Gummata Nagari

Bijapur

ಬಂಥನಾಳ ಶಿವಯೋಗಿಗಳ ಶಿಕ್ಷಣ ಕಾಳಜಿ ಸ್ಮರಣೀಯ: ಶಾಸಕ ಮನಗೂಳಿ

 

ತಾಂಬಾ: ಬಂಥನಾಳದ ಶಿವಯೊಗಿಗಳ ಶಿಕ್ಷಣದ ಬಗ್ಗೆ ಅಫಾರ ಕಾಳಜಿ ಹೋಂದಿದ ಶ್ರೀಗಳು 50 ವರ್ಷದ ಹಿಂದೆಯೆ ಶಿಕ್ಷಣದಿಂದ ಮಾತ್ರ ಅಭಿವೃದ್ಧಿ ಸಾದ್ಯ ಎಂದು ಬಲವಾಗಿ ನಂಬಿದ್ದ ಶ್ರೀಗಳು ಬರಗಾಲಕ್ಕೆ ತುತ್ತಾಗುತ್ತಿರುವ ಬಿಜಾಪುರ ಜಿಲ್ಲೆಯನ್ನು ಶಿಕ್ಷಣವಂತರನ್ನಾಗಿ ಮಾಡಿ ಬೆಳಕು ಚೆಲ್ಲಿದರು ಎಂದು ಸಿಂದಗಿ ಮತಕ್ಷೇತ್ರದ ಶಾಸಕ ಅಶೋಕ ಮನಗೂಳಿ ಹೇಳಿದರು.

ಸಮೀಪದ ಸುಕ್ಷೇತ್ರ ಬಂಥನಾಳದ ವೃಷಭಲಿಂಗೇಶ್ವರ ಸಂಸ್ಥಾನ ಮಠದಲ್ಲಿ ವೃಷಭಲಿಂಗೇಶ್ವರ ಶ್ರೀಗಳ ಸಾನಿಧ್ಯದಲ್ಲಿ ರಾಷ್ಟ್ರ ಧ್ವಜಾರೋಹಣ” ಮತ್ತು ಸಂಸ್ಕೃತಿ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿ, ಮನಸಿನ ಭಾವ ಕುಸುಮ ವಿಕಾಸಗೊಳ್ಳಲು ಧರ್ಮ ಗುರುಗಳ ಬೋಧನ ಅವಶ್ಯ. ಈ ದಿಶೆಯಲ್ಲಿ ಸಂಸ್ಕೃತಿ ತಳಹದಿ ಮೇಲೆ ನಿಂತಿರುವ ಧರ್ಮದ ತಿರುಳನ್ನು ಅರಿತು ನಡೆಯಬೇಕು. ಮನುಷ್ಯ ಜೀವನ ಜಂಜಾಟದಲ್ಲಿ ನಿತ್ಯ ಸಿಲುಕಿ ನಲುಗುತ್ತಿದ್ದಾನೆ. ಆದ್ದರಿಂದ ಶ್ರೀ ಮಠದಲ್ಲಿ ನಿತ್ಯ ನಡೆಯುವ ಪುರಾಣ, ಪ್ರವಚನ, ಕೀರ್ತನೆ, ಆಲಿಸಬೇಕು. ಬಂಥನಾಳದ ಶ್ರೀ ಸಂಗನಬಸವ ಶಿವಯೋಗಿಗಳು ಉತ್ತರ ಕರ್ನಾಟಕದಲ್ಲಿ ಶೈಕ್ಷಣಿಕ ಕ್ರಾಂತಿಗೆ ನಾಂದಿ ಹಾಡಿದರೆ ದೀಪ ತನ್ನನ್ನು ತಾನು ಸುಟ್ಟುಕೊಂಡು ಬೆರೆಯವರಿಗೆ ಬೆಳಕನ್ನು ನೀಡುತ್ತದೆ ಅದರಂತೆ ಬಂಥನಾಳದ ಶ್ರೀ ಸಂಗನಬಸವ ಶಿವಯೋಗಿಗಳು ದೀಪವಿದಂತೆ ಎಂದು ಶ್ರೀಗಳನ್ನು ಶ್ಲಾಂಘಿಸಿದರು.

ಕಾರ್ಯಕ್ರಮದ ನೂತನ ಚಾಣಕ್ಯ ಕರಿಯರ್ ಆಕಶಡೆಮಿ ಅಧ್ಯಕ್ಷ ಬಿ.ಡಿ.ಪಾಟೀಲ ಮಾತನಾಡಿ, 1923ರಲ್ಲಿ ಸ್ವಾತಂತ್ರ್ಯ ಚಳವಳಿ ಸಂದರ್ಭದಲ್ಲಿ ಕಾರ್ನಾಟಕದ ಗಾಂದಿ ಹರ್ಡೇಕರ್ ಮಂಜಪ್ಪನವರಿoದ ಬಂಥನಾಳ ಮಠದಲ್ಲಿ ಭಕ್ತ ಸಮುದಾಯದ ಸಮ್ಮುಖದಲ್ಲಿ ರಾಷ್ಟ್ರೀಯ ದೀಕ್ಷೆ ಸ್ವೀಕರಿಸಿದರು. ಇದೇ ಸಂದರ್ಭದಲ್ಲಿ ಗಾಂದಿ ಹರ್ಡೇಕರ್ ಸಂಗನಬಸವ ಶ್ರೀಗಳಿಂದ್ದ ಧರ್ಮ ದೀಕ್ಷೆ ಪಡೆದರು. ಅಂದಿನಿoದಲೂ ಶ್ರೀಗಳು ಖಾದಿ ವಸ್ತçಧಾರಿಗಳಾದರು. ಶ್ರೀ ಮಠದ ಕಾರ್ಯಕ್ರಮಕ್ಕೂ ಮುನ್ನ ರಾಷ್ಟ್ರ ಧ್ವಜಾರೋಹಣಕ್ಕೆ ಪ್ರಾಶಸ್ತ್ಯವಿಟ್ಟರು, ದೇಶಾಭಿಮಾನ ಮೂಡಿಸಿದರು ಎಂದು ಹೇಳಿದರು.
ಬಂಥನಾಳದ ಮಠದ ಪೀಠಾಧೀಶರಾದ ಶ್ರೀ ಡಾ. ವೃಷಭಲಿಂಗೇಶ್ವರ ಮಹಾಸ್ವಾಮೀಜಿ ಸಾನಿಧ್ಯವಹಿಸಿದ್ದರು. ಜಿಲ್ಲಾ ಪಂಚಾಯತ ಮಾಜಿ ಸದಸ್ಯ ಗುರುಲಿಂಗಪ್ಪಗೌಡ ಪಾಟೀಲ, ಸಿದ್ದನಗೌಡ ಪಾಟೀಲ್, ಯಮನಪ್ಪ ಜಾಲವಾದಿ, ಬಸಲಿಂಗಪ್ಪಗೌಡ ಪಾಟೀಲ್, ಮುತ್ತಪ್ಪ ಪೂಜಾರಿ, ಸಂಗನಗೌಡ  ಬಿರಾದಾರ, ಸಂಗು ಆಲಮೇಲ, ಸಿದ್ದು ಮುಂಡಿ, ಅನೇಕರು ಉಸ್ಥಿತಿರಿದ್ದರು.

Most Popular

To Top
error: Content is protected !!