Gummata Nagari

Headlines

ಚಡಚಣದಲ್ಲಿ  ರಾಷ್ಟ್ರೀಯ ವಿಜ್ಞಾನ ದಿನಾಚರಣೆ

 

ಚಡಚಣ: ಪಟ್ಟಣದ ಸಂಗಮೇಶ್ವರ ಕಲಾ, ವಾಣಿಜ್ಯ, ವಿಜ್ಞಾನ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ವಿಜ್ಞಾನ ದಿನದ ನಿಮಿತ್ಯ ಪಾಲಿಮರ್ ನ್ಯಾನೊಕಾಂಪೊಸಿಟ್ಸ್ ಎಂಬ ಒಂದು ದಿನದ ಕಾರ್ಯಾಗಾರ ಹಮ್ಮಿಕೊಳ್ಳಲಾಯಿತು.
ಬಿಜಾಪುರ ನಗರದ ಸರ್ಕಾರಿ ಪ್ರಥಮ ದರ್ಜೆಯ ಕಾಲೇಜಿನ ಬೌತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಆನಂದ ಕುಲಕರ್ಣಿ ಮಾತನಾಡಿ, ಒಂದು ಪಾಲಿಮರ್ ಎಂಬುದು ಬಹುದೊಡ್ಡ ಅಣುಗಳನ್ನು ಒಳಗೊಂಡಿರುವ ಒಂದು ವಸ್ತು. ಇದು ಅನೇಕ ಪುನರಾವರ್ತಿತ ಉಪಘಟಕಗಳಿಂದ ಕೂಡಿದೆ. ಅವುಗಳ ವಿಶಾಲ ವರ್ಣಪಟಲದ ಗುಣಲಕ್ಷಣಗಳಿಂದಾಗಿ, ಸಂಶ್ಲೇಷಿತ ಮತ್ತು ನೈಸರ್ಗಿಕ ಪಾಲಿಮರ್‌ಗಳು ದೈನಂದಿನ ಜೀವನದಲ್ಲಿ ಅಗತ್ಯ ಮತ್ತು ಸರ್ವತ್ರ ಪಾತ್ರಗಳನ್ನು ನಿರ್ವಹಿಸುತ್ತವೆ ಎಂದರು.
ಆಡಳಿತಧಿಕಾರಿ ಎಸ್.ಎಸ್.ಚೋರಗಿ, ಪ್ರಾಚಾರ್ಯ ಡಾ. ಎಸ್.ಬಿ.ರಾಠೋಡ ನಮ್ಮ ಭಾರತ ದೇಶಕ್ಕೆ ವಿಜ್ಞಾನಿಗಳ ಕೊಡುಗೆ ಅಪಾರ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಐ.ಕ್ಯೂ.ಎ.ಸಿ.ಯ ಸಂಯೋಜಕÀ ಡಾ.ಎಸ್.ಎಸ್.ದೇಸಾಯಿ, ಗ್ರಂಥಪಾಲಕ ಎಂ.ಕೆ. ಬಿರಾದರ, ದೈಹಿಕ ಶಿಕ್ಷಣ ನಿರ್ದೇಶಕ ಎಸ್ ಎಸ್ ಅವಟಿ , ದಿವ್ಯಶ್ರೀ ಭೋಗಾರ, ಆಕಾಶ ಜಂಗಮಶೆಟ್ಟಿ, ಮುಚ್ಚಂಡಿ, ಅಣ್ಣಾರಾಯ ಪಾಟೀಲ ಪ್ರೊ.ಎ.ಎ.ಬಿಡೆಗಾರ, ಅಶ್ವೀನಿ ಹೀರೆಮಠ ಮುಂತಾದ ಸಿಬ್ಬಂದಿ ವರ್ಗ ಇದ್ದರು. ಬಸವರಾಜ ಯಳ್ಳೂರ ಕಾರ್ಯಕ್ರಮವನ್ನು ನಡೆಸಿಕೊಟ್ಟರು, ನೇಹಾ ಉಮರಾಣಿ ವಂದಿಸಿದರು.

Most Popular

To Top
error: Content is protected !!