Gummata Nagari

Headlines

ವಿಡಿಯೋ ಚಿತ್ರೀಕರಿಸಿದ್ದ ಯೂಟ್ಯೂಬರ್ ಬಂಧನ

ಬೆAಗಳೂರು: ಬೆಂಗಳೂರಿನ ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್ ವೇನಲ್ಲಿ ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊoಡಿದ್ದ ಯೂಟ್ಯೂಬರ್ ಪೊಲೀಸರು ನನ್ನು ಬಂಧಿಸಿದ್ದಾರೆ. ಯಲಹಂಕ ಮೂಲಕ ವಿಕಾಸ್ ಗೌಡ ಬಂಧಿತ ಯೂಟ್ಯೂಬರ್.

ವಿಕಾಸ ಗೌಡ ರನ್ ವೇನಲ್ಲಿ ವಿಡಿಯೋ ಮಾಡಿ ತನ್ನ ಯೂಟ್ಯೂಬ್‌ನಲ್ಲಿ ಅಪ್ಲೋಡ್ ಮಾಡಿದ್ದನು. ವಿಡಿಯೋದಲ್ಲಿ “ಟಿಕೆಟ್ ಇಲ್ಲದೆ ಒಳಗಡೆ ಬಂದಿದ್ದೇನೆ, 24 ಗಂಟೆ ರನ್ ವೇ ಬಳಿಯೇ ಇದ್ದೆ. ಎಲ್ಲ ಅಧಿಕಾರಿಗಳ, ಸಿಬ್ಬಂದಿ ಕಣ್ಣುತಪ್ಪಿಸಿ ವಿಮಾನ ನಿಲ್ದಾಣದ ಒಳಗೆ ಪ್ರವೇಶ ಮಾಡಿ, ವಿಡಿಯೋ ಮಾಡಿದ್ದೇನೆ” ಎಂದು ಹೇಳಿದ್ದನು. ಈ ವಿಡಿಯೋವನ್ನು ನೋಡಿದ ಸಿಐಎಸ್ಎಫ್ ಅಧಿಕಾರಿಗಳು ವಿಕಾಸಗೌಡ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಳಿಕ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಠಾಣೆ ಪೊಲೀಸರು ವಿಕಾಸ್‌ಗೌಡನನ್ನು ಬಂಧಿಸಿದ್ದಾರೆ.

ನoತರ ಪೊಲೀಸರು ವಿಚಾರಣೆ ನಡೆಸಿದಾಗ ” ವಿಮಾನದಲ್ಲಿ ಪ್ರಯಾಣಿಸಲು ಟಿಕೆಟ್ ಪಡೆದಿದ್ದೇನೆ. ಆದರೆ ಪ್ರಯಾಣಿಸದೆ ರನ್ ವೇನಲ್ಲೆ ಉಳಿದುಕೊಂಡೆ. ಸುಮಾರು 4-5 ಗಂಟೆಗಳ ಕಾಲ ಅಲ್ಲಿಯೇ ಇದ್ದು, ವಿಡಿಯೋ ಮಾಡಿಕೊಂಡು ಬಂದೆ ಎಂದು ಹೇಳಿದ್ದಾನೆ. ಸದ್ಯ ಈ ಬಗ್ಗೆ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Most Popular

To Top
error: Content is protected !!