರು ಅಂದರೆ ಅದು ಒಂಗೋಲ್.

ಈ ನೆಲ್ಲೂರು ಹಸು ಕಳೆದ ವರ್ಷ ಹರಾಜಿನಲ್ಲಿ 35 ಕೋಟಿ ರೂಪಾಯಿ ಮೌಲ್ಯ ಪಡೆದಿತ್ತು. ಆಂಧ್ರ ಮೂಲದ ನೆಲ್ಲೂರು ತಳಿಯನ್ನು ಬ್ರೆಜಿಲ್ ದೇಶದಲ್ಲಿ ಸಂರಕ್ಷಿಸಿ, ತಳಿ ಅಭಿವೃದ್ಧಿ ಮಾಡಿ ಈ ಮೌಲ್ಯಕ್ಕೆ ತಂದಿದ್ದಾರೆ. ಬ್ರೆಜಿಲ್ ನಲ್ಲಿರುವ 23 ಕೋಟಿ ಹಸುಗಳಲ್ಲಿ ನೆಲ್ಲೂರು ತಳಿಯ 10 ಕೋಟಿ ಹಸುಗಳಿವೆ! ಅಲ್ಲಿ ಇದು ಮಾಂಸದ ತಳಿ. ಗುಜರಾತ್ ಮೂಲದ ಗೀರ್ ತಳಿ ಕೂಡ ಬ್ರೆಜಿಲ್ ನಲ್ಲಿ ಮಾಂಸಕ್ಕಾಗಿ ಜನಪ್ರಿಯ. ಈ ಒಚಿಡಿಚಿ Imoveis ಸಂತಾನ ಅಭಿವೃದ್ಧಿ ಕೆಲಸಕ್ಕೆ ಮೀಸಲು. ಭಾರತದ ಸಂವಿಧಾನದಲ್ಲೇ ದೇಸಿ ತಳಿ ಸಂರಕ್ಷಿಸಿ ಅಂತ ಬರೆದಿದ್ದಾರೆ. ಇನ್ನು ಭಾರತದ ತಳಿಗಳು ಬ್ರೆಜಿಲ್, ಅರ್ಜೆಂಟಿನ ಮುಂತಾದ ದೇಶಗಳಲ್ಲಿ ಸಂರಕ್ಷಣೆ-ಅಭಿವೃದ್ಧಿ ಆಗ್ತಿರೋದು ಅಲ್ಲಿನ ಸಂವಿಧಾನದ ನಿರ್ದೇಶನದಿಂದವೇ ಹೊರತು, ಧಾರ್ಮಿಕ ನಂಬಿಕೆಗಳಿAದಲ್ಲ ಎಂಬುದು ಗಮನಾರ್ಹ.

ಈ ಹಿಂದೆ 1868 ರಲ್ಲಿ ಮೊದಲ ಬಾರಿಗೆ ಬ್ರೆಜಿಲ್‌ನಲ್ಲಿ ಓಂಗೋಲ್ ಜೋಡಿಯನ್ನು ಪರಿಚಯ ಮಾಡಲಾಗಿ, ಅದು ಆ ದೇಶದಲ್ಲಿ ತಳಿಯ ಪ್ರಸರಣಕ್ಕೆ ನಾಂದಿಯಾಯಿತು. ನಂತರವೂ ಸಾಗಿಸಲಾದ ಈ ಹಸುಗಳು ಮುಂದೆ ಅದರ ಅಸ್ತಿತ್ವವನ್ನು ಮತ್ತಷ್ಟು ಹೆಚ್ಚಿಸಿದವು. ನೆಲ್ಲೂರು ತಳಿಯು ಬಿಸಿ ತಾಪಮಾನದಲ್ಲಿ ಅಭಿವೃದ್ಧಿ ಹೊಂದುವ ಸಾಮರ್ಥ್ಯ ಹೊಂದಿದೆ. ಅದರ ಪರಿಣಾಮಕಾರಿ ಚಯಾಪಚಯ ಮತ್ತು ಪರಾವಲಂಬಿ ಸೋಂಕುಗಳಿಗೆ ಪ್ರತಿರೋಧವನ್ನು ಹೊಂದಿದೆ. ಹಾಗಾಗಿ ಜಾನುವಾರು ಸಾಕಣೆದಾರರಿಂದ ಇದಕ್ಕೆ ಹೆಚ್ಚು ಬೇಡಿಕೆಯಿದೆ. ಗಿiಚಿಣiಟಿಚಿ-19 ಈIಗಿ ಒಚಿಡಿಚಿ Im಼veis ಈ ಅಪೇಕ್ಷಣೀಯ ಲಕ್ಷಣಗಳನ್ನು ಹೊಂದಿದೆ. ತನ್ನ ಆನುವಂಶಿಕ ಪ್ರಯೋಜನಗಳನ್ನು ಇದರಿಂದ ಹೆಚ್ಚಿಸಲು ಸಾಕಲಾಗುತ್ತಿದೆ.

ಈ ತಳಿಯ ಮಹತ್ವವು ಅದರ ವೈಯಕ್ತಿಕ ಮೌಲ್ಯವನ್ನು ಮೀರಿ ವಿಸ್ತರಿಸುತ್ತದೆ. ಭ್ರೂಣಗಳು ಮತ್ತು ವೀರ್ಯದ ರೂಪದಲ್ಲಿ ಅದರ ಆನುವಂಶಿಕ ಸಂತತಿಯನ್ನು ಉತ್ಪಾದಿಸುವ ನಿರೀಕ್ಷೆಯಿದೆ. ನೆಲ್ಲೂರು ತಳಿಯ ಒಟ್ಟಾರೆ ಸುಧಾರಣೆಗೆ ಇದು ಕೊಡುಗೆ ನೀಡುತ್ತದೆ. ಈ ನಿರೀಕ್ಷೆಯು ಹರಾಜಿನಲ್ಲಿ ಅದು ದಾಖಲೆಯ ಬೆಲೆ ಗಳಿಸಿರುವುದು ಸಾದರಪಡಿಸುತ್ತದೆ.

ತಳಿಯ ಈ ಹೆಚ್ಚಿನ ಬೆಲೆಯು ಅಂತರರಾಷ್ಟ್ರೀಯ ಜಾನುವಾರು ಮಾರುಕಟ್ಟೆಯ ಮೇಲೆ ಗಮನಾರ್ಹ ಪರಿಣಾಮಗಳನ್ನು ಬೀರುತ್ತದೆ. ಜೊತೆಗೆ ತಳಿಯ ಮೌಲ್ಯವನ್ನೂ ಒತ್ತಿಹೇಳುತ್ತಿದ್ದು, ವಿಶ್ವಾದ್ಯಂತ ಅದರ ಖ್ಯಾತಿಯನ್ನು ಹೆಚ್ಚಿಸುತ್ತದೆ. ನೆಲ್ಲೂರು ಹಸುಗಳು ಈಗಾಗಲೇ ಬ್ರೆಜಿಲ್‌ನ ಒಟ್ಟು ಹಸುವಿನ ಜನಸಂಖ್ಯೆಯ ಶೇ. 80 ರಷ್ಟನ್ನು ಒಳಗೊಂಡಿದೆ. ಕಳಪೆ-ಗುಣಮಟ್ಟದ ಮೇವಿನ ಮೇಲೆ ಅಭಿವೃದ್ಧಿ ಹೊಂದುವ ಸಾಮರ್ಥ್ಯ ಮತ್ತು ಅವುಗಳ ಸಂತಾನೋತ್ಪತ್ತಿಯ ಸುಲಭತೆಯಿಂದಾಗಿ, ಬ್ರೆಜಿಲ್‌ನ ವಿವಿಧ ಹವಾಮಾನಗಳಲ್ಲಿ ಸಾಕಣೆದಾರರಿಗೆ ಈ ತಳಿಯು ಪ್ರಾಯೋಗಿಕ ಆಯ್ಕೆಯಾಗಿದೆ ಎಂಬುದು ಗಮನಾರ್ಹವಾಗಿದೆ.

Most Popular

To Top
error: Content is protected !!