Gummata Nagari

Headlines

ಬಿಜಾಪುರ ಜಿಲ್ಲಾ ವಕ್ಫ ಮಂಡಳಿಯ ನೂತನ ಪದಾಧಿಕಾರಿಗಳ ಅಧಿಕಾರ ಸ್ವಿಕಾರ

ಬಿಜಾಪುರ ಜಿಲ್ಲಾ ವಕ್ಫ ಮಂಡಳಿಯ ನೂತನ ಪದಾಧಿಕಾರಿಗಳ ಅಧಿಕಾರ ಸ್ವಿಕಾರ

ಬಿಜಾಪುರ: ಐತಿಹಾಸಿಕ ಬಿಜಾಪುರ ಜಿಲ್ಲೆಯ ವಕ್ಫ ಬೋರ್ಡ ಸಲಹಾ ಸಮಿತಿ ನೂತನ ಸದಸ್ಯರ ನೇಮಕ ಮಾಡಿ ರಾಜ್ಯ ಸರ್ಕಾರ ಆಧಿನದ ರಾಜ್ಯ ವಕ್ಫ ಮಂಡಳಿ ಆದೇಶ ಹೊರಡಿಸಿದೆ.
ನಗರದಲ್ಲಿನ ತಾಜ್ ಬಾವಡಿ ಆವರಣದಲ್ಲಿರುವ ವಕ್ಫ ಮಂಡಳಿಯ ಕಚೇರಿಯಲ್ಲಿ ಇಂದು ನಡೆದ ಸರಳ ಸಮಾರಂಭದಲ್ಲಿ ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳು ಜಿಲ್ಲಾ ವಕ್ಫ ಮಂಡಳಿಯ ಅಧಿಕಾರಿ ತಬಸೂಮ್ ಎಂ ಅವರಿಂದ ಅಧಿಕಾರ ಸ್ವಿಕಾರ ಮಾಡಿದರು.
ಸಮಿತಿಯ ಜಿಲ್ಲಾಧ್ಯಕ್ಷರಾಗಿ ಡಾ. ಕೌಸರ್‌ನಿಯಾಜ್ ಅತ್ತಾರ್, ಉಪಾಧ್ಯರಾಗಿ ವಕೀಲರಾದ ಯಾಸೀನ್ ಇನಾಮದಾರ, ಮುನಿರ್ ಅಹಮದ್ ಕಾಲೆಬಾಗ್, ವಕೀಲ ಸಮದ್ ಸುತಾರ್, ಬಸಿರ್ ಶೇಠ ಬೇಪಾರಿ, ಮಹಮ್ಮದ್ ಅಲ್ತಾಫ್ ಲಕ್ಕುಂಡಿ, ಸೈಯ್ಯದ ಶಕಿಲ್‌ಅಹೆಮದ್ ಖಾಜಿ, ಹಮ್ಜಾಹುಸೇನ್ ಇರಾನಿ, ಮಹಮ್ಮದ್ ಪಟೇಲ ಬಿರಾದಾರ, ಸದಸ್ಯರಾಗಿ ಸೈಯ್ಯದ ಇಮ್ರಾನ್ ಜಾಗಿರದಾರ, ಫಾರುಕ್ ಕಲಾದಗಿ, ಜಮೀರ್ ಡಾಂಗೆ, ಬಾಬಾ ಇಮಾರತವಾಲೆ, ಅಲ್ಲಾಭಕ್ಷ ಕಾಖಂಡಕಿ, ವಕೀಲ ಡಿ.ಎಸ್. ಮುಲ್ಲಾ, ವಕೀಲ ಡಿ.ಎಸ್. ಖಾಜಿ, ಅಬ್ದುಲ್‌ಹಮೀದ್ ಹಾಜಿ, ವಕೀಲ ಎ.ಡಿ. ಅಬ್ದುಲ್‌ರಜಾಕ್, ಅಮೀರ್ ಶೇಖ ಇವರು 3 ವರ್ಷಗಳ ಅವಧಿಗೆ (ಮುಂದಿನ ಆದೇಶದ ವರೆಗೆ) ನೇಮಕ ಮಾಡಿ ಆದೇಶಿಸಲಾಗಿದೆ.
ಈ ಅಧಿಕಾರ ಸ್ವಿಕಾರ ಸಮಾರಂಭದಲ್ಲಿ ಕೆಲ ಉಪಾಧ್ಯಕ್ಷರು ಹಾಗೂ ಕೆಲ ಸದಸ್ಯರು ಗೈರು ಹಾಜರಾಗಿ ಉಳಿದರು.
ನೂತನ ಅಧ್ಯಕ್ಷರಾಗಿ ಕೌಸರ್‌ನಿಯಾಜ್ ಅತ್ತಾರ್ ಅಧಿಕಾರ ಸ್ವಿಕರಿಸಿ ಮಾತನಾಡಿ, ಜಿಲ್ಲೆಯ ಧಾರ್ಮಿಕ ಕೇಂದ್ರಗಳಾದ ಮಸೀದಿಗಳು, ದರ್ಗಾಗಳು ಮತ್ತು ಕಬರಸ್ಥಾನಗಳ ರಕ್ಷಣೆ ಹಾಗೂ ಅಭಿವೃದ್ಧಿಯೇ ನನ್ನ ಪ್ರಥಮ ಆದ್ಯತೆಯಾಗಿದೆ. ವಕ್ಫ ಆಸ್ತಿ ದೇವರ ಆಸ್ತಿ, ಈ ಆಸ್ತಿಯನ್ನು ಉಳಿಸುವಲ್ಲಿ ಸಮಿತಿ ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರು ಮುಂದಿನ ದಿನಗಳಲ್ಲಿ ನನಗೆ ಸಹಕಾರ ನೀಡಲಿದ್ದಾರೆ ಎಂದು ಭರವಸೆ ವ್ಯಕ್ತಪಡಿಸಿದರು.
ವಕ್ಫ ಮಂಡಳಿಯ ಅಧಿಕಾರಿ ಮೊಹಸಿನ್ ಜಮಖಂಡಿ, ಮಾಜಿ ವಕ್ಪ ಅಧ್ಯಕ್ಷ ಇಂತಿಕಾಬ್ ಇಂಡಿಕರ್, ಪೀರ ಪಟೆಲ್ ಮುಂತಾದವರು ಉಪಸ್ಥಿತರಿದ್ದರು.

 

Most Popular

To Top
error: Content is protected !!