Gummata Nagari

Headlines

ಪಶ್ಚಿಮ ಬಂಗಾಳ: ಚುನಾವಣಾ ಪ್ರಚಾರಕ್ಕೆ ಎಡಪಕ್ಷಗಳ ಎಐ ಆ್ಯಂಕರ್

 

ಕೊಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಲೋಕಸಭೆ ಚುನಾವಣಾ ಪ್ರಚಾರಕ್ಕೆ ಎಡಪಕ್ಷಗಳು ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಂಡಿವೆ. ಸಿಪಿಎಂ ಬಂಗಾಳದ ಚುನಾವಣಾ ಮಾರುಕಟ್ಟೆಗೆ ಕೃತಕ ಬುದ್ಧಿಮತ್ತೆ ಆಧಾರಿತ ‘ಸಮತಾ’ವನ್ನು ತಂದಿದೆ. ‘ಸಮಾತಾ’ ಥೇಟ್ ಮಹಿಳೆಯಂತೆ ಕಾಣುತ್ತದೆ. ‘ಸಮತಾ’ ಅಂದರೆ ಬಂಗಾಳದ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ನ ಹೊಸ ಮುಖ.

ಚುನಾವಣಾ ದಿನಾಂಕ ಘೋಷಣೆಯ ಮುನ್ನಾದಿನದಂದು ಎಡಪಕ್ಷಗಳ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ನಲ್ಲಿ ‘ಸಮತಾ’ವನ್ನು ಮೊದಲು ಪರಿಚಯಿಸಲಾಯಿತು. 27 ಸೆಕೆಂಡುಗಳ ಮೊದಲ ಭಾಷಣದಲ್ಲಿ, ಎಡಪಕ್ಷದ ಕೃತಕ ಬುದ್ಧಿಮತ್ತೆಯ ಈ ಆಪರೇಟರ್ ಸಾಕಷ್ಟು ಪ್ರಭಾವ ಬೀರಿದೆ. ತನ್ನ ಚೊಚ್ಚಲ ಭಾಷಣದ ಮೊದಲ ಕೆಲವು ಗಂಟೆಗಳಲ್ಲಿ, ಎಡಪಂಥೀಯ ಈ ಹೊಸ ಂI ಆ್ಯಂಕರ್ ಸಾಮಾಜಿಕ ಮಾಧ್ಯಮದಲ್ಲಿ ಸಂಚಲನ ಸೃಷ್ಟಿಸಿತು. ಎಡಪಕ್ಷಗಳ ಸಾಮಾಜಿಕ ಹ್ಯಾಂಡಲ್‌ಗಳಲ್ಲಿ ಸಾಕಷ್ಟು ಪ್ರತಿಕ್ರಿಯೆಗಳು, ಕಾಮೆಂಟ್‌ಗಳು ಬಂದವು.
ಎಐ ಆ್ಯಂಕರ್
ಈ ಹೊಸ ಆ್ಯಂಕರ್‌ನ್ನು ಪರಿಚಯಿಸಿದ 27 ಸೆಕೆಂಡ್ ಗಳ ಆ ವಿಡಿಯೊದಲ್ಲಿ ‘ಸಮತಾ’ ರಾಜ್ಯದ ಜನತೆಗೆ ಅಭಿನಂದನೆ ಸಲ್ಲಿಸುವುದರ ಜೊತೆಗೆ ರಾಜಕೀಯದ ಬಗ್ಗೆಯೂ ಮಾತನಾಡಿದೆ. ಇದು ವಿದ್ಯಾರ್ಥಿ ರಾಜಕೀಯದ ಬಗ್ಗೆ ಮಾತನಾಡಿದೆ. ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದ ಯುನೈಟೆಡ್ ಲೆಫ್ಟ್ ಗೆಲುವು ಸಾಧಿಸಿದ್ದನ್ನು ಸಮತಾ ಹೇಳಿದೆ. ಸ್ಪಷ್ಟ ಬಂಗಾಳಿ ಭಾಷೆಯಲ್ಲಿ ಮಾತನಾಡಿದ ಸಮತಾ, ‘ಈ ವರ್ಷದ ಹೋಳಿ ಹಬ್ಬಕ್ಕೆ ನಮ್ಮ ಉಡುಗೊರೆ ಜೆಎನ್‌ಯುನಲ್ಲಿ ಎಡ ಪಕ್ಷ ಗುಂಪುಗಳ ಗೆಲುವು ಎಂದು ಹೇಳಿದೆ. ಲೋಕಸಭ ಚುನಾವಣೆಗಾಗಿ ಪಾದಾರ್ಪಣೆ ಮಾಡಿದ ಎಡಪಕ್ಷಗಳ ಈ ಹೊಸ ಎಐ ಆ್ಯಂಕರ್ , ಈಗ ಬಂಗಾ ಸಿಪಿಎಂನ ಫೇಸ್‌ಬುಕ್ ಹ್ಯಾಂಡಲ್ ಮತ್ತು ಯೂಟ್ಯೂಬ್ ಚಾನೆಲ್ ನಲ್ಲಿ ಕಾಣಿಸುತ್ತಿದೆ.

ಲೋಕಸಭೆ ಚುನಾವಣೆಗೆ ಒಂದು ತಿಂಗಳಿಗoತ ಕಡಿಮೆ ಸಮಯ ಉಳಿದಿದೆ. ಏಪ್ರಿಲ್ 19 ರಂದು ಮತದಾನ ಪ್ರಾರಂಭವಾಗುತ್ತದೆ. ಅದಕ್ಕೂ ಮುನ್ನ ಆಡಳಿತ ವಿರೋಧಿ ಪಕ್ಷಗಳೆಲ್ಲ ಬಿರುಸಿನ ಪ್ರಚಾರ ಆರಂಭಿಸಿವೆ. ಸಿಪಿಎಂ ಚುನಾವಣಾ ಕಣದಲ್ಲಿ ಯುವಕರತ್ತ ಹೆಚ್ಚಿನ ಗಮನ ಹರಿಸಿದೆ. ಸೃಜನ್, ದಿಪ್ಸಿತಾ, ಸೈಯನ್ನರನ್ನು ಮುಂದೆ ತರಲಾಗಿದೆ.
ಈ ಬಾರಿ ಎಡಪಕ್ಷಗಳು ತಂತ್ರಜ್ಞಾನ ಆಧಾರಿತ ಅಭಿಯಾನಗಳಿಗೆ ಹೆಚ್ಚಿನ ಗಮನ ನೀಡುತ್ತಿವೆ. ಂI-ಆಧಾರಿತ ಆ್ಯಂಕರ್ ಗಳು ಮತದಾನದ ಮೊದಲು ಸಾಮಾಜಿಕ ಹ್ಯಾಂಡಲ್‌ಗಳಲ್ಲಿ ಪ್ರಚಾರವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಎಡಪಕ್ಷಗಳ ಈ ಹೊಸ ಕೃತಕ ಬುದ್ಧಿಮತ್ತೆ ಬಂಗಾಳದ ಜನರ ಮೇಲೆ ಎಷ್ಟು ಪ್ರಭಾವ ಬೀರುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

Most Popular

To Top
error: Content is protected !!