Gummata Nagari

Headlines

ಅರಣ್ಯ ಇಲಾಖೆಯಿಂದ ರೈತರಿಗೆ ತೊಂದರೆ : ಆರೋಪ

 

ಶ್ರೀನಿವಾಸಪುರ: ಕಂದಾಯ ಮತ್ತು ಅರಣ್ಯ ಇಲಾಖೆಯ ಜಂಟಿ ಸರ್ವೆ ನಡೆದು ಅಂತಿಮ ವರದಿ ಸರ್ಕಾರಕ್ಕೆ ಬರುವ ತನಕ ಅರಣ್ಯ ಇಲಾಖೆಯವರು ರೈತರಿಗೆ ತೊಂದರೆ ಕೊಡಬಾರದು ಎಂದು
ಸರ್ಕಾರದ ಆದೇಶ ಇದ್ದರು, ಈ ಸೋಮವಾರ ಸರ್ಕಾರದ ಆದೇಶವನ್ನು, ಹೈಕೋರ್ಟ್ ಆದೇಶವನ್ನು ದಿಕ್ಕರಿಸಿದ್ದಾರೆ ಎಂದು ಪಿ.ಆರ್. ಸೂರ್ಯನಾರಾಯಣ ಆರೋಪಿಸಿದರು.

ಪಟ್ಟಣದ ಪೊಲೀಸ್ ಠಾಣೆಯಲ್ಲಿ ಸೋಮವಾರ ದೂರನ್ನು ಸಲ್ಲಿಸಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಶ್ರೀನಿವಾಸಪುರದ ವಲಯ ಅರಣ್ಯಾಧಿಕಾರಿ ಮತ್ತು ಇಪ್ಪತ್ತಕ್ಕೂ ಹೆಚ್ಚು ಸಿಬ್ಬಂದಿ ತಾಲೂಕಿನ ಕಸಬಾ ಹೋಬಳಿಯ ಪಾತಪಲ್ಲಿ, ದ್ವಾರಸಂದ್ರ, ಆರಮಾಕಲಹಳ್ಳಿ ಗ್ರಾಮಗಳ ವ್ಯಾಪ್ತಿಯಲ್ಲಿ ಈ ಹಿಂದೆ ಕಾನೂನು ಬಾಹಿರವಾಗಿ ರೈತರ ಮಾವಿನ ಮರಗಳನ್ನು ಕಡಿದು ತೆರುವು ಮಾಡಿದ್ದ ಭೂಮಿಯಲ್ಲಿ ಹಳೇ ಮರಗಳ ಬುಡಗಳನ್ನು ತೆಗೆದು ಹೊಸ ಗಣಿಗಳು ಹಾಕುತ್ತಿದ್ದ ಸಂದರ್ಭದಲ್ಲಿ ರೈತರು ಪ್ರತಿರೋಧ ವ್ಯಕ್ತಪಡಿಸಿದರು ಪ್ರಯೋಜನ ಆಗಲಿಲ್ಲ ಎಂದು ಆರೋಪಿಸಿದರು.

ನಂತರ ರೈತ ಸಂಘದ ಮತ್ತು ಭೂಮಿ ಹೋರಾಟ ಸಮಿತಿಯ ಗಮನಕ್ಕೆ ಬಂದು ಪಾತಕೋಟೆ ನವೀನ್ ಕುಮಾರ್, ಪಾಳ್ಯ ಗೋಪಾಲ್, ರೆಡ್ಡಪ್ಪ, ಪಾತಪಲ್ಲಿ ಎಂ.ಚೌಡರೆಡ್ಡಿ, ದ್ವಾರಸಂದ್ರ ಸಿ.ಮುನಿವೆಂಕಟಪ್ಪ, ಉಪ್ಪರಪಲ್ಲಿ ಚಲಪತಿ, ಕೇತಗಾನಹಳ್ಳಿ ನಾಗರಾಜ್ ಮುಂತಾದವರು ಪೋಲೀಸ್ ಠಾಣೆಯ ಪೊಲೀಸ್ ವೃತ್ತ ನಿರೀಕ್ಷಕರಿಗೆ ದೂರು ನೀಡಲಾಯಿತು.

ಸರ್ಕಲ್ ಇನ್ಸ್ಪೆಕ್ಟರ್ ಶ್ರೀ ಗೊರವನಕೊಳ್ಳ ಅರಣ್ಯಾಧಿಕಾರಿಗೆ ಪೋನ್ ಮಾಡಿ ಕೊಡಲೇ ಕೆಲಸ ಸ್ಥಗಿತ ಗೊಳಿಸಿ ಸಿಬ್ಬಂದಿಗಳನ್ನ ವಾಪಸ್ ಬರುವಂತೆ ಸೂಚನೆ ನೀಡಿದರು. ಸರ್ಕಾರದಲ್ಲಿ ಭೂಮಿ ಸಮಸ್ಯೆ ಇತ್ಯರ್ಥವಾಗುವತನಕ ಅರಣ್ಯ ಇಲಾಖೆಯವರು ಮತ್ತೆ ಪ್ರವೇಶಿಸಲು ಪ್ರಯತ್ನಿಸಿದರೆ ಪರಿಸ್ಥಿತಿ ಸರಿ ಇರುವುದಿಲ್ಲ ಎಂದು ಹೇಳಿದರು.”

 

Most Popular

To Top
error: Content is protected !!