Gummata Nagari

Headlines

ಆರೋಗ್ಯ ಕೇಂದ್ರ ಎದುರೆ ಕಸದ ರಾಶಿ

ಆರೋಗ್ಯ ಕೇಂದ್ರ ಎದುರೆ ಕಸದ ರಾಶಿ

ವರದಿ : ಚನ್ನಬಸಪ್ಪ. ಬಿ. ದೊಡ್ಡಮನಿ

ಶಹಾಪುರ : ಉತ್ತಮ ಆರೋಗ್ಯದ ನಿರೀಕ್ಷೆಯಿಂದ ಆರೋಗ್ಯ ಕೇಂದ್ರಕ್ಕೆAದು ಬರುವ ಜನಸಾಮಾನ್ಯರಿಗೆ ಕಸದ ಗುಂಪು, ಮದ್ಯ ಬಾಟಲಿಗಳು, ದುರ್ವಾಸನೆ ಮತ್ತು ಹಂದಿಗಳು ಸ್ವಾಗತ ಕೋರುತ್ತಿವೆ.

ತಾಲ್ಲೂಕಿನ ದೊರನಹಳ್ಳಿ ಗ್ರಾಮದ ಕೇಂದ್ರಭಾಗದಲ್ಲಿರುವ ಆರೋಗ್ಯ ಮತ್ತು ಸೌಖ್ಯಕೇಂದ್ರದ ಸುತ್ತಲೂ ಕಸ ಹಾಕುವುದು, ಶೌಚ ಮಾಡುವುದು, ಹಂದಿಗಳು ಹೋಡಾಟದ ಜೊತೆಗೆ ಮದ್ಯಪಾನ ಮಾಡುವ ಕಾರಣ ಕಲುಷಿತ ವಾತಾವರಣ ಶೃಷ್ಟಿಯಾಗಿದ್ದು, ಸಾಂಕ್ರಾಮಿಕ ರೋಗ ಹಾಗೂ ಮಾರಕ ಕಾಯಿಲೆಗಳು ಆರೋಗ್ಯ ಕೇಂದ್ರಕ್ಕೆ ಬರುವ ಗರ್ಭಿಣಿಯರಿಗೆ, ಶಿಶುಗಳಿಗೆ ಮತ್ತು ಹಿರಿಯ ನಾಗರಿಕರಿಗೆ ಅಂಟುವ ಸಾಧ್ಯತೆಯಿದೆ.ಆರೋಗ್ಯ ಕೇಂದ್ರಕ್ಕೆ ಸ್ವಚ್ಛ ಸುಂದರ ವಾತಾವರಣ ಶೃಷ್ಠಿಸಬೇಕಾದ ದೊರನಹಳ್ಳಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಮಾರಕ ಕಾಯಿಲೆಗಳ ಆಹ್ವಾನಕ್ಕೆ ಸಾಕ್ಷಿಯಾಗುತ್ತಿದೆ.

ಇಲ್ಲಿಯ ಅಂಗಡಿ ಮುಗ್ಗಟ್ಟುಗಳು, ಎಳೆನೀರು ಮಾರಾಟಗಾರರು, ಬೇಕರಿಯವರು,ಹೋಟೆಲ್, ಮತ್ತು ಸುತ್ತಲಿನ ಸಾರ್ವಜನಿಕರು ಆರೋಗ್ಯ ಕೇಂದ್ರದ ಹತ್ತಿರ ಕಸ ಬಿಸಾಕುತ್ತಾರೆ. ಸ್ವಚ್ಛತೆಯ ಕುರಿತು ಅರಿವು ಮೂಡಿಸಿ, ಸ್ವಚ್ಛ ಪರಿಸರ ನಿರ್ಮಿಸಬೇಕಾದ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಕಣ್ಣುಮುಚ್ಚಿ ಕುಳಿತಿದೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.

ಆರೋಗ್ಯ ಕೇಂದ್ರದ ಸುತ್ತಲೂ ಕಾಂಪೌoಡ್ ನಿರ್ಮಾಣ ಮಾಡಿದಾಗ ಮಾತ್ರ ಕಸ ಬಿಸಾಕುವುದು, ಶೌಚ ಮಾಡುವುದು, ಹಂದಿಗಳ ಹಾವಳಿ, ಮತ್ತು ಕುಡುಕರ ಕಾಟದಿಂದ ಮುಕ್ತಿಯಾಗಲಿದೆ. ಸುತ್ತಲಿನ ಅಂಗಡಿ ಮಾಲೀಕರು ಮತ್ತು ಜನ ಸಾಮಾನ್ಯರು ಸ್ವಚ್ಛತೆಯ ಕುರಿತು ಅರಿಯಬೇಕು. ಮಕ್ಕಳ, ಗರ್ಭಿಣಿಯರ, ಹಿರಿಯರ ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿಯವರ ಆರೋಗ್ಯದ ಹಿತದೃಷ್ಟಿಯಿಂದ ಎಲ್ಲಂದರಲ್ಲಿ ಕಸ ಬಿಸಾಕಬಾರದು. ಇಷ್ಟೆಲ್ಲ ಸಮಸ್ಯೆಗಳಿಗೆ ಮೂಲ ಕಾರಣ ಕಾಂಪೌoಡ್ ಇಲ್ಲದೆ ಇರುವುದು, ಆದ್ದರಿಂದ ಕಾಂಪೌAಡ್ ನಿರ್ಮಿಸಿದರೆ ಮಾತ್ರ ಸಮಸ್ಯೆಗೆ ಪರಿಹಾರ ಸಾಧ್ಯ ಎಂದು ಗ್ರಾಮಸ್ಥರು ಆಗ್ರಹಿಸುತ್ತಿದ್ದಾರೆ.

ಹತ್ತಾರು ಬಾರಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಗಮನಕ್ಕೆ ತಂದರು ಯಾವುದೇ ಪ್ರಯೋಜನವಾಗಿಲ್ಲ, ಯಾರಾದರೂ ಮೇಲಾಧಿಕಾರಿಗಳ ಆಗಮನವಿದ್ದಾಗ ಮಾತ್ರ ಜೆಸಿಬಿ ಮೂಲಕ ಕಸ ವಿಲೇವಾರಿ ಮಾಡುತ್ತಾರೆ. ಸಂಜೆಯಾದರೆ ಸಾಕು ಕುಡುಕರ ಹಾವಳಿ ಜೋರಾಗಿ ಆರೋಗ್ಯ ಕೇಂದ್ರದ ಬಾಗಿಲು ಹತ್ತಿರ ಮತ್ತು ಸುತ್ತ ಮುತ್ತಲು ಮದ್ಯದ ಬಾಟಲಿ ಮತ್ತು ಗ್ಲಾಸ್ ಗಳ ರಾಶಿಯೇ ಬಿಸಾಕುವ ಜೊತೆಗೆ ಆರೋಗ್ಯ ಕೇಂದ್ರದ ಕಿಟಕಿ ಬಾಗಿಲುಗಳನ್ನು ಪುಡಿಯಾಗುತ್ತಿವೆ. ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು ಮೇಲಾಧಿಕಾರಿಗಳ ಗಮನಕ್ಕೆ ತಂದು ಆರೋಗ್ಯ ಕೇಂದ್ರ ಸುತ್ತಲೂ ಕಸ ಬಿಸಾಡುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ವಿಳಂಬ ಧೋರಣೆ ಅನುಸರಿಸಿದರೆ ಮಕ್ಕಳ , ಗರ್ಭಿಣಿಯರ ಮತ್ತು ಹಿರಿಯರ ಆರೋಗ್ಯದ ಹೊಣೆ ಅವರೇ ಹೊರಬೇಕಾಗುತ್ತದೆ ಎನ್ನುತ್ತಾರೆ ದೊರನಹಳ್ಳಿ ಗ್ರಾಮಸ್ಥ ನಿಂಗಪ್ಪ ಮೂಗಿನ್.

Most Popular

To Top
error: Content is protected !!