Gummata Nagari

Headlines

೬ನೇ ತರಗತಿ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ

 

ಬಿಜಾಪುರ: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧೀನದಲ್ಲಿರುವ ವಿಜಯಪುರದ ಅಫಜಲಪೂರ ಟಕ್ಕೆಯಲ್ಲಿರುವ ಸರ್ಕಾರಿ ಮುಸ್ಲಿಂ ವಸತಿ ಶಾಲೆಯಲ್ಲಿ ೨೦೨೪-೨೫ನೇ ಸಾಲಿಗೆ ೬ನೇ ತರಗತಿ ಆಂಗ್ಲ ಮಾಧ್ಯಮದ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
ಮುಸ್ಲಿಂ ೨ಬಿ ಸಮುದಾಯದ ಅಲ್ಪಸಂಖ್ಯಾತ ಬಡ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗುವುದು. ಆಸಕ್ತ ಅರ್ಹರು ಸೇವಾ ಸಿಂಧು https://sevasindhuservice.karnataka.gov.in ಪೋರ್ಟಲ್‌ನಲ್ಲಿ ನೇರವಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಸಲು ದಿನಾಂಕ : ೧೫-೦೩-೨೦೨೪ ಕೊನೆಯ ದಿನಾಂಕವಾಗಿದೆ.
ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧೀನದ ಮಾಹಿತಿ ಕೇಂದ್ರ ವಿಜಯಪುರ ಮೊ: ೮೧೨೩೭೧೦೭೬೬, ಇಂಡಿ ಮೊ: ೯೩೮೦೨೯೩೨೨೩, ಸಿಂದಗಿ ಮೊ: ೮೭೬೨೩೨೦೭೪೯, ಮುದ್ದೇಬಿಹಾಳ ಮೊ: ೮೭೨೨೪೪೫೫೫೨ ಹಾಗೂ ಬಸವನಬಾಗೇವಾಡಿ ಮೊ: ೯೯೭೨೩೪೦೭೨೧ ಹಾಗೂ ಶಾಲೆಯ ಪ್ರಾಂಶುಪಾಲರಾದ ಸಿದ್ಧರಾಮ ಎಂಟತ್ತ ಇವರಿಂದ ಮಾಹಿತಿ ಪಡೆದು, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ, ಅರ್ಜಿಯ ಒಂದು ಪ್ರತಿಯನ್ನು ಶಾಲೆಗೆ ಕಡ್ಡಾಯವಾಗಿ ಸಲ್ಲಿಸಬೇಕು ಎಂದು ಶಾಲೆಯ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

 

 

Most Popular

To Top
error: Content is protected !!